ಡಿಸಿಎಮ್ ಅವರ ಎದುರೆ ಲಂಚಕ್ಕೆ ಬೇಡಿಕೆ!! ಕೂಡಲೇ ಅಮಾನತ ಮಾಡಿ ಎಂದರು ಡಿ ಕೆ ಶಿವಕುಮಾರ್..ಏನಿದು ಪ್ರಕರಣ ನೀವೆ ನೋಡಿ…
ಚನ್ನಪಟ್ಟಣ: ನಾಡ ಕಚೇರಿಯಲ್ಲಿ ಪಿಂಚಣಿ ಮಾಡಿಕೊಡಲು ಹರ್ಷಿತ ಎನ್ನುವ ನೌಕರಳು 50 ಸಾವಿರ ಲಂಚ ಕೇಳುತ್ತಾ ಇದ್ದಾರೆ ಎಂದು ದೊಡ್ಡ ಮಳೂರು ಗ್ರಾಮದ 70 ವರ್ಷದ ಯಶೋಧಮ್ಮ ದೂರು ನೀಡಿದಾಗ ಸಿಟ್ಟಾದ ಡಿಸಿಎಂ ಅವರು ಜಿಲ್ಲಾಧಿಕಾರಿಗಳನ್ನು ಕರೆದು “ಕೂಡಲೇ ಇದರ ಬಗ್ಗೆ ತನಿಖೆ ಮಾಡಬೇಕು.
ತಪ್ಪು ಸಾಬೀತಾದರೆ ಈ ಅಧಿಕಾರಿಯನ್ನು ಅಮಾನತು ಮಾಡಬೇಕು. ನನಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಸ್ಥಳದಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ಅಮಾನತಿಗೆ ಸೂಚನೆ ನೀಡಿದರು.
ಇಂದು ಚನ್ನಪಟ್ಟಣದಲ್ಲಿ ಮಾತನಾಡಿದಂತ ಅವರು, ಒಂದೇ ದಿನ ಪಡಿತರ ಕೊಡುತ್ತಿದ್ದಾರೆ ಎಷ್ಟು ಬಾರಿ ಮನವಿ ಮಾಡಿದರು ಕೇಳುತ್ತಿಲ್ಲ. ದೂರದ ಊರುಗಳಿಗೆ ನಡೆದುಕೊಂಡು ಹೋಗಬೇಕು ಎಂದು ಕೋಟಮಾರನಹಳ್ಳಿ ಮಂಜುಳಾ ಅವರು ದೂರು ನೀಡಿದಾಗ “ಎಲ್ಲಾ ಪಡಿತರ ವಾಟ್ಸಪ್ ಗುಂಪು ರಚನೆ ಮಾಡಿ ಮಾಹಿತಿ ನೀಡಿ. ಜನರಿಗೆ ಕಷ್ಟ ಕೊಡುತ್ತಿರುವ ವಿತರಕರ ಲೈಸೆನ್ಸ್ ರದ್ದು ಮಾಡಿ. ತಂತ್ರಜ್ಞಾನ ಮುಂದುವರೆದರು ಬಳಸಿಕೊಳ್ಳಲು ನಿಮಗೆ ಏನು ತೊಂದರೆ. ಜನರ ಕಷ್ಟ ನಿಮಗೆ ಅರ್ಥ ಆಗುವುದಿಲ್ಲವೇ? ” ಎಂದು ಆಹಾರ ಸರಬರಾಜು ಅಧಿಕಾರಿಗೆ ಸೂಚನೆ ನೀಡಿದರು.