ಡೈವೋರ್ಸ್ (ವಿಚ್ಚೇದನ)ಅಗತ್ಯವಿದೆಯೇ?
ಇತ್ತೀಚೆಗೆ ಗಂಡು ಅಥವಾ ಹೆಣ್ಣು ಯಾರೇ ಆಗಲಿ ಸಂತೋಷವಾಗಿರದ ಮದುವೆಯಲ್ಲಿ ಬದುಕಲು ಇಷ್ಟಪಡುವುದಿಲ್ಲ. ಆದರೆ ಯಾವುದೇ ದಂಪತಿಗಳಿಗೆ ವಿಚ್ಛೇದನ ಸುಲಭವಲ್ಲ. ಆದ್ದರಿಂದ, ಮದುವೆಯನ್ನು ಮುರಿಯಲು ಕಾರಣವಾಗುವ ಕೆಲವು ಮುಖ್ಯ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಉತ್ತಮ.ಯಾವಾಗಾದರೂ, ಎಲ್ಲಿಯಾದರೂ ನಮ್ಮ ಅಪ್ಪ ಅಪ್ಪ, ಅಜ್ಜಿ ತಾತ ಜಗಳ ಆಡಿದ್ದನ್ನು ನೋಡಿದ್ದೀರಾ? ಅಜ್ಜಿ ತಾತರ ಮದುವೆಯಾಗಿ 40 ವರ್ಷ, ಅಮ್ಮ ಅಪ್ಪನ ಮದುವೆಯಾಗಿ 20 ವರ್ಷ. ಆದರೆ ನೀವು ಹೇಳಿ ನಿಮ್ಮ ಮದುವೆಯಾಗಿ ಎಷ್ಟು ವರ್ಷ ಜೀವನ ಮಾಡಿದ್ದೀರಾ? ಮಾಡುತ್ತಿದ್ದೀರಾ? ಅಂತ ಅಪಾರ ಜನಸಂಖ್ಯೆ ನೆರೆದಿದ್ದ ಕಾರ್ಯಕ್ರಮ ಒಂದರಲ್ಲಿ ಈ ಪ್ರಶ್ನೆ ಕೇಳಿದಾಗ, ಒಂದು ಕ್ಷಣ ಎಲ್ಲವೂ ಸ್ತಬ್ದ. ಕೆಲವರದು 5 ವರ್ಷ, ಇನ್ನು ಕೆಲವರದು 2 ವರ್ಷ, ಇನ್ನು ಕೆಲವರದು 3 ತಿಂಗಳ ಸಂಸಾರ ಎನ್ನುತ್ತಿರುವಾಗಲೆ ಒಬ್ಬ ಯುವಕ ಜೀವನವಿಡೀ ಒಬ್ಬರೊಂದಿಗೆ ಸಂಸಾರ ಹೇಗೆ ಎನ್ನುವಷ್ಟರಲ್ಲಿ,ಹಿರಿಯ ಜೋಡಿಯೊಂದು ನಮ್ಮದು 50 ವರ್ಷದ ಸಂಸಾರ, ಇನ್ನೂ ಏಳೇಳು ಜನುಮ ನಿಭಾಯಿಸಿಕೊಂಡು ಹೋಗಬಲ್ಲೆವು ಎಂದು ಮುಗುಳ್ನಗೆ ಬೀರಿದರು.
ಅಮ್ಮ ಅಪ್ಪ ಇಡೀ ಸಮಾಜ ಯಾವುದು ನಮ್ಮ ಕಣ್ಣಿಗೆ ಕಾಣೋದಿಲ್ಲ. ಜಗತ್ತನ್ನೆ ಎದುರಿಸೋ ಧೈರ್ಯ, ಸಾಹಸ ಮಾಡಿ ಇವನೇ /ಇವಳೇ ನನ್ನ ಪ್ರಪಂಚ, ನನ್ನ ಪ್ರಾಣ, ನನ್ನ ಜೀವ ಎಂದು ಊರೆಲ್ಲ ಸುತ್ತಾಡಿ,ತಿನೋಕ್ಕೆ ಗಂಜಿ ಇದ್ದರು ಪರವಾಗಿಲ್ಲ ನಿನ್ನ ಪ್ರೀತಿ ಒಂದಿದ್ದರೆ ಸಾಕು ನನಗೆ ಬೇರೇನೂ ಬೇಡ, ಏಳೇಳು ಜನುಮಕ್ಕೂ ನೀನೆ ಬೇಕು ಎಂದು ಕುಟುಂಬದವರ ಸಮ್ಮತಿ ಸಿಗದಿದ್ರು, ಜಗತ್ತನ್ನೇ ಎದುರಿಸಿ ಮದುವೆ ಮಾಡಿಕೊಂಡು,
ಏಳು ತಿಂಗಳು ಸಹ ಸಂಸಾರ ಮಾಡದೆ ಡೈವೋರ್ಸ್ ಗೆ ಮೊರೆ ಹೋಗುವುದು ಇತ್ತೀಚಿನ ದಿನಗಳಲ್ಲಿ ಸರ್ವೆಸಾಮಾನ್ಯ ಆಗಿದೆ.
ಕೆಲವು ವರ್ಷಗಳ ಹಿಂದೆ ಪ್ರೀತಿ, ಪ್ರೇಮಕ್ಕೆ ಜಾತಿ, ಧರ್ಮ ಅಂತಸ್ತು ಹೀಗೆ ಕಟ್ಟುಪಾಡುಗಳಿದ್ದು ಪ್ರೀತಿ ಪ್ರೇಮದ ಗೋಜಿಗೆ ಯುವಕರು ಹೋಗುತ್ತಿರಲಿಲ್ಲ. ಈಗ ಎಲ್ಲವೂ ಸಾಧ್ಯ, ಜಾತಿ ಮತ ಧರ್ಮ ಎಲ್ಲರು ಒಂದೆ ಎನ್ನುವ ವಿಶಾಲ ಮನೋಧೋರಣೆಯ ಸಮಾಜ ಇದ್ದರೂ ಕೂಡ ಮದುವೆಗಳು ವಿಫಲ ಆಗುತ್ತಿವೆ. ಮದುವೆಗಳು ಸ್ವರ್ಗದಲ್ಲಿ ನಿಶ್ಚಯಿಸಲ್ಪಟ್ಟಿರುತ್ತವೆ,ದೇವರು ಜೋಡಿ ಮಾಡಿರುತ್ತಾನೆ, ಹೀಗೆಲ್ಲ ಅಂದುಕೊಂಡಿದ್ದರು.
ಸಹ ಇತ್ತೀಚಿನ ವರ್ಷಗಳಲ್ಲಿ ಯಾಕೆ ಮದುವೆಗಳು ಡೈವೋರ್ಸ್ ನೊಂದಿಗೆ ಅಂತ್ಯಗೊಳ್ಳುತ್ತಿವೆ? ಯಾಕೆ ಅಂತ? ಕಳೆದ ವರ್ಷ 21 ವರ್ಷ ವಯಸ್ಸಿನ ಹುಡುಗಿ ತನ್ನ ವಯಸ್ಸಿನ ಹುಡುಗನೊಂದಿಗೆ ಪ್ರೀತಿಸಿ ಮದುವೆ ಮಾಡಿಕೊಂಡಳು , ನಿಮ್ಮ ಶಿಕ್ಷಣ ಮುಗಿಯಲಿ, ನೀವು ನಿಮ್ಮ ಕಾಲಿನ ಮೇಲೆ ನಿಲ್ಲಿ,ನಂತರ ಇಬ್ಬರು ಮದುವೆ ಆಗಿ ಅಂತ ಪಾಲಕರು ಹೇಳಿದ್ದಾಗ, ನಮ್ಮ ಮದುವೆ ಮಾಡದ್ದಿದ್ದರೆ ಇಬ್ಬರು ವಿಷಯ ಸೇವಿಸುತ್ತೇವೆ ಎಂದು ಹೇಳಿದಾಗ ಪಾಲಕರು ದಿಕ್ಕು ತೋಚದೆ ಮದುವೆ ಮಾಡಿದರು,
ಮೊನ್ನೆ ಹುಡುಗನ ಮನೆ ಎದುರಿಗೆ ಜನ ಕಿಕ್ಕಿರಿದು ನಿಂತ್ತಿತ್ತು, ಹುಡುಗ ಆತ್ಮ ಹತ್ತೆ ಮಾಡಿಕೊಂಡಿದ್ದಾನೆ ಎನ್ನುವ ವಿಷಯ ಕೇಳಿ ಜೀವ ಗಾಬರಿಯಾಯಿತು .ಮದುವೆ ಮಾಡಿಕೊಂಡು 3 ತಿಂಗಳು ಕೂಡ ಒಟ್ಟಿಗೆ ಇರದೆ ಇಬ್ಬರು ಬೇರೆ ಬೇರೆ ಮನೆಯಲ್ಲಿ ವಾಸವಾಗಿದ್ದು, ಹುಡುಗಿ ಡೈವೋರ್ಸ್ ಕೇಳಿದಕ್ಕೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ತೆ ಮಾಡುಕೊಂಡದ್ದು ಎನ್ನುವ ಸಂಗತಿ ಹೊರಬಿತ್ತು .
ಇತ್ತ ಕಡೆ ಗೋಪಾಲ ITBT ಯ ಪ್ರತಿಷ್ಠಿತ ಕಂಪನಿಯ ಟೆಕ್ಕಿ ಕೈತುಂಬಾ ಸಂಬಳ, ತಂದೆ ತಾಯಿ ವಿದ್ಯಾವಂತಳು,ಚೆಲುವೆಯು ಹಾಗೂ ಒಳ್ಳೆಯ ಸಂಪ್ರದಾಯಸ್ಥ ಕುಟುಂಬದ ಕವನ ಎನ್ನುವ ಹುಡುಗಿ ಜೊತೆ ಅದ್ಧುರಿಯಾಗಿ ಮದುವೆ ಮಾಡುಸಿದರು, ಮದುವೆ ಆದ 3 ತಿಂಗಳಲ್ಲಿ ವಿಚ್ಚೆದನ ಬೇಕಂತ ಕುಟುಂಬಸ್ಥರಿಗೆ ವಿಷಯ ತಿಳಿಸಿದರು, ವಿಚ್ಚೆದನಕ್ಕೆ ಕಾರಣ ಏನು ಗೊತ್ತೆ? ಕವನ ತುಂಬಾ ಸ್ಲೋ ಇವಳಿಗೆ ಚೆನ್ನಾಗಿ ಡ್ರೆಸ್ಸಿಂಗ್ ಮಾಡಿಕೋಳ್ಳೋದಕ್ಕೆ ಬರೋದಿಲ್ಲ,ಪಾರ್ಟಿಗಳಲ್ಲಿ ಹೋದಾಗ ಇಂಗ್ಲಿಷ್ ಮಾತನಾಡಲು ಬಡಬಡಿಸುತ್ತಾಳೆ, ನನ್ನ ಅಂತಸ್ತಿಗೆ ತಕ್ಕ ಹೆಂಡತಿಯಲ್ಲ ಹೀಗ.
ಇನ್ನೊಂದು ಕಡೆ ಭಾವನಾ ದೊಡ್ಡ ಅಧಿಕಾರಿ, ಗಂಡ ರಮೇಶ್ ಕೂಡ ಉನ್ನತ ಹುದ್ದೆಯಲಿದ್ದು 2 ಮಕ್ಕಳನ್ನು ಇವರಿಗೆ ನಿಭಾಯಿಸಲು ಆಗೋದಿಲ್ಲವಂತ್ತೆ, ಡೈವೋರ್ಸ್ ಅಪ್ಲಿಕೇಶನ್ ಹಾಕಿ ಒಂದು ಮಗು ನನಗೆ,ಇನ್ನೊಂದು ಮಗು ಇವಳಿಗೆ ಕೊಡಿ. ಮತ್ತೊಂದೆಡೆ ಸುಂದರವಾದ ರಾಧಾ ಅಷ್ಟೆ ಗುಣವಂತೆ ಬುದ್ಧಿವಂತ್ತೆ ಆದರೆ ಗಂಡ ಮಾತ್ರ ಅನುಮಾನ ಪಿಶಾಚಿ ದಿನಾ ಹೊಡಿಯೋದು…
ಇನ್ನೊಂದು ಕಥೆ ಒಬ್ಬ ಲೇಖಕರದ್ದು ಸಮಾಜದಲ್ಲಿ ಎಲ್ಲರಿಗೂ ಬೇಕಾದ ಸಮಾಜಮುಖಿ,ಸಮಾಜ ಸುಧಾರಕ ಅಮ್ಮ ಅಪ್ಪನ ಮಾತಿಗೆ ಬೆಲೆಕೊಟ್ಟು ಅವಿದ್ಯಾವಂತ ಅನಾಥ ಹುಡುಗಿಯೊಂದಿಗೆ ಮದುವೆ ಮಾಡಿದ್ದೂ,ಆದರೆ ಅವಳು ಕುಟುಂಬ ಹಾಗೂ ಗಂಡ ಯಾರೊಂದಿಗೂ ಹೊಂದಿಕೊಳ್ಳದೆ,ಗಂಡನಿಗೆ ಪ್ರೋತ್ಸಾಹಹಿಸುವುದು ಬಿಡಿ, ಸಹಕಾರದ ಮನೋಭಾವನೆ ಕೂಡ ಇಲ್ಲ, ಎಲ್ಲಿ ನಮ್ಮ ಮನೆಯ ವಿಷಯ ಸಮಾಜಕ್ಕೆ ಗೊತ್ತಾಗುತ್ತೋ ಅಂತ್ತ ನಿರಾಶಾದಾಯಕ ಜೀವನ ಮಾಡುತ್ತಿರುವುದು ದುಃಖದ ಸಂಗತಿ, ಹೆಂಡತಿಗೆ ಗಂಡನ ಬೆಲೆ ಗೊತ್ತಿಲ್ಲ ಇಲ್ಲ.
ಅಬ್ಬಾ ಒಂದೇ ಎರಡೇ… ಇಂತಹ ಕೇಸುಗಳನ್ನು ಬೆಂಗಳೂರಿನಲ್ಲಿ ಅದರಲ್ಲಿಯೂ ITBT ಉದ್ಯೋಗಿಗಳಲ್ಲಿ ಸರ್ವೇಸಾಮಾನ್ಯ್ ಆಗಿವೆ. ಸಪ್ತಪದಿ ತುಳಿಯುವಾಗ ಮಾಡಿದ 7 ಪ್ರಮಾಣಗಳು ಎಲ್ಲಿ ಹೋದವು?
ಮದುವೆಯೆಂದರೆ ಎರಡು ದೇಹಗಳ ನಡುವಿನ ಸಂಬಂಧವಲ್ಲ, ಅದುವೇ ಎರಡು ಆತ್ಮಗಳ ನಡುವಿನ ಸಂಬಂಧವಾಗಿದೆ.
ಸಪ್ತಪದಿಯ ಮೊದಲ ಹೆಜ್ಜೆಯು ಬಹಳ ಪ್ರಮುಖವಾದ ಸಂದೇಶವನ್ನು ನೀಡುತ್ತದೆ. ಸಪ್ತಪದಿಯ ಮೊದಲ ಹೆಜ್ಜೆಯಲ್ಲಿ ವರನು ವಧುವಿಗೆ ನಿನ್ನೆಲ್ಲಾ ನೋವಿನಲ್ಲೂ, ನಗುವಿನಲ್ಲೂ ನಿನ್ನೊಂದಿಗಿರುವೆ ಎನ್ನುವ ಪ್ರತಿಜ್ಞೆಯನ್ನು ಮಾಡುತ್ತಾನೆ.
ಸಪ್ತಪದಿಯ ಎರಡನೇ ಹೆಜ್ಜೆಯಲ್ಲಿ ವರನು ತನ್ನ ವಧುವಿಗೆ ಜೀವನದಲ್ಲಿ ನಂಬಿಕೆಗೆ ಅರ್ಹನಾಗಿ, ನಿಷ್ಠಾವಂತನಾಗಿ ಇರುತ್ತೇನೆ ಎನ್ನುವ ಭರವಸೆಯನ್ನು ನೀಸಪ್ತಪದಿಯ ಮೂರನೇ ಹೆಜ್ಜೆಯಲ್ಲಿ ವಧು ತನ್ನ ಪತ್ನಿಗೆ ತಾನು ಕಷ್ಟಪಟ್ಟು ಕೆಲಸವನ್ನು ಮಾಡುತ್ತೇನೆ. ಹಾಗೂ ಮನೆಯಲ್ಲಿ ಸಿರಿ, ಸಂಪತ್ತು, ಸಮೃದ್ಧಿಯನ್ನು ತರಲು, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ತನ್ನ ಕೈಲಾದ ಪ್ರಯತ್ನವನ್ನು ಮಾಡುತ್ತೇನೆಂದು ಭರವಸೆಯನ್ನು ನೀಡುತ್ತಾನೆ.
ಸಪ್ತಪದಿಯ ನಾಲ್ಕನೇ ಹೆಜ್ಜೆಯಲ್ಲಿ ವರನು ವಧುವಿಗೆ ತನ್ನ ಜೀವನವನ್ನು ಸುಂದರಗೊಳಿಸಿದ್ದಕ್ಕೆ ಹಾಗೂ ಪರಿಪೂರ್ಣಗೊಳಿಸಿದ್ದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಾನೆ. ವರನು ಪತ್ನಿಗೆ ತನ್ನ ಎರಡೂ ಕುಟುಂಬವನ್ನು ಅಂದರೆ ತನ್ನ ಕುಟುಂಬವನ್ನು ಹಾಗೂ ವಧುವಿನ ಕುಟುಂಬವನ್ನು ಗೌರವಿಸುವುದಾಗಿ ಮತ್ತು ಅವರ ಎಲ್ಲಾ ಆಸೆಗಳನ್ನು ಪೂರೈಸುವುದಾಗಿ ಹಾಗೂ ತಾನು ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳಲ್ಲಿ ಅವರನ್ನೂ ಕೂಡ ಸೇರಿಸಿಕೊಳ್ಳುವುದಾಗಿ ಮಾತನ್ನು ನೀಡುತ್ತಾನೆ.
ಸಪ್ತಪದಿಯ ಐದನೇ ಹೆಜ್ಜೆಯಲ್ಲಿ ದಂಪತಿಗಳು ಪರಸ್ಪರ ಜೊತೆಯಾಗಿಯೇ ಇರುತ್ತೇವೆ ಮತ್ತು ತಮ್ಮ ಸಂತೋಷ, ದುಃಖಗಳನ್ನು ಇಬ್ಬರೂ ಪರಸ್ಪರ ಹಂಚಿಕೊಳ್ಳುತ್ತೇವೆಂದು ಭರವಸೆಯನ್ನು ನೀಡುತ್ತಾರೆ.
ಸಪ್ತಪದಿಯ ಆರನೇ ಹೆಜ್ಜೆಯಲ್ಲಿ ದಂಪತಿಗಳಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ, ಗೌರವಿಸುತ್ತೇವೆ, ಎಷ್ಟೇ ಕಠಿಣ ಸಂದರ್ಭದಲ್ಲೂ ಜೊತೆಯಾಗಿ ನಿಲ್ಲುತ್ತೇವೆಂದು ಹೇಳುತ್ತಾರೆ.
ಸಪ್ತಪದಿಯ ಏಳನೇ ಹಾಗೂ ಕೊನೆಯ ಹೆಜ್ಜೆಯಲ್ಲಿ ವಧು – ವರರಿಬ್ಬರೂ ಈ ಮೇಲಿನ ಎಲ್ಲಾ 6 ಪ್ರತಿಜ್ಞೆಯನ್ನು ಚಾಚು ತಪ್ಪದೇ ಪಾಲಿಸುತ್ತೇವೆಂದು ಭರವಸೆಯನ್ನು ನೀಡುತ್ತಾರೆ. ಲಗ್ನದ ಸಪ್ತಪದಿಯಲ್ಲಿ 7 ಭರವಸೆ (hope) ಗಳನ್ನು ಮಾಡಲಾಗುತ್ತದೆ. ಪ್ರತಿ ಸುತ್ತಿನಲ್ಲಿ ವಧು ಮತ್ತು ವರರು ಜೀವನಕ್ಕಾಗಿ ಪರಸ್ಪರ ಬೆಂಬಲಿಸುವ ಭರವಸೆ ನೀಡುತ್ತಾರೆ. ಈ ಸುತ್ತುಗಳು ಮತ್ತು ಪ್ರತಿಜ್ಞೆ (oath) ಗಳು ಹಿಂದೂ ಧರ್ಮಕ್ಕೆ ಬಹಳ ಮುಖ್ಯ . ಇದರ ಪ್ರಕಾರ ಇಬ್ಬರು ಪರಸ್ಪರ ಗೌರವಿಸುತ್ತಾರೆ ಮತ್ತು ದೈಹಿಕವಾಗಿ (Physically) ಮತ್ತು ಆಧ್ಯಾತ್ಮಿಕವಾಗಿ ಒಂದಾಗುತ್ತಾರೆ. ಇದನ್ನು ವಿವಾಹದ ಪವಿತ್ರ ಬಂಧವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ ಒಬ್ಬ ವ್ಯಕ್ತಿಯು 7 ಜನ್ಮಗಳು ಮತ್ತು 7 ಸುತ್ತುಗಳ ಮೂಲಕ ಹೋಗುತ್ತಾನೆ ಎಂದು ಹೇಳಲಾಗುತ್ತದೆ, ಆದ್ದರಿಂದ ಇದನ್ನು 7 ಜನ್ಮಗಳ ಸಾಥ್ ಎಂದು ಕರೆಯಲಾಗುತ್ತದೆ.
ಈ ರೀತಿಯ ಸಪ್ತಪದಿ ತುಳಿದು ವಿವಾಹ ಬಂಧನಕ್ಕೆ ಒಳಪಟ್ಟು ವಿಚ್ಛೇದನ ಕೊಡುವ ಸ್ಥಿತಿ ತಲುಪುವ ದಂಪತಿಗಳಿಗೆ ಏನೆಂದು ಕರೆಯಬಹುದು.
ಕ್ಷುಲ್ಲಕ ಕಾರಣಕ್ಕೆ ಒಬ್ಬರನ್ನೊಬ್ಬರು ನಿಂದಿಸುವುದು, ಚಿಕ್ಕ ಚಿಕ್ಕ ಕಾರಣಕ್ಕೂ ಜಗಳ,ಪರಿಸ್ಥಿತಿಗಳಿಗೆ ಹೊಂದಿಕೊಳ್ಳದ ಮನಸ್ಥಿತಿಗಳು, ಗಂಡ /ಹೆಂಡತಿ ನನ್ನ ಜೀವ ಎನ್ನುವ ಭಾವನೆ ಕೂಡ ಮರೆತು ಒಬ್ಬರಿಗೊಬ್ಬರು ಹಿಂಸೆ, ನಿಂದನೆ, ಅವಮಾನ ಮಾಡೊಕ್ಕು ಹೇಸದ ಮನಸ್ಸುಗಳು.ಮದುವೆಯ ಅರ್ಥನೆ ತಿಳಿಯದೆ ಜೀವನ ಮಾಡುತ್ತಿರುವುದು.ಇತ್ತೀಚಿನ ದಿನಗಳಲ್ಲಿ ಡೈವೋರ್ಸ್ ಕೇಸ್ ಗಳು ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಿಗೆ ತಲೆನೋವು ಆಗಿದೆ,ಎಷ್ಟೋ ನ್ಯಾಯಾದಿಶರು ಹಾಗೂ ನ್ಯಾಯವಾದಿಗಳು ಅನೇಕ ಕಾರ್ಯಕ್ರಮಗಳಲ್ಲಿ ವಿಚ್ಚೆದನ ಬಗ್ಗೆ ತಿಳಿ ಹೇಳುತ್ತಿದ್ದಾರೆ,ಸಂಸಾರ ಮುರಿಯುವುದು ನಮ್ಮ ಕೆಲಸ ಅಲ್ಲ, ದಯವಿಟ್ಟು ಜೋಡಿಸಲು ಪ್ರಯತ್ನಿಸುತ್ತೇವೆ. ಡೈವೋರ್ಸ್ ಕೇಸ್ ಬಂದಾಗ ನಮಗೆ ಖುಷಿ ಆಗೋದಿಲ್ಲ ಎಂದು ಮಹಿಳಾ ನ್ಯಾಯವಾದಿ ಹೇಳುತ್ತಿದ್ದರು.
ಕನಿಷ್ಠ ಪಕ್ಷ ನಿಮ್ಮ ಮಕ್ಕಳು ನಿಮ್ಮ ತಂದೆ ತಾಯಿ ಕುಟುಂಬದವರ ಬಗ್ಗೆಯಾದರೂ ಯೋಚಿಸಿ, ಎಲ್ಲವೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ… ಇಲ್ಲಿ ಹೊಂದಾಣಿಕೆ ಬೇಕು. ಎಷ್ಟೋ ಕುಟುಂಬಗಳಲ್ಲಿ ಮಕ್ಕಳು ಅಮ್ಮನ ಜೊತೆ ಇದ್ದಾಗ ತಂದೆಯ ಪ್ರೀತಿ ಮಾರ್ಗದರ್ಶನದಿಂದ ವಂಚಿತರಾಗುತ್ತಾರೆ, ಹಾಗೆಯೇ ತಂದೆಯ ಜೊತೆಗೆ ವಾಸಮಾಡುವ ಮಕ್ಕಳು ಕೂಡ ತಾಯಿಯ ಪ್ರೀತಿ ಮಮತೆಗಳಿಂದ ವಂಚಿತರಾಗುತ್ತಾರೆ,
ವಿಶೇಷವಾಗಿ ಇತ್ತೀಚಿನ ದಿನಮಾನಗಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷಿತ ಇಲ್ಲದ ಜಗತ್ತಿನಲ್ಲಿ ಅಮ್ಮನ ಮಾರ್ಗದರ್ಶನದ ಅಗತ್ಯವಿದೆ, ತಂದೆಯೊಂದಿಗೆ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವೇ,ಮಗು ದೊಡ್ಡವಳಾಗುತ್ತಾಳೆ, ಮುಂದೆ ಮದುವೆ ಬಾಣತನ ಹೀಗೆ ಆ ಮಗುವಿನ ಹೆಚ್ಚಿನ ಜವಾಬ್ದಾರಿ ತಾಯಿದು ತಾನೆ? ಬಡಪಾಯಿ ತಂದೆ, ಮಕ್ಕಳ ಲಾಲನೆ ಪಾಲನೆ, ಇವರ ಭವಿಷ್ಯ ಹಾಗೂ ವಾಸ್ತವದ ಪರಿಸ್ಥಿತಿಯಲ್ಲಿ ಎಲ್ಲಾ ಜವಾಬ್ದಾರಿ ತನ್ನ ಮೇಲೆಯೇ ಇರುವುದರಿಂದ,ತನ್ನ ಮುಂದಿನ ಭವಿಷ್ಯ ಅಥವಾ ಇನ್ನೊಂದು ಮದುವೆ ಬಗ್ಗೆ ಯೋಚಿಸದೆ ಅಸಹಾಯಕ ಜೀವನ ಮಾಡಲು ನಿರ್ಧರಿಸುತ್ತಾನೆ. ಇತ್ತ ಹೆಣ್ಣು ಕೂಡ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಅವಳು ಮಾನಸಿಕವಾಗಿ ಕುಗ್ಗುತ್ತಾಳೆ, ಮಾನಸಿಕ ಒತ್ತಡಕ್ಕೆ ಬಲಿಯಾಗಿ ತನ್ನ ಮಕ್ಕಳನ್ನು ತಾಯಿಯೇ ಕೊಲೆ ಮಾಡಿದ ಅನೇಕ ಉದಾಹರಣೆಗಳನ್ನು ನಾವಿಂದು ನೋಡುತ್ತಿದ್ದಿದ್ದೇವೆ.ಇಂತಹ ಪರಿಸ್ಥಿತಿಯಲ್ಲಿ ಬೆಳೆದ ಮಕ್ಕಳು ತಂದೆ ತಾಯಿಯ ದಿನನಿತ್ಯದ ಜಗಳ ನೋಡಿ ಬೇಸತ್ತು, ಇವರು ಕೂಡ ತಂದೆ ತಾಯಿಗೆ ಮರ್ಯಾದೆ ಕೊಡುವುದಿಲ್ಲ,ದಾರಿ ತಪ್ಪುತ್ತಾರೆ ಅನೈತಿಕ ಚಟುವಟಿಕೆ, ಕೊಲೆ ಸುಲಿಗೆ,ದರೋಡೆ ಹೀಗೆ ಕೆಟ್ಟ ದಾರಿಗಳನ್ನು ಹಿಡಿಯುದು ಕಂಡುಬರುತ್ತಿವೆ.
ಇವತ್ತಿನ
ಹೆಚ್ಚುತ್ತಿರುವ
ಡೈವೋರ್ಸ್ ಗೆ ಅನೇಕ ಕಾರಣಗಳು ಇವೆ
ಹೊಂದಾಣಿಕೆ ಇಲ್ಲದಿರುವುದು.
ನಾನೇ ಉನ್ನತ ಶಿಕ್ಷಣ ಪಡೆದವನು/ಪಡೆದವಳು ಎನ್ನುವ ಅಹಂ.
ಆರ್ಥಿಕವಾಗಿ ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿರುವುದು.
ಬಿಡುವಿಲ್ಲದ ಜೀವನ ಶೈಲಿ.
ಅದರಲ್ಲೂ ಚಿಕ್ಕ ಕುಟುಂಬ ಹಿರಿಯರು ಇರದೆ, ಮಾರ್ಗದರ್ಶನದ ಕೊರತೆ.
ಪಾಶ್ಚಿಮಾತ್ಯ ಸಾಂಸ್ಕೃತಿಗೆ ಮಾರುಹೋಗಿದ್ದು.
ಅತಿಯಾದ ಆತ್ಮ ವಿಶ್ವಾಸ ನಾನೇನು ಕಡಿಮೆ ಇಲ್ಲ ಎನ್ನುವ ಮನೋಧೋರಣೆ.
ಪ್ರೀತಿ ಪ್ರೇಮ ಹೊಂದಾಣಿಕೆ ಇಲ್ಲದಿರುವುದು ಹೀಗೆ ಅನೇಕ ಕಾರಣ ಇವೆ.
ಭಾರತದಲ್ಲಿ 1867 ರಲ್ಲಿ ಬ್ರಿಟಿಷ್ ಸರಕಾರ ಡೈವೋರ್ಸ್ ಆಕ್ಟ್ ಜಾರಿಗೆ ತಂದಿದ್ದು. ಹಿಂದು ಆಕ್ಟ್ ಪ್ರಕಾರ 1955 ಮೇ 18 ರಂದು ಡೈವೋರ್ಸ್ ಆಕ್ಟ್ ಜಾರಿಗೆ ಬಂದಿದೆ.ಹಿಂದು ಆಕ್ಟ್ ಪ್ರಕಾರ ಈ ಸಮಸ್ಯೆಗಳು ಇದ್ದರೆ ಡೈವೋರ್ಸ್ ಖಂಡಿತ ತೆಗೆದುಕೊಳ್ಳಬೇಕು
ಮಾನಸಿಕ /ದೈಹಿಕ ಹಿಂಸೆ.
ಧೀರ್ಘ ಕಾಲದ incurrable ಕಾಯಿಲೆಗಳು ಇದ್ದರೆ.
ಗಂಡ /ಹೆಂಡತಿ
ಬೇರೆಯವರೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದರೆ .
ಸತತವಾಗಿ 2 ವರುಷಗಳ ವರೆಗೂ ಯಾವುದೇ ಸಂಪರ್ಕ ಇಲ್ಲದೆ ದೂರ ಇರುವುದು.
ಬೇರೆ ಧರ್ಮಕ್ಕೆ ಮತಾಂತರ ಆಗಿದ್ದರೆ. ಇವು ಮುಖ್ಯ ಕಾರಣಗಳು
ಅದರಲ್ಲೂ ಮದುವೆಯಾದ ದಿನದಿಂದ 1 ವರ್ಷ ನಾನು ಡೈವೋರ್ಸ್ ಗೆ ಅಪ್ಲಿಕೇಶನ್ ಹಾಕುವಂತ್ತಿಲ್ಲ. ಆದರೂ ಯುವಜನಾಂಗಕ್ಕೆ ಎಲ್ಲವು ಆತುರ, ತುರ್ತಾಗಿ ಡೈವೋರ್ಸ್ ಬೇಕು,ಮದುವೆಯಾಗಿ 6 ತಿಂಗಳು ಕೂಡ ಆಗಿರದಿದ್ದರೂ ನಮಗೆ ಅರ್ಜೆಂಟ್ ಡೈವೋರ್ಸ್ ಬೇಕು ಅಂದಾದರೆ mutual cancert ಡೈವೋರ್ಸ ಗೆ ಗಂಡ ಹೆಂಡತಿ ಇಬ್ಬರು ಅಪ್ಲಿಕೇಶನ್ ಹಾಕಿ ಪರಸ್ಪರರ ಒಪ್ಪಿಗೆಯ ಮೆರೆಗೆ ಡೈವೋರ್ಸ್ ಪಡೆಯಬಹುದು.
ಇಂದಿನ ಯುವ ಜನತೆಗೆ
ನನ್ನದೊಂದು ಪುಟ್ಟ ಮದುವೆಗಳು ಒಬ್ಬರನ್ನೊಬ್ಬರು ಪ್ರೀತಿಯ ಬಂಧನದಲ್ಲಿ ಬೆಸೆದ ಬಂಧನ, ಒಬ್ಬರನ್ನೊಬ್ಬರು ಪ್ರೀತಿಸಿ, ಗೌರವಿಸಿ, ಭಾವನೆಗಳನ್ನು ಅರ್ಥ ಮಾಡಿಕೊಂಡ, ನಮ್ಮದೇ ಆದ ಪುಟ್ಟ ಸಂಸಾರದಲ್ಲಿ ಮಕ್ಕಳು ಅಮ್ಮ ಅಪ್ಪ, ಅಜ್ಜಿ ತಾತ ಹೀಗೆ ಸಂಬಂಧಗಳನ್ನು ಬೆಸೆಯುವ ಜೇನುಗೂಡು ಆಗಬೇಕು, ಇನ್ನೊಬ್ಬರಿಗೆ ಮಾದರಿಯ ಕುಟುಂಬ ನಿಮ್ಮ ನಮ್ಮದಾಗಲಿ.
ಬದುಕೆ ಹಸಿರು ಪ್ರೀತೀ ಬೆರೆತಾಗ
ಬದುಕೆ ಕೇಸರಂತೆ ದ್ವೇಷ ಇರುವಾಗ
ಬದುಕೆ ಹಸಿರು ಪ್ರೀತೀ ಬೆರೆತಾಗ
ವಿಷದ ಮುಳ್ಳಂತೆ ಸೇಡು ಸಿಡಿದಾಗ
ಎಂದು ಕೌಟುಂಬಿಕ ಜೀವನ ಕುರಿತು ನಾವು ಅರಿತಾಗ ಬದುಕೇ ಹಸಿರು ಪ್ರೀತಿ ಬೆರೆತಾಗ. ಆ ಪ್ರೀತಿ ಪ್ರತಿ ದಾಂಪತ್ಯ ಜೀವನದಲ್ಲಿ ಸದಾ ಇರುವಂತಾಗಲಿ..
ನಂದಿನಿ.ಸು.ಸನಬಾಳ್
ಶಿಕ್ಷಕಿಯರು
ಕಲಬುರಗಿ