ಶಾಲಾ ಕೊಠಡಿಯಲ್ಲಿ ಹೆಡ್ ಮಾಸ್ಟರ್- ಲೇಡಿ ಟೀಚರ್ ರೊಮ್ಯಾನ್ಸ್, ವೈರಲ್ ಆಯ್ತು ಸರಸ ಸಲ್ಲಾಪದ ದೃಶ್ಯ
ಪ್ರತಿಷ್ಠಿತ ಶಾಲೆಯೊಂದರಲ್ಲಿ ನಾಚಿಕೆಗೇಡಿನ ಸಂಗತಿಯೊಂದು ನಡೆದಿದ್ದು, ಶಾಲಾ ಕೊಠಡಿಯಲ್ಲಿ ಹೆಡ್ ಮಾಸ್ಟರ್ ಮತ್ತು ಲೇಡಿ ಟೀಚರ್ ಮೈಮರೆತು ಸರಸ ಸಲ್ಲಾಪದಲ್ಲಿ ತೊಡಗಿದ್ದಾರೆ. ಇವರ ರೊಮ್ಯಾನ್ಸ್ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿದ್ಯಾ ದೇಗುಲದಲ್ಲಿ ಇಂತಹ ಹೇಯ ಕೃತ್ಯ ನಡೆಸಿರುವುದಕ್ಕೆ ನೆಟ್ಟಿಗರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಮಾದರಿಯಾಗಬೇಕು, ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ದಾರಿದೀಪವಾಗಬೇಕು. ಆದರೆ ಇಲ್ಲೊಂದು ಶಾಲೆಯಲ್ಲಿ ಮಕ್ಕಳಿಗೆ ಮಾದರಿಯಾಗಬೇಕಿದ್ದ ಶಿಕ್ಷಕರೇ ದಾರಿ ತಪ್ಪಿದ್ದಾರೆ. ಹೌದು ಇತ್ತೀಚಿಗೆ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಾಚಿಕೆಗೇಡಿನ ಸಂಗತಿಯೊಂದು ನಡೆದಿದ್ದು, ಹೆಡ್ ಮಾಸ್ಟರ್ ಮತ್ತು ಲೇಡಿ ಟೀಚರ್ ಶಾಲಾ ಕೊಠಡಿಯಲ್ಲಿಯೇ ರೊಮ್ಯಾನ್ಸ್ ಮಾಡಿದ್ದಾರೆ. ಇವರ ಚಕ್ಕಂದದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿದ್ಯಾ ದೇಗುಲದಲ್ಲಿ ಇಂತಹ ಹೇಯ ಕೃತ್ಯ ನಡೆಸಿರುವುದಕ್ಕೆ ನೆಟ್ಟಿಗರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ವರದಿಗಳ ಪ್ರಕಾರ ಈ ನಾಚಿಕೆಗೇಡಿನ ಘಟನೆ ಉತ್ತರ ಪ್ರದೇಶದ ಜಾನ್ಪುರದಲ್ಲಿ ನಡೆದಿದ್ದು, ಇಲ್ಲಿನ ಪ್ರತಿಷ್ಠಿತ ಕಾನ್ವೆಂಟ್ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್ ಮತ್ತು ಶಿಕ್ಷಕಿಯೊಬ್ಬರು ಚಕ್ಕಂದವಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಈ ಇಬ್ಬರೂ ಶಾಲಾ ಕೊಠಡಿಯಲ್ಲಿಯೇ ಒಬ್ಬರನ್ನೊಬ್ಬರು ತಬ್ಬಿಕೊಂಡು ಸರಸ ಸಲ್ಲಾಪದಲ್ಲಿ ತೊಡಗಿದ್ದು, ಈ ದೃಶ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಶಾಲೆಯಲ್ಲಿ ಮಹಾನ್ ವ್ಯಕ್ತಿಗಳ ಫೋಟೋಗಳ ಮುಂದೆಯೇ ಇಂತಹ ಕೃತ್ಯ ಎಸಗಿದ ಈ ಇಬ್ಬರೂ ಶಿಕ್ಷಕರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಕುರಿತ ಪೋಸ್ಟ್ ಒಂದನ್ನು Hindikhabar ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಮಹಿಳಾ ಶಿಕ್ಷಕಿಯೊಂದಿಗೆ ಪ್ರಿನ್ಸಿಪಾಲ್ ಚಕ್ಕಂದವಾಡಿದ ವಿಡಿಯೋ ವೈರಲ್ ಆಗಿದೆ, ಶಿಕ್ಷಕರು ತಮ್ಮ ಘನತೆಯನ್ನು ಮರೆತಾಗ ವಿದ್ಯಾರ್ಥಿಗಳ ಭವಿಷ್ಯ ಏನಾಗಬಹುದು?” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.