ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಜನರ ಬಳಿ ತಲುಪಿಸುವ ಕಾರ್ಯ ಮಾಡುವ ಸರ್ಕಾರಿ ನೌಕರರಿಗೆ ತಮ್ಮ ಮುಂದಿನ ಜೀವನದ ಬಗ್ಗೆ ಅಭದ್ರತೆ ಕಾಡುತ್ತಿದೆ..ಹೌದು. ಎನ್ಪಿಎಸ್ ಜಾರಿಯಿಂದ ನಿವೃತ್ತಿ ನಂತರದ ಜೀವನ ನಡೆಸುವುದು ಹೇಗೆ? 30 ವರ್ಷಕ್ಕೂ ಅಧಿಕ ಸಮಯ ಸರ್ಕಾರಿ ಕೆಲಸ ಮಾಡಿ ನಿವೃತ್ತಿ ಹೊಂದಿದ ಮನಸ್ಸಿಗೆ ನೆಮ್ಮದಿ ಬೇಕ ಅಲ್ಲವೇ?.
60 ವರ್ಷ ದಾಟಿದ ನಂತರ ಜೀವನದ ಬಗ್ಗೆ ಯೋಚನೆ ಮಾಡದೆ,ಕೇವಲ ಇವತ್ತಿನ ಜೀವನ ಬಗ್ಗೆ ಯೋಚನೆ ಮಾಡಿದ್ರೆ ಹೇಗೆ?? ಮುಂದಾಲೋಚನೆಯೊಂದಿಗೆ ಎನ್ಪಿಎಸ್ ತೊಲಗಿಸಿ ಓಪಿಎಸ್ ಜಾರಿ ಮಾಡುವುದು ಅವಶ್ಯಕತೆ ಇದೆ..
ಬೆಂಗಳೂರು: ಎನ್ಪಿಎಸ್ ಕಡತ ಮಂಡನೆಗೆ ಸೂಚನೆ: ಎನ್ಪಿಎಸ್ ನೌಕರರ ಸಂಘ ಸರ್ಕಾರದ ಮೇಲೆ ನಿರಂತರ ಒತ್ತಡ ತಂದ ಪ್ರಯತ್ನದ ಫಲವಾಗಿ ಈ ಬಗ್ಗೆ ಸಂಪುಟದ ಮುಂದೆ ಎನ್ಪಿಎಸ್ ರದ್ದು ಕಡತ ಮಂಡಿಸುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
2.78 ಲಕ್ಷ ಎನ್ಪಿಎಸ್ ನೌಕರರಿದ್ದು, ಯೋಜನೆ ರದ್ದು ಮಾಡುವುದರಿಂದ ಸರ್ಕಾರಕ್ಕೆ ಯಾವುದೇ ಹೊರೆ ಇಲ್ಲ, ಅದರ ಬದಲಾಗಿ ಉಳಿತಾಯವಾಗಲಿದೆ ಎಂಬ ಅಂಶವನ್ನು ಸಂಘದ ಅಧ್ಯಕ್ಷ ಶಾಂತರಾಮ ಹಾಗೂ ಪದಾಧಿಕಾರಿಗಳು ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಪಿಎಫ್ಆರ್ಡಿಯಲ್ಲಿ ಸದಸ್ಯರಾಗಿರುವ ರಾಜ್ಯದ ಹಣಕಾಸು ಇಲಾಖೆಯ ಕಾರ್ಯದರ್ಶಿಯೊಬ್ಬರು ಮಾತ್ರ ಎನ್ಪಿಎಸ್ ರದ್ದು ಬೇಡವೆಂದು ಅಪಸ್ವರ ತೆಗೆದಿದ್ದಾರೆ ಎನ್ನಲಾಗಿದೆ.
ಎನ್ಪಿಎಸ್ ರದ್ದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಸಂಪುಟದ ಮುಂದೆ ಕಡತ ಮಂಡನೆಗೆ ಸೂಚನೆ ನೀಡಿದ್ದಾರೆ. ಎನ್ಪಿಎಸ್ ರದ್ದಾಗುತ್ತದೆ ಎಂಬ ವಿಶ್ವಾಶವಿದೆ.
ಶಾಂತರಾಮ ಅಧ್ಯಕ್ಷ, ಎನ್ಪಿಎಸ್ ನೌಕರರ ಸಂಘ
₹21 ಸಾವಿರ ಕೋಟಿ ಲಭ್ಯ
ಸರ್ಕಾರ ತನ್ನ ನೌಕರರಿಗೆ 33 ವರ್ಷ ವಂತಿಗೆ ಪಾವತಿಸುತ್ತದೆ. ನಿವೃತ್ತಿ ನಂತರ ನೌಕರರ ಜೀವಿತಾವಧಿ ಸರಾಸರಿ 15 ವರ್ಷ ಆಗಿರುತ್ತದೆ. ಸರ್ಕಾರಕ್ಕೆ ಇದೊಂದು ರೀತಿಯ ಹೊರೆಯಾಗಿರುತ್ತದೆ. ಇದೇ ಆಧಾರದಲ್ಲಿಯೇ ಛತ್ತೀಸ್ಘಡ ರದ್ದು ಮಾಡಿದೆ. ಈಗ ಸರ್ಕಾರದ ವಂತಿಗೆ 12 ಸಾವಿರ ಕೋಟಿ ರೂ.ಗಳು ಹಾಗೂ ನೌಕರರ ಬಾಬು 9 ಸಾವಿರ ಕೋಟಿ ರೂ. ಗಳು ಇದೆ. ಎನ್ಪಿಎಸ್ ರದ್ದು ಮಾಡಿ ವಾಪಾಸ್ ಪಡೆದರೆ 21 ಸಾವಿರ ಕೋಟಿ ರೂ.ಗಳು ಲಭ್ಯವಾಗಲಿದೆ. ಎನ್ಪಿಎಸ್ ತಕ್ಷಣ ರದ್ದು ಮಾಡಿದರೂ ನೌಕರರ ನಿವೃತ್ತಿಯ ಕೊನೆಯಲ್ಲಿ ಸರ್ಕಾರದ ಮೇಲೆ ಹೊರೆಯಾಗುತ್ತದೆ ಎಂಬ ಅಭಿಪ್ರಾಯ ಇದೆ. ಆದರೆ ಆ ರೀತಿಯ ಹೊರೆ ಬರುವುದಿಲ್ಲವೆಂಬ ವಿವರಗಳನ್ನು ಸಂಘದ ಪದಾಧಿಕಾರಿಗಳು ಈ ಸರ್ಕಾರಕ್ಕೆ ಒದಗಿಸಿದ್ದಾರೆ.