ಅಧಿಕಾರಿಗಳು ನಿಮ್ಮ ಶಾಲೆಗೂ ಭೇಟಿ ನೀಡಬಹುದು!!!
ಸಜ್ಜನ,ಪೋದಾರ,ಮುಲ್ಲಾ ಶಿಕ್ಷಕರು ಸೇರಿದಂತೆ ಐದು ಜನ ಶಿಕ್ಷಕರಿಗೆ ನೋಟಿಸ್ ಜಾರಿ…
ಕಾರಣ ಕೇಳಿ ನೋಟಸ್ ಜಾರಿ…
ಸಿಂದಗು: ಶಾಲೆಗೆ ಗೈರಾಗಿದ್ದ ಐದು ಜನ ಶಿಕ್ಷಕರಿಗೆ ಕಾರಣ ಕೇಳಿ ನೋಟೀಸ್ ನೀಡಿದ ಘಟನೆ ಸಿಂದಗಿ ಯಲ್ಲಿ ನಡೆದಿದೆ. ತಾಲ್ಲೂಕು ಪಂಚಾಯ್ತಿ ಇಒ ಹಠಾತ್ ಭೇಟಿ ನೀಡಿ ಶಾಲೆಗೆ ಗೈರಾದ ಶಿಕ್ಷಕರಿಗೆ ನೊಟೀಸ್ ನೀಡಲಾಗಿದೆ.ಯಂಕಂಚಿ ಸರ್ಕಾರಿ ಪ್ರೌಢಶಾಲೆ ಯಲ್ಲಿ ಶಿಕ್ಷಕರು ಗೈರಾಗಿದ್ದರು
ಶಾಲೆ ಪ್ರಾರಂಭಗೊಳ್ಳುವ ಮುನ್ನ ಪ್ರಾರ್ಥನಾ ಸಮಯಕ್ಕೆ ಭೇಟಿ ನೀಡಿದ ಇಒ ರಾಮ ಜಿ.ಅಗ್ನಿ ಶಾಲಾ ಸಿಬ್ಬಂದಿ ಹಾಜರಾತಿ ಪರಿಶೀಲಿಸಿದಾಗ 18 ಜನ ಶಿಕ್ಷಕರಲ್ಲಿ ಮುಖ್ಯಶಿಕ್ಷಕ ಒಳಗೊಂಡಂತೆ 5 ಜನ ಶಿಕ್ಷಕರು ಬಾರದಿರುವುದು ಬೆಳಕಿಗೆ ಬಂದಿದೆ
ನಂತರ ಶಿಕ್ಷಕರ ಸಭೆಯಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಶಾಲಾ ಮಕ್ಕಳ ಜೀವನ ರೂಪಿಸುವಂತೆ ಇಒ ಅಗ್ನಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಗೈರಾದ ವಿಜಯಕುಮಾರ ಸಜ್ಜನ, ಅಶೋಕ ಕಂಚಗಾರ, ಎಸ್.ಆರ್. ಪೊದ್ದಾರ, ಕೆ.ಎ.ಮುಲ್ಲಾ, ಶ್ರೀಶೈಲ ಕಂಬಾರ ಈ 5 ಜನ ಶಿಕ್ಷಕರು ಹಾಗೂ ಭೀಮಸಿಂಗ್ ರಾಠೋಡ, ಪಿ.ಎ.ಗುಡಿಮನಿ ಸಿಬ್ಬಂದಿ ಗೆ ಕಾರಣ ಕೇಳಿ ನೊಟೀಸ್ ನೀಡಲಾಗಿದೆ.24 ಗಂಟೆಯೊಳಗಾಗಿ ನೊಟೀಸ್ಗೆ ಉತ್ತರ ಉತ್ತರ ನೀಡುವಂತೆ ತಿಳಿಸಲಾಗಿದೆ