ಶಾಲೆಯ ಮುಖ್ಯ ಶಿಕ್ಷಕನಿಂದ ಪ್ರತಿ ನಿತ್ಯ ಶಾಲೆಯಲ್ಲಿ ಶಿಕ್ಷಕಿಯರಿಗೆ ಕಿರುಕುಳ!!
ಸರ್ ನಮಗೆ ವಾಷ್ ರೂಂ ಗೂ ಹೋಗಲು ಬಿಡುತ್ತಿಲ್ಲ..!!
ಮುಖ್ಯ ಶಿಕ್ಷಕನ ಅಸಭ್ಯ ವರ್ತನೆಯಿಂದ ಬೇಸತ್ತು ಹೋಗಿದ್ದೇವೆ!! ಒಂದು ವರ್ಷದಿಂದ ಹೀಗೆ ಆಗುತ್ತಿದೆ..
ಶಾಸಕರ ಮುಂದೆ ತಮ್ಮ ಅಸಹಾಯಕತೆಯನ್ನು ತೋಡಿಕೊಂಡ ಶಿಕ್ಷಕಿಯರು!!!
ಕೋಲಾರ: ಬಾಲಕಿಯರು, ಶಿಕ್ಷಕಿಯರಿಗೆ ನಿತ್ಯ ಅವಾಚ್ಯ ಪದಗಳಿಂದ ನಿಂದಿಸಿ, ಕಿರುಕುಳ ನೀಡುತ್ತಾರೆ ಎಂಬ ಆರೋಪ ಜಿಲ್ಲೆಯ ಮುಳಬಾಗಿಲು ಪಟ್ಟಣದ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಕೇಳಿಬಂದಿದೆ. ಮುಖ್ಯ ಶಿಕ್ಷಕನ ಅಸಭ್ಯ ವರ್ತನೆಯಿಂದ ಬಾಲಕಿಯರು, ಶಿಕ್ಷಕಿಯರು ಕಿರಿ ಕಿರಿ ಅನುಭವಿಸುತ್ತಿದ್ದು, ವಾಶ್ ರೂಮ್ಗೂ ಹೋಗಲು ಬಿಡದೆ ಕಾಟ ಕೊಡುತ್ತಾರೆ ಎನ್ನಲಾಗಿದೆ.
ಮುಳಬಾಗಿಲು ಪಟ್ಟಣದ ಡಿವಿಜಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸೊಣ್ಣಪ್ಪ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಶಿಕ್ಷಕಿಯರಿಗೆ ನಿತ್ಯ ಕಿರುಕುಳ ನೀಡುವ ಮುಖ್ಯ ಶಿಕ್ಷಕ, ಹೆಣ್ಣು ಮಕ್ಕಳ ಶೌಚಾಲಯಕ್ಕೂ ದಿಢೀರನೇ ಭೇಟಿ ನೀಡುತ್ತಾರೆ ಎನ್ನಲಾಗಿದೆ. ಇದರಿಂದ ಬೇಸತ್ತ ಶಿಕ್ಷಕಿಯರ ಕಣ್ಣೀರು ಹಾಕುತ್ತಿದ್ದಾರೆ.
ಹೆಸಾರಂತ ಕವಿ ಡಿವಿಜಿ ಹುಟ್ಟಿದ ಮನೆಯನ್ನೇ ಈ ಶಾಲೆ ನಡೆಸಲು ದಾನವಾಗಿ ನೀಡಲಾಗಿದೆ. ಆದರೆ, ಇಂತಹ ಶಾಲೆಯ ಮುಖ್ಯ ಶಿಕ್ಷಕನ ಅಸಭ್ಯ ವರ್ತನೆಯಿಂದ ಮಹಿಳಾ ಶಿಕ್ಷಕಿಯರು, ಬಾಲಕಿಯರು ಕಿರುಕುಳ ಅನುಭವಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ..
ಇನ್ನು ಯಾವ ಅಧಿಕಾರಿಗೂ ಈ ಮುಖ್ಯ ಶಿಕ್ಷಕ ಸೊಣ್ಣಪ್ಪ ಕ್ಯಾರೆ ಎನ್ನುತ್ತಿಲ್ಲ. ಡಿಡಿಪಿಐ, ಬಿಇಒ, ಯಾವ ಶಿಕ್ಷಣ ಅಧಿಕಾರಿ ಮಾತುಗಳನ್ನೂ ಕೇಳಲ್ಲ. ಶಾಸಕರ ಮಾತಿಗೂ ಜಗ್ಗದೆ ಮುಖ್ಯ ಶಿಕ್ಷಕ ಮೊಂಡುತನ ಪ್ರದರ್ಶಿಸುತ್ತಾರೆ ಎನ್ನಲಾಗಿದೆ. ಪ್ರಶ್ನೆ ಮಾಡಿದರೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜಗಳಕ್ಕೆ ಬರುತ್ತಾರೆ. ಬೆದರಿಕೆ ಹಾಕಿ ಬ್ಲ್ಯಾಕ್ ಮೇಲ್ ಮಾಡುವ ಮುಖ್ಯ ಶಿಕ್ಷಕನ ಕಾಟದಿಂದ ಬೇಸತ್ತ ಶಿಕ್ಷಕಿಯರು, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.