ಡಿ.ಎಲ್.ಇಡಿ. ತರಬೇತಿ ಅವಧಿ ವಿಸ್ತರಣೆ
ಧಾರವಾಡ : ನಗರದ ಹು.ಧಾ. ಮಹಾನಗರ ಪಾಲಿಕೆ ಬಳಿ ಕಡಪಾ ಮೈದಾನದ (ಕಲಾ ಭವನದ) ಎದುರಿಗೆ ಇರುವ ಶಿಕ್ಷಕಿಯರ ಸರಕಾರಿ ತರಬೇತಿ ಸಂಸ್ಥೆ(ಟಿಸಿಡಬ್ಲೂ) ಪ್ರಸ್ತುತ 2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ ಕನ್ನಡ, ಉರ್ದು ಹಾಗೂ ಇಂಗ್ಲೀಷ ಮಾಧ್ಯಮದ ಡಿಪ್ಲೋಮಾ ಇನ್ ಎಲೆಮೆಂಟರಿ ಎಜ್ಯುಕೇಷನ್ (ಡಿ.ಇಎಲ್.ಇಡಿ) ತರಬೇತಿ ಪ್ರವೇಶ ಅವಧಿಯನ್ನು ಜುಲೈ-31 ರವರೆಗೆ ವಿಸ್ತರಿಸಿದೆ.
ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಡಿ.ಇಎಲ್.ಇಡಿ ತರಬೇತಿ ಪಡೆಯಲು ಇಲ್ಲಿ ಅವಕಾಶವಿದೆ. ಕಲಾ, ವಿಜ್ಞಾನ ಇಲ್ಲವೇ ವಾಣಿಜ್ಯ ವಿಷಯದಲ್ಲಿ ಪಿ.ಯು.ಸಿ. ಪಾಸಾಗಿರಬೇಕು. ಸಾಮಾನ್ಯ ವರ್ಗದವರು ಶೇಕಡಾ 50 ಮತ್ತು ಎಸ್.ಸಿ, ಎಸ್.ಟಿ. ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳು ಶೇಕಡಾ 45 ಅಂಕ ಪಡೆದಿರಬೇಕು. ಪದವಿಧರ ವಿದ್ಯಾರ್ಥಿನಿಯರೂ ಸಹ ಡಿ.ಇಎಲ್.ಇಡಿ ತರಬೇತಿಗೆ ಪ್ರವೇಶ ಪಡೆಯಬಹುದಾಗಿದೆ.
ಡಿ.ಇಎಲ್.ಇಡಿ ತರಬೇತಿ ಪಡೆಯುವುದರಿಂದ ಸರಕಾರಿ ಇಲ್ಲವೇ ಖಾಸಗಿ ಶಾಲೆಗಳಲ್ಲಿ ಶಿಕ್ಷಕ ಹುದ್ದೆ ಲಭಿಸುತ್ತದೆ. ಈ ನಿಟ್ಟಿನಲ್ಲಿ ಟಿ.ಇ.ಟಿ ಮತ್ತು ಸಿ.ಇ.ಟಿ. ತರಬೇತಿ, ಕಂಪ್ಯೂಟರ ತರಬೇತಿಗೆ ಉಚಿತ ಮಾರ್ಗದರ್ಶನ ಮಾಡಲಾಗುವುದು. ನುರಿತ ಸಿಬ್ಬಂದಿ ವರ್ಗದ ಜೊತೆಗೆ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಸೌಲಭ್ಯ ಹಾಗೂ ವಿದ್ಯಾರ್ಥಿ ವೇತನ ಸೌಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9448508383 ಅಥವಾ 9448564218 ಮೊಬೈಲ್ಗೆ ಸಂಪರ್ಕಿಸುವ೦ತೆ ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ.ಎಂ. ಬಡಿಗೇರ ಮಾಧ್ಯಮ ಪ್ರಕಟಣೆಯಲ್ಲಿ ಕೋರಿದ್ದಾರೆ.