ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಒಂದು ವರ್ಷ ಪೂರೈಸಿದ ಶಿಕ್ಷಕರು ಮೆಚ್ಚಿದ ಹೆಮ್ಮೆಯ ಬಿಇಒ
ಶ್ರೀ ರಾಮಕೃಷ್ಣ ಸದಲಗಿ,
ಧಾರವಾಡ ಗ್ರಾಮೀಣ ವಲಯದ,
ಶ್ರೀ ರಾಮಕೃಷ್ಣ ಸದಲಗಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಒಂದು ವರ್ಷ ಪೂರೈಸಿದರು,
ಧಾರವಾಡ ತಾಲ್ಲೂಕಿನಲ್ಲಿ, ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ಗುಣಾತ್ಮಕ ಶಿಕ್ಷಣದ ಕಡೆಗೆ ಹೆಜ್ಜೆ ಹಾಕಲು, ಶಿಕ್ಷಕರಿಗೆ ಪ್ರೇರಣೆ ನೀಡುತ್ತಾ, ಉತ್ತಮ ಸಲಹೆ ಮಾರ್ಗದರ್ಶನದ ಮೂಲಕ ಮಕ್ಕಳ ದಾಖಲಾತಿ,ಹಾಜರಾತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ಶಿಕ್ಷಕರಿಗೆ ಗೂಗಲ್ ಸಭೆಯ ಮೂಲಕ ಸಿ ಆರ್ ಪಿ ಬಿ ಆರ್ ಪಿಯವರ ಸಹಕಾರದೊಂದಿಗೆ, ಉತ್ತಮ ಮಾರ್ಗದರ್ಶನ ಮಾಡುತ್ತಾ, ಧಾರವಾಡ ತಾಲೂಕಿನ ಹೆಸರನ್ನು ಇಡೀ ರಾಜ್ಯ ಮಟ್ಟದಲ್ಲಿ ಉತ್ತಮ ತಾಲ್ಲೂಕು ಎಂಬ ಹೆಗ್ಗಳಿಕೆ ತರುವಲ್ಲಿ ಶ್ರೀ ರಾಮಕೃಷ್ಣ ಸದಲಗಿ ಅವರ ಕಾರ್ಯ ಮೆಚ್ಚುವಂತಹುದು, ಕಚೇರಿಯಲ್ಲಿ ಕಾಲ ಕಳೆಯದೇ ಪ್ರತಿದಿನ ಎಷ್ಟು ಸಾಧ್ಯವೋ ಅಷ್ಟು ಶಾಲೆಗಳಿವೆ ಬೇಟಿ ನೀಡಿ, ಶಿಕ್ಷಕರಿಗೆ ಉತ್ತಮ ಮಾರ್ಗದರ್ಶನ ಮಾಡುತ್ತಾ, ಸದಾ ಶಾಲೆಗಳ ಪ್ರಗತಿಗಾಗಿ, ಚಿಂತನ ಮಂಥನ ಮಾಡುತ್ತಾ, ಒಂದು ವರ್ಷದ ಅವಧಿಯಲ್ಲಿ, ಆಡಳಿತವನ್ನು ತುಂಬಾ ಸುರಳಿತವಾಗಿ ನಡೆಸಿಕೊಂಡು ಬಂದಿರುತ್ತಾರೆ, ಇವರ ಮಾರ್ಗದರ್ಶನದಲ್ಲಿ, ಎರಡು ಶೈಕ್ಷಣಿಕ ಕಿರು ಚಲನಚಿತ್ರಗಳು, ಚಿತ್ರೀಕರಣವಾಗಿ ಒಂದು ಬಿಡುಗಡೆಯಾಗಿದೆ, ಇನ್ನೊಂದು ವೀಣಾ ಟೀಚರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಶಿಕ್ಷಕ ಎಲ್ ಐ ಲಕ್ಕಮ್ಮನವರ ತಿಳಿಸಿದರು,
ಇವರ ಕಾರ್ಯಕ್ಕೆ ಚಿಂತಕ ಶಿಕ್ಷಕರಾದ ಪಿಎಸ್ ಅಂಕಲಿ ಮಲ್ಲಿಕಾರ್ಜುನ ಉಪ್ಪಿನ, ಅಕ್ಬರಲಿ ಸೋಲಾಪುರ ಕಾಶಪ್ಪ ದೊಡವಾಡ, ಎಂ ಎಸ್ ಹೊಂಗಲ ವಾಯ್ ಬಿ ಕಡಕೋಳ, ಎಂ ಆರ್ ಪಾಲ್ತಿ, ಸಾವಿತ್ರಿ ಜಾಲಿಮರದ, ಮಂಜು ಪೂಜಾರ, ಫಕ್ಕಿರಪ್ಪ ಮಡಿವಾಳರ, ಶಿವಲೀಲಾ ಪೂಜಾರ ಕಲ್ಪನ ಚಂದನಕರ, ಶೈಲಾ ರವಿ ಬಡಿಗೇರ ಎ ಎ ಹಕ್ಕಿ, ಎಂ ಎನ್ ಮುಲ್ಲಾನವರ ರುದ್ರಪ್ಪ ಕುರ್ಲಿ, ಎ ಎಚ್ ನದಾಫ, ಎಂ ಆರ್ ಪಾಲ್ತಿ, ವಾಯ್ ವಿ ಶಿಂಪಿ,ಮಂಜುನಾಥ ಮದ್ನೂರ, ಮುಂತಾದವರು ಶುಭಾಷಯಗಳನ್ನು ತಿಳಿಸಿದರು.