ಏಳನೇ ವೇತನ ಆಯೋಗ ಜಾರಿಗೆ ಒತ್ತಾಯ
ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರ್ಕಾರಿ ಆದೇಶ ಮಾಡಬೇಕು ಎಂದು ಆಗ್ರಹಿಸಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ//ಚಂದ್ರು ಲಮಾಣಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಲಕ್ಷ್ಮೇಶ್ವರ ತಾಲೂಕು ಘಟಕದಿಂದ ಈ ಕೆಳಕಂಡ ಅಂಶಗಳ ಕುರಿತು ಮನವಿ ಸಲ್ಲಿಸಲಾಯಿತು.
ಸರ್ಕಾರದ ಮುಂದಿರುವ ನೌಕರರ ಪ್ರಮುಖ ಬೇಡಿಕೆಗಳು :-
1)ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆದೇಶ
ಹೊರಡಿಸುವುದು.
2)ಎನ್.ಪಿ.ಎಸ್. ರದ್ದುಪಡಿಸಿ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸುವುದು.
3)ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ (ಕೆ.ಎ.ಎಸ್.ಎಸ್) ಅನುಷ್ಠಾನಗೊಳಿಸುವುದು.
ನಂತರ ಡಾ//ಚಂದ್ರು ಲಮಾಣಿಯವರು ಮಾತನಾಡಿ ನಿಮ್ಮ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತಂದು ಶೀಘ್ರವಾಗಿ ಸದನದಲ್ಲಿ ಚರ್ಚಿಸುವುದಾಗಿ ಎಂದು ಹೇಳಿದರು. ಈ ಸಂದರ್ಭದಲ್ಲಿ
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಿ ಎಚ್ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಮ್ ಎ ನದಾಫ,ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷರಾದ ಎಮ್ ಬಿ ಹೊಸಮನಿ, ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ ಎಸ್ ಹರ್ಲಾಪೂರ,ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನೇಕಾರ, ಸರ್ವ ಸಂಘಗಳ ಗೌರವಾಧ್ಯಕ್ಷರಾದ ಬಿ ಎಮ್ ಕುಂಬಾರ, ಎನ್ ಪಿ ಎಸ್ ನೌಕರರ ಸಂಘದ ಅಧ್ಯಕ್ಷರಾದ ಎಫ್ ಎಸ್ ತಳವಾರ,ಗೌರವಾಧ್ಯಕ್ಷರಾದ ಎಮ್ ಎಸ್ ಕೊಕ್ಕರಗುಂದಿ, ಪದವೀಧರ ನೌಕರರ ಸಂಘದ ಅಧ್ಯಕ್ಷರಾದ ಎಮ್ ಡಿ ವಾರದ,ಬಸವರಾಜ ಯತ್ನಳ್ಳಿ, ಬಿ ಎಮ್ ಯರಗುಪ್ಪಿ , ಎಮ್ ಎಸ್ ಹಿರೇಮಠ, ಎಮ್ ಎನ್ ಭರಮಗೌಡ್ರ,ಸತೀಶ್ ಬೋಮಲೆ,ಗುರು ಹವಳದ, ಎಲ್ ನಂದೆಣ್ಣವರ,ಗೀತಾ ಹಳ್ಯಾಳ, ಫಕ್ಕೀರೇಶ ಡಂಬಳ, ರವಿ ಉಮಚಗಿ,ರಾಜೋಳಿ,ಹಡಪದ,ಸಣ್ಣಲಿಂಗನ್ನವರ,ತಾಯಮ್ಮನವರ,ಚಾಕಲಬ್ಬಿ,ಡಿ ಎನ್ ದೊಡಮನಿ,ಮೈತ್ರಾದೇವಿ ಹಿರೇಮಠ, ಕನವಳ್ಳಿ,ಸಣ್ಣಮನಿ ಇನ್ನಿತರ ಸಂಘಟನೆಗಳ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಸರಕಾರಿ ನೌಕರರು ಹಾಜರಿದ್ದರು.