ಐದು ಜನ ಶಿಕ್ಷಕಿಯರಿಗೆ ತಮ್ಮದೆ ಶಾಲೆಯ ಮುಖ್ಯ ಶಿಕ್ಷಕರಿಂದ ಮಾನಸಿಕ ಕಿರುಕುಳ!!ಯಾವುದು ಸತ್ಯ?ಯಾವುದು ಮಿತ್ಯ?
ಶಿಕ್ಷಕಿಯರಿಂದ ಸುಳ್ಳು ಆರೋಪ!!
ಪ್ರಕರಣ ಸಂಬಂಧಿಸಿದಂತೆ ಮುಖ್ಯ ಶಿಕ್ಷಕ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಹೋರಾಟಗಾರರು ಏನು ಹೇಳಿದ್ದಾರೆ ನೋಡಿ…
ಕೋಲಾರ: ನಮಗೆ ಅನ್ಯಾಯವಾಗುತ್ತಿದೆ,ನಮಗೆ ನ್ಯಾಯ ಕೊಡಿಸಿ ಎಂದು ಬಹಿರಂಗವಾಗಿ ಬೇಡಿಕೊಂಡರು ಇದುವರೆಗೂ ಯಾವುದೇ ಅಧಿಕಾರಿಗಳು ಇವರತ್ತ ಕಣ್ಣು ತೆರೆದು ನೋಡುತ್ತಿಲ್ಲ.. ನಾಲ್ಕು ಜನ ಶಿಕ್ಷಕಿಯರು ಮುಖ್ಯ ಶಿಕ್ಷಕರ ವಿರುದ್ದ ಆರೋಪ ಮಾಡುತ್ತಿದ್ದರು ಕೂಡ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ನಮಗೂ ಈ ಪ್ರಕರಣಕ್ಕೆ ಸಂಬಂದವಿಲ್ಲದಂತೆ ವರ್ತಿಸುತ್ತಿದ್ದಾರೆ..
ನಾನು ಯಾರೊಂದಿಗಾದರೂ ಅಸಭ್ಯವಾಗಿ ವರ್ತಿಸಿದ್ದರೆ ಶಾಲೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರೀಕ್ಷಿಸಬಹುದು. ನನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳು’ ಎಂದು ಮುಖ್ಯ ಶಿಕ್ಷಕ ಸೊಣ್ಣಪ್ಪ ಪ್ರತಿಕ್ರಿಯಿಸಿದ್ದಾರೆ.
ಡಿವಿಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಬಂದಿರುವ ದೂರುಗಳ ಆಧಾರದ ಮೇಲೆ ಜಿಲ್ಲಾ ಸಾರ್ವಜನಿಕ ಉಪ ನಿರ್ದೇಶಕರಿಗೆ ವರದಿ ಕಳುಹಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಗಂಗರಾಮಯ್ಯ ಅವರು ಮಾದ್ಯಮಗಳಿಗೆ ತಿಳಿಸಿದ್ದಾರೆ..
ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ,ಶಿಕ್ಷಕಿಯರು ಸಹಾಯದ ಹಸ್ತ ಚಾಚಿದ್ದಾರೆ.ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಇಂತಹ ಶಿಕ್ಷಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು..ನೌಕರರ ಸಂಘ ಹಾಗೂ ಶಿಕ್ಷಕ/ಶಿಕ್ಷಕಿ ಸಂಘಟನೆಗಳು ಮುಂದೆ ಬಂದು ನೊಂದ ಶಿಕ್ಷಕಿಯರಿಗೆ ನ್ಯಾಯ ದೊರಕಿಸಿಕೊಡಬೆಕು, ಕೂಡಲೆ ಅಮಾನತ್ ಮಾಡಬೇಕೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯಾದ್ಯಕ್ಷರಾದ ಅಶೋಕ ಎಮ್ ಸಜ್ಜನ ಆಗ್ರಹಿಸಿದ್ದಾರೆ…
ನಾಲ್ಕು ಜನ ಶಿಕ್ಷಕಿಯರಿಗೆ ನ್ಯಾಯ ದೊರಕಿಸಿ ಕೊಡಿ,ನಾವು ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲು ಅನೂಕೂಲ ಮಾಡಿಕೊಡಿ ಎಂದು ಕಣ್ಣಿರು ಸುರಿಸುತ್ತಿದ್ದಾರೆ..ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸೊಣ್ಣಪ್ಪ ಅವರನ್ನು ಇಲಾಖೆ ತತ್ ಕ್ಷಣ ಅಮಾನತ್ ಆದ್ರು ಮಾಡಬೇಕು, ಇಲ್ಲವಾದ್ರೆ ಬೆರೆ ಶಾಲೆಗೆ ವರ್ಗಾವಣೆ ಮಾಡಿ ವಿಚಾರಣೆ ಮಾಡಬೇಕಿದೆ..ತಪ್ಪಿತಸ್ತರಿಗೆ ಕಠಿಣ ಶಿಕ್ಷೆಯಾಗಬೇಕು..