ಡೆಂಗ್ಯೂ
ಎಲ್ಲೆಲ್ಲೂ ಡೆಂಗೆ ಜ್ವರದ ಸುದ್ದಿ,ಹೆಚ್ಚುತ್ತಿರುವ ಪ್ರಕರಣಗಳು,ಇದು ಆತಂಕ ಪಡುವ ವಿಷಯ ಇದ್ದರು ಕೂಡ ಜಾಗ್ರತೆ ಅಗತ್ಯವಿದೆ.ಸೂಕ್ತ ಸಮಯಕ್ಕೆ ವೈದ್ಯರ ತಪಾಸಣೆ ಕೂಡ ಅಗತ್ಯ.
ಇದು ಡೆಂಗೆ ವೈರಸ ನಿಂದ, ides ಈಜಿಪ್ಟ್ _ಟೈಗರ್ ಸೊಳ್ಳೆ ಕಚುವುದರಿಂದ ಬರುವ ಜ್ವರ.
ರೋಗ ಲಕ್ಷಣಗಳು
ವಿಪರೀತ ಜ್ವರ, ಚಳಿ, ನಡುಕ, ತಲೆ ನೋವು, ಹೊಟ್ಟೆ ನೋವು, ವಾಂತಿ, ಮೈ ಕೈ ನೋವು, ಮೈ ಮೇಲೆ ಕೆಂಪು ಬಣ್ಣದ ಗುಳ್ಳೆಗಳು.
ರಕ್ತ ಪರೀಕ್ಷೆ _ಬಿಳಿ ರಕ್ತ ಕಣಗಳು(platelets), ಹಿಮೋಗ್ಲೋಬಿನ್ ಪ್ರಮಾಣ, NS1elisa test _ನಾಲ್ಕು ದಿವಸದ ಜ್ವರ ಇದ್ದಾಗ, ನಾಲ್ಕು ದಿನದಿಂದ ಏಳು ದಿವಸದ ಜ್ವರ ಕ್ಕೆ, IgM Elisa test, ಈ ಪರೀಕ್ಷೆಗಳು 70% dengue ಜ್ವರ ಎಂದು ದೃಡೀಕರಣ ಮಾಡಲು ಸಹಾಯ. NS1rapid test, ಎಲ್ಲಾ ಖಾಸಗಿ ಪ್ರಯೋಗಾಲಯ ದಲ್ಲಿ ಮಾಡುತ್ತಾರೆ, ಆದರೆ ಆ ಪರೀಕ್ಷೆ ಬರಿ 30% ಮಾತ್ರ ದೃಡೀಕರಣ ಮಾಡುತ್ತದೆ, ವೈದ್ಯರು ರೋಗ ಲಕ್ಷಣಗಳ ಸಹಾಯದಿಂದ, dengue ಜ್ವರ ಅಂತ ನಿರ್ಧಾರ ಮಾಡುತ್ತಾರೆ.
NS1 Elisa ಮತ್ತು IgM Elisa ರಕ್ತ ಪರೀಕ್ಷೆಯನ್ನು ,ಎಲ್ಲಾ ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಸಾರ್ವಜನಿಕ ಪ್ರಯೋಗಾಲಯದಲ್ಲಿ (DPHL lab) ಪರೀಕ್ಷೆ ಮಾಡುತ್ತಾರೆ.
ಚಿಕಿತ್ಸೆ _ವೈದ್ಯರು ರೋಗ ಲಕ್ಷಣಗಳ ಮಾಹಿತಿ ಮೇರೆಗೆ ಮತ್ತು ಪೂರ್ಣ ಪ್ರಮಾಣದ ದೇಹದ ಪರೀಕ್ಷೆ ಮತ್ತು ರಕ್ತದ ಪರೀಕ್ಷೆ ನಂತರ ಚಿಕಿತ್ಸೆ ನೀಡುತ್ತಾರೆ. ಬಹಳ ಮುಖ್ಯವಾಗಿ ಬಿಳಿ ರಕ್ತ ಕಣಗಳ ಮಾಪನ 48 ಘಂಟೆಗೆ ಒಮ್ಮೆ ಮಾಡಿ, 2 ಲಕ್ಷದ ಮೇಲೆ ಇದೆಯಾ ಇಲ್ಲ ಎಂದು ನೋಡಬೇಕು. ಡೆಂಗೆ ಜ್ವರ ಇದ್ದಾಗ antibiotic ಮಾತ್ರೆ
ಬೆಕಾಗುವುದಿಲ್ಲ, ಬರೇ paracetmol ಮಾತ್ರೆ 650 mg ದಿನಕ್ಕೆ, 6 ಘಂಟೆ ಗೆ ಒಮ್ಮೆ ಕೊಟ್ಟರೆ ಸಾಕು ,ಮೂರು ದಿನಗಳಿಗೆ. ರೋಗ ಲಕ್ಷಣಗಳ ಚಿಕಿತ್ಸೆ ನೀಡಿದರೆ ಸಾಕು. ಆದರೆ ಡೆಂಗೆ ಜ್ವರ ವ್ಯಕ್ತಿಯ ರಕ್ತದ ಒತ್ತಡ, ನಾಡಿ ಮಿಡಿತ, ಆಮ್ಲಜನಕ ಪೂರೈಕೆ ಮಾಪನ, ಉಸಿರಾಟದ ಕೌಂಟ,ಬಿಳಿ ರಕ್ತ ಕಣಗಳ ವೀಕ್ಷಣೆ ಮಾಡಿ, ಅವಲೋಕನ ಮಾಡ ಬೇಕು. ಬಿಳಿ ರಕ್ತ ಕಣಗಳು ಪ್ರಮಾಣ ಕಮ್ಮಿ ಆಗಿ ಒಮ್ಮೊಮ್ಮೆ ಜೀವ ಹೋಗುವ ಸಾಧ್ಯತೆ ಇದೆ.
ನಿರ್ಮೂಲನೆ
_ ಮನೆಯ ಸುತ್ತಮುತ್ತ ನೀರು ನಿಲ್ಲುತ್ತದೆ, ಡ್ರಮ್, ಟೈರ್, ನೀರಿನ ಕುಂಡ ಗಳು, ನೀರಿನ ತೊಟ್ಟಿ, ತೆರೆದ drainage ಗಳಲ್ಲಿ ನೀರು ನಿಂತು, ಸೊಳ್ಳೆಯ ಸಂತತಿ ಬೆಳೆಯಲು ಸಹಕಾರಿ ಆಗುತ್ತೆ. ಹಾಗಾಗಿ, ಪ್ರತಿ ದಿನ ನೀರು ನಿಲ್ಲದೆ ಹಾಗೆ ನೋಡಿ ಕೊಳ್ಳಬೇಕು. ಮಳೆಗಾಲದಲ್ಲಿ ಡೆಂಗೆ ಪ್ರಕರಣಗಳು ಹೆಚ್ಚಾಗು ವುದು ,ಈ ಸೊಳ್ಳೆಯ
ಕಡಿತದಿಂದ, ಅದು ದಿನದ ಮತ್ತು ಸಂಜೆ ವೇಳೆ ಕಚ್ಚಿ ಬರುವ ಜ್ವರ.
ಡೆಂಗೆ ಜ್ವರ ನಿಯಂತ್ರಣಕ್ಕೆ
,ರಾತ್ರಿ ಮಲಗುವಾಗ ಸೊಳ್ಳೆಯ ಪರದೆ ಉಪಯೋಗಿಸವುದರಿಂದ fogging ಮಾಡುವುದರಿಂದ, gyambosi ಮೀನು ನೀರು ಶೇಖರಣೆ ಮಾಡಿರುವ ತೊಟ್ಟಿಯಲ್ಲಿ, ಡ್ರಮ್ ನಲ್ಲಿ ಹಾಕಿದರೆ, ಸೊಳ್ಳೆಯ ಸಂತತಿ ತಡಗಟ್ಟಲು ಸಾಧ್ಯವಾಗುತ್ತದೆ. ಎಲ್ಲರೂ ಮಳೆಗಾಲದಲ್ಲಿ ಡೆಂಗೆ ಜ್ವರದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಡೆಂಗೆ ಜ್ವರ ಬರದ ಹಾಗೆ ಆರೋಗ್ಯ ಕಾಪಾಡಿಕೊಳ್ಳ ಬೇಕು.
ಒಳ್ಳೆಯ ಆರೋಗ್ಯವೆ ಜೀವನದ ಆಸ್ತಿ. ನಮ್ಮ ಒಳ್ಳೆಯ ಆರೋಗ್ಯ ಸಂತೋಷದ ಜೀವನ ನಡೆಸಲು ಸಹಕಾರ.ಡೆಂಗೆ ಜ್ವರದ ಬಗ್ಗೆ ಆರೋಗ್ಯದ ಅರಿವು ಜನರಲ್ಲಿ ಮೂಡಬೇಕು ಮತ್ತು ಡೆಂಗೆ ಸಾವು ತಡೆಗಟ್ಟ ಬೇಕು.
ಡಾ ರವಿಕಾಂತಿ ಯಸ್ ಕ್ಯಾತನಾಳ್,
ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರು
ಕಲಬುರಗಿ.