ಹನಿ ಹನಿ ಸೇರಿ ರಾಶಿ
ಅಣು ಅಣುಗಳು ಸೇರಿ ಕಣವಾಗುವದು
ಕಣಕಣಗಳು ಸೇರಿ ಕಣಜವಾಹುದು
ಹನಿ ಹನಿಗಳು ಸೇರಿ ತೊರೆಯಾಗುವುದು
ತೊರೆಗಳು ನದಿಯ ಸೇರಿ ಸಾಗರವಾಹುದು.
ತೆನೆ ತೆನೆಗಳು ಸೇರಿ ಬಳ್ಳವಾಗುವದು.
ಬಳ್ಳ ಬಳ್ಳಗಳು ಸೇರಿ ರಾಶಿಯಾಹುದು..
ಧೂಳ ಕಣಗಳು ಸೇರಿ ಧೂಮಕೇತುವಾಗುವದು
ಚುಕ್ಕಿ ಚುಕ್ಕಿ ಸೇರಿ ತಾರಾಪುಂಜವಾಗುವದು
ಸಣ್ಣ ಸಣ್ಣ ಸೋಲುಗಳು ಗೆಲುವಿನ ಸೋಪಾನವಾಗುವವು
ಕಿರುಹಾಸಗಳು ಸೇರಿ ನಗೆಬುಗ್ಗೆಯಾಗುವದು
ಸ್ನೇಹಿತರ ಮನಗಳು ಸೇರಿ ಸ್ನೇಹ ಸೇತುವೆಯಾಗುವದು
ಆ ಸ್ನೇಹ ಜೀವನ ಪಾವನಗೊಳಿಸುವುದು ಹುಚ್ಚಪ್ಪಾ
ಪ್ರಸನ್ನ ಜಾಲವಾದಿ
ವಾಸ್ತು ಶಿಲ್ಪಿ(architech)
ಕಲಬುರಗಿ