ರಾಜ್ಯ ಸರ್ಕಾರದ ವಿರುದ್ದ ಬೀದಿಗಿಳಿದು ಹೋರಾಟಕ್ಕೆ ಸಜ್ಜಾದ ನೌಕರರು..!!
ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರಕ್ಕೆ ಕೊಟ್ಟ ಗಡುವು ಇಂದಿನಿಂದ ಆರಂಭ???
ಜುಲೈ 4 ರಂದು ನಮ್ಮ ನೌಕರರ ಡಿಎ ಹೆಚ್ಚಳ??? ಈಗಾಗಲೇ ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳವಾಗಿದೆ..
ಸಿಎಸ್ ಷಡಕ್ಷರಿಯವರ ನೀಲುವು ಏನಾಗುತ್ತದೆ.?
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿರುವ ವೇತನ ಆಯೋಗ ಜಾರಿ,ಓಪಿಎಸ್ ಜಾರಿ ಸಂಬಂಧಿಸಿದಂತೆ ಇದೇ ತಿಂಗಳು (ಜುಲೈ) ಗಡುವನ್ನು ಸರ್ಕಾರಕ್ಕೆ ಷಡಕ್ಷರಿಯವರು ನೀಡಿದ್ದಾರೆ..
ಇದೇ ಗುರುವಾರ ದಂದು ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ದಿನಾಂಕ ನಿಗದಿಯಾಗಿದೆ..ಇನ್ನೂ ಮೂರು ದಿನಗಳ ಒಳಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ವೇತನ ಆಯೋಗ ಜಾರಿಗೆ ಗ್ರೀನ್ ಸಿಗ್ನಲ್ ನೀಡುವಂತೆ ಮಾಡಬೇಕಾಗಿದೆ..
ಒಂದು ಮಾಹಿತಿ ಪ್ರಕಾರ ರಾಜ್ಯ ಸರ್ಕಾರ ನೌಕರರ ಡಿಎ ಹೆಚ್ಚಳ ಮಾಡಲಿದೆ.ಇದು ಪ್ರತಿ ವರ್ಷ ನಡೆಯುವ ಪ್ರಕ್ರಿಯೆ ಆದ್ರು..ನೌಕರರ ನೀರಿಕ್ಷೆಯಂತೆ ಆಗುತ್ತಿಲ್ಲ..
ಈಗಾಗಲೇ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್, ಹಾಲಿನ ದರ ಏರಿಕೆ ಮಾಡಿದೆ..ಸರ್ಕಾರ ಹಣದ ಕ್ರೂಡಿಕರಣ ಮಾಡುತ್ತಿದೆ..
ನಮ್ಮ ನೌಕರರಿಗೆ ವೇತನ ಪರಿಷ್ಕರಣೆ ಮಾಡಿದ್ರೆ ಅಷ್ಟೋಂದು ಹೊರೆ ಸರ್ಕಾರದ ಮೇಲೆ ಆಗುವುದಿಲ್ಲ ಎಂಬುದು ನೌಕರರ ವಾದವಾಗಿದೆ…
ಜುಲೈ ೪ ರ ಸಚಿವ ಸಂಪುಟ ಸಭೆಯಲ್ಲಿ ನೌಕರರ ಪರವಾಗಿ ಅಂದ್ರೆ, ರಾಜ್ಯ ಸರ್ಕಾರದ ಯೋಜನೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ನಮ್ಮ ನೌಕರರಿಗೆ ಸಿಹಿ ಸಿಗುತ್ತೆ ಎಂಬುದನ್ನು ಕಾದು ನೋಡಬೇಕಿದೆ…
ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಎಚ್ಚರಿಕೆ..
ರಾಜ್ಯ ಸರಕಾರ ಜುಲೈ ತಿಂಗಳ ಒಳಗಾಗಿ 7ನೇ ವೇತನ ಆಯೋಗದ ವರದಿ ಜಾರಿಗೆ ತರುವ ನಿರೀಕ್ಷೆ ಇದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
7ನೇ ವೇತನ ಆಯೋಗದ ಜಾರಿಗೆ ಒತ್ತಾಯಿಸಿ ಈಗಾಗಲೇ ವಾರದಲ್ಲಿ ಎರಡು ಬಾರಿ ಸರಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ. ಒಂದು ವೇಳೆ ಜುಲೈನಲ್ಲಿ ವರದಿ
ಅನುಷ್ಠಾನಗೊಳ್ಳದ್ದಿದ್ದಲ್ಲಿ ನೌಕರರ ಸಂಘ ಪ್ರತಿಭಟನೆಯ ಹಾದಿ ತುಳಿಯಲಿದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು..
7ನೇ ವೇತನ ಆಯೋಗದ ವರದಿ ಜತೆಗೆ ಹಳೇ ಪಿಂಚಣಿ ವ್ಯವಸ್ಥೆ ಜಾರಿ ಹಾಗೂ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಸರಕಾರದ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುತ್ತಿದೆ. ಸರಕಾರ ಗ್ಯಾರಂಟಿ ನಡುವೆ ನಮ್ಮ ಬೇಡಿಕೆ ಬಗ್ಗೆ ಯೋಚನೆ ನಡೆಸಿದೆ.