ವಿರಾಟ್ ಕೊಹ್ಲಿ ಮಾಲಿಕತ್ವದ ಪಬ್ ಮೇಲೆ FIR ದಾಖಲು..
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ಮೇಲೆ ಎಫ್ಐಆರ್ ದಾಖಲಾಗಿದೆ. ನಿಗದಿತ ಸಮಯ ಮೀರಿ ಕಾರ್ಯನಿರ್ವಹಿಸಿದ್ದಕ್ಕಾಗಿ ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ವಿರಾಟ್ ಕೊಹ್ಲಿ ಒಡೆತನದ ಒನ್8 ಕಮ್ಯೂನ್ ಪಬ್(One8 Commune Pub) ಮತ್ತು ಎಂಜಿ ರಸ್ತೆಯಲ್ಲಿರುವ ಹಲವಾರು ಸಂಸ್ಥೆಗಳ ವಿರುದ್ಧ ಬೆಂಗಳೂರು ಪೊಲೀಸರು ಎಫ್ಐಆರ್ (FIR) ದಾಖಲಿಸಿದ್ದಾರೆ.
ಡಿಸಿಪಿ ಸೆಂಟ್ರಲ್ ಪ್ರಕಾರ, ಪಬ್ಗಳು ಮಧ್ಯರಾತ್ರಿ 1:30 ರವರೆಗೆ ತೆರೆದಿರುವುದು ಕಂಡುಬಂದಿದೆ. ಪಬ್ ಗಳಿಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ತೆರೆದಿರಲು ಅವಕಾಶವಿದೆ. ತಡರಾತ್ರಿ ಈ ಪ್ರದೇಶದಲ್ಲಿ ಜೋರಾಗಿ ಸಂಗೀತ ನುಡಿಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿ ಇರುವ ಒನ್8 ಕಮ್ಯೂನ್ ಪಬ್, ನಿಯಮಗಳನ್ನು ಉಲ್ಲಂಘಿಸಿದ ಪಬ್ಗಳಲ್ಲಿ ಒಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ ಓಪನ್ ಆಗಿದ್ದ ಬಗ್ಗೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಪಬ್ನಲ್ಲಿ ಗ್ರಾಹಕರು ಇದ್ದರು. ನಿಯಮ ಉಲ್ಲಂಘಿಸಿ ರಾತ್ರಿ ಅವಧಿಗೂ ಮೀರಿ ಪಬ್ ಓಪನ್ ಮಾಡಿದ ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿದೆ.