ಇವರು ಶಿಕ್ಷಕರೋ ರೌಡಿಯೋ!! ಏಳನೇ ತರಗತಿ ವಿದ್ಯಾರ್ಥಿ ಹಾಗೂ ಕುಟುಂಬದವರನ್ನು ಮನ ಬಂದಂತೆ ಥಳಿಸಿದ ಶಿಕ್ಷಕ…
ಶಿಕ್ಷಕನ ವಿರುದ್ದ ಪ್ರಕರಣ ದಾಖಲು…
ಮನಾಬಾದ್ (ಬೀದರ್ ಜಿಲ್ಲೆ): ಏಳನೇ ತರಗತಿಯ ವಿದ್ಯಾರ್ಥಿ ಹಾಗೂ ಅವರ ಕುಟುಂಬದ ಸದಸ್ಯರನ್ನು ಮನಬಂದಂತೆ ಥಳಿಸಿದ ಶಾಲಾ ಶಿಕ್ಷಕ ಸಾಹೇಬ್ ಗೌಡ ಅವರ ವಿರುದ್ಧ ತಾಲ್ಲೂಕಿನ ಹಳ್ಳಿಖೇಡ್ (ಬಿ) ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಹಳ್ಳಿಖೇಡ್ ಗ್ರಾಮದ ‘ಎಕ್ಸಲೆಂಟ್’ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿ ಪವನ್ ಜೂನ್ 30ರಂದು ಶಿಕ್ಷಕ ಸಾಹೇಬ್ ಗೌಡ ಅವರಿಗೆ ಹಾಲು ಕೊಡಲು ಅವರ ಮನೆಯ ಮಹಡಿಯೊಳಗೆ ಹೋಗಿದ್ದ.
ಇದರಿಂದ ಕೋಪಗೊಂಡ ಸಾಹೇಬ್ ಗೌಡ, ಪವನ್ಗೆ ಮನಬಂದಂತೆ ಥಳಿಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ. ಇದನ್ನು ಪ್ರಶ್ನಿಸಲು ಜುಲೈ 1ರಂದು ಸಾಹೇಬ್ ಗೌಡ ಬಳಿ ಪವನ್ ತಂದೆ ಮಲ್ಲಿಕಾರ್ಜುನ, ಅಜ್ಜಿ ಮಲ್ಲಮ್ಮ ಹಾಗೂ ಸಹೋದರಿ ಮಧುಪ್ರಿಯಾ ಹೋಗಿದ್ದರು. ಇದರಿಂದ ಮತ್ತಷ್ಟು ಕೋಪಗೊಂಡ ಸಾಹೇಬ್ ಗೌಡ ಕೆಲವು ಜನರನ್ನು ಸ್ಥಳಕ್ಕೆ ಕರೆಸಿಕೊಂಡು ಮೂವರಿಗೆ ಬಡಿಗೆಗಳಿಂದ ಹೊಡೆದು ಗಾಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ..