ಏಳನೇ ವೇತನ ಆಯೋಗ ಜಾರಿಗೆ ಒತ್ತಾಯ
ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರ್ಕಾರಿ ಆದೇಶ ಮಾಡಬೇಕು ಎಂದು ಆಗ್ರಹಿಸಿ ಲಕ್ಷ್ಮೇಶ್ವರ ತಹಶೀಲ್ದಾರ ವಾಸುದೇವ ಸ್ವಾಮಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಲಕ್ಷ್ಮೇಶ್ವರ ತಾಲೂಕು ಘಟಕದಿಂದ ಈ ಕೆಳಕಂಡ ಅಂಶಗಳ ಕುರಿತು ಮನವಿ ಸಲ್ಲಿಸಲಾಯಿತು.
ಸರ್ಕಾರದ ಮುಂದಿರುವ ನೌಕರರ ಪ್ರಮುಖ ಬೇಡಿಕೆಗಳು :-
1)ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆದೇಶ
ಹೊರಡಿಸುವುದು.
2)ಎನ್.ಪಿ.ಎಸ್. ರದ್ದುಪಡಿಸಿ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸುವುದು.
3)ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ (ಕೆ.ಎ.ಎಸ್.ಎಸ್) ಅನುಷ್ಠಾನಗೊಳಿಸುವುದು.
ನಂತರ ತಹಶೀಲ್ದಾರಾದ ವಾಸುದೇವ ಸ್ವಾಮಿ ಅವರು ನಿಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ನೀವು ಸಲ್ಲಿಸಿರುವ ಮನವಿಯನ್ನು ಸರ್ಕಾರಕ್ಕೆ ಈ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದರು.
ಸಂಘದ ಅಧ್ಯಕ್ಷರಾದ ಡಿ ಎಚ್ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಮ್ ಎ ನದಾಫ, ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ ಎಸ್ ಹರ್ಲಾಪೂರ,ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನೇಕಾರ, ಸರ್ವ ಸಂಘಗಳ ಗೌರವಾಧ್ಯಕ್ಷರಾದ ಬಿ ಎಮ್ ಕುಂಬಾರ, ಎನ್ ಪಿ ಎಸ್ ನೌಕರರ ಸಂಘದ ಅಧ್ಯಕ್ಷರಾದ ಎಫ್ ಎಸ್ ತಳವಾರ,ಗೌರವಾಧ್ಯಕ್ಷರಾದ ಎಮ್ ಎಸ್ ಕೊಕ್ಕರಗುಂದಿ, ಪದವೀಧರ ನೌಕರರ ಸಂಘದ ಅಧ್ಯಕ್ಷರಾದ ಎಮ್ ಡಿ ವಾರದ, ಪ್ರೌ ಶಾ ಶಿ ಸಂ ಅಧ್ಯಕ್ಷರಾದ ಎ ಎನ್ ಮುಳಗುಂದ, ಎಚ್ ಎಮ್ ಗುತ್ತಲ, ಬಸವರಾಜ ಬಿ ಎಮ್ ಯರಗುಪ್ಪಿ , ಎಮ್ ಎಸ್ ಹಿರೇಮಠ, ಎಸ್ ಬಿ ಅಣ್ಣಿಗೇರಿ, ಎಮ್ ಎಸ್ ಚಾಕಲಬ್ಬಿ, ಎಮ್ ಎನ್ ಭರಮಗೌಡ್ರ,ಸತೀಶ್ ಬೋಮಲೆ, ಆನಂದ ಮುಳಗುಂದ,ಮೈತ್ರಾದೇವಿ ಹಿರೇಮಠ,ಗುರು ಹವಳದ, ಎಲ್ ನಂದೆಣ್ಣವರ,ಗೀತಾ ಹಳ್ಯಾಳ,ಎ ಡಿ ಸೋಮನಕಟ್ಟಿ, ಆರ್ ಬಿ ಜೋಶಿ,ಪಿ ಪಿ ಹಿರೇಮಠ, ಶ್ರೀಪಾಲ ಘೊಂಗಡಿ, ಫಕ್ಕೀರೇಶ ಡಂಬಳ, ಮುತ್ತು ಹುಬ್ಬಳ್ಳಿ, ಅಜಿತ್ ಬಾಣದ ಹಾಗೂ ಇನ್ನಿತರ ಸಂಘಟನೆಗಳ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಸರಕಾರಿ ನೌಕರರು ಹಾಜರಿದ್ದರು.