ಶಿಕ್ಷಕರ ವರ್ಗಾವಣೆಗೆ ನೂರೆಂಟು ವಿಘ್ನ!! ಪ್ರತಿ ವರ್ಷ ಹೊಸದೊಂದು ವಿವಾದ ಸೃಷ್ಟಿ ಮಾಡುವ ಶಿಕ್ಷಣ ಇಲಾಖೆ…
ವರ್ಗಾವಣೆ ಗೆ ನಿರಾಸಕ್ತಿ ತೋರಿಸಿದ್ರಾ ಶಿಕ್ಷಕರರು!!
ಒಂದು ಕಣ್ಣಿಗೆ ಬೆನ್ನೆ!ಇನ್ನೊಂದು ಕಣ್ಣಿಗೆ ಸುಣ್ಣ!
ಶಿಕ್ಷಕರ ವರ್ಗಾವಣೆ ಹಿಂದೆ ಇರುವ ಲಾಬಿ ಯಾವುದು???
ಬೆಂಗಳೂರು: ಪ್ರತಿವರ್ಷ ನೂರೆಂಟು ವಿವಾದ ಎದುರಿಸುತ್ತಿರುವ ಶಿಕ್ಷಕರ ವರ್ಗಾವಣೆಗೆ ಈಗ ಮತ್ತೊಂದು ವಿವಾದ ಸೇರಿಕೊಂಡಿದೆ. ಯಾವುದೇ ಕಾನೂನು ತಿದ್ದುಪಡಿ ಮಾಡದೇ ರಾಜ್ಯ ಸರ್ಕಾರ ಇದೀಗ ಕಡ್ಡಾಯ(ವಲಯ) ವರ್ಗಾವಣೆಯನ್ನು ರದ್ದುಗೊಳಿಸಿದೆ.
ಯಾವ ಲಾಬಿಗೆ ಸರ್ಕಾರ ಮಣಿದಿದೆ? ಎಂದು ಗ್ರಾಮೀಣ ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ.
ಪಟ್ಟಣದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದವರು ಗ್ರಾಮೀಣ ಪ್ರದೇಶಕ್ಕೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬರುವುದು ಕಡ್ಡಾಯ ವರ್ಗಾವಣೆಯ ವರ್ಗಾವಣೆ ರದ್ದು ಪಡಿಸಿದ ನಿರ್ಧಾರದಿಂದ ಅನೇಕ ವರ್ಷಗಳಿಂದ ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಪಟ್ಟಣಕ್ಕೆ ಬರುವ ಆಸೆ ಕಮರಿದೆಂತಾಗಿದೆ. ಅವಧಿ ಮುಗಿದ ಶಿಕ್ಷಕರು ಪಟ್ಟಣಕ್ಕೆ ನಿಯಮ. ಈಗ ಸರ್ಕಾರದ ಕಡ್ಡಾಯ
2013 ರ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿತ್ತು. ಆಗಿನ ಸಂದರ್ಭದಲ್ಲಿ ಗ್ರಾಮಿಣ ಶಿಕ್ಷಕರ ಮನವಿ ಮೇರೆಗೆ ಅಂದಿನ ಶಿಕ್ಷಣ ಸಚಿವ ತನ್ನೀರ್ ಶೇಶ್ ಅವರು ಪಟ್ಟಣದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿದವರು ಕಡ್ಡಾಯವಾಗಿ ಗ್ರಾಮೀಣ ಪ್ರದೇಶಕ್ಕೆ ಹೋಗಬೆಕೆಂಬ ಕಾನೂನು ತಂದಿದ್ದರು. ಅದರಲ್ಲಿ ಸಣ್ಣಪುಟ್ಟ ಕಾನೂನು ಲೋಪ ದೋಷಗಳು ಇದ್ದವು.ನಂತರ ಬಿಜೆಪಿ ಸರ್ಕಾರದಲ್ಲಿ ಸುರೇಶ್ ಕುಮಾರ್ ಶಿಕ್ಷಣ ಸಚಿವರಾಗಿದ್ದಾಗ ಅವರು ವಲಯ ವರ್ಗಾವಣೆ ಎಂದು ಬದಲಾಯಿಸಿ ಕಾನೂನು ತಂದಿದ್ದರು.
ಈಗ ಯಾವ ಕಾನೂನಿಗೂ ತಿದ್ದುಪಡಿ ಇಲ್ಲದೇ ನಿಯಮಗಳನ್ನು ಗಾಳಿಗೆ ತೂರಿ, ಪಟ್ಟಣ ಶಿಕ್ಷಕರ ಲಾಬಿಗೆ ಮಣಿದು ಸರ್ಕಾರ ಕಡ್ಡಾಯ ವರ್ಗಾವಣೆಯನ್ನು ರದ್ದು ಮಾಡಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಶಿಕ್ಷಕರಿಗೆ ಯಾವ ನ್ಯಾಯ ಒದಗಿಸಿದೆ ಎಂದು ಗ್ರಾಮೀಣ ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ.
ಕೆಲವು ವಲಯಗಳ ಶಿಕ್ಷಕರು 15 ರಿಂದ 20 ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೇ ತಾಲೂಕಿನ ಗ್ರಾಮೀಣ ಪ್ರದೇಶಗಳ ಶಾಲೆಗಳೇ ಶಿಕ್ಷಕರಿಗೆ ಕಾಯಂ ಆಗಿದೆ. ಅವರಿಗೆ ಪಟ್ಟಣಕ್ಕೆ ಬರುವ ಆಸೆ ಇದ್ದರೂ ಸಹ ಸರ್ಕಾರಗಳ ನಿರ್ಧಾರಗಳಿಂದ ಸಾಧ್ಯವಾಗುತ್ತಿಲ್ಲ. ಯಾವುದೇ ಸರ್ಕಾರ ಬರಲಿ, ಹಳ್ಳಿಗಳ ಶಿಕ್ಷಕರಿಗೆ ಪಟ್ಟಣಗಳಿಗೆ ಬರುವುದು ಮರೀಚಿಕೆಯಾದಂತಾಗಿದೆ.
ಎಚ್ಆರ್ಎ ಲಾಬಿ?
ರಾಜ್ಯದಲ್ಲಿ ಹತ್ತು ನಗರಗಳಲ್ಲಿ ಎಚ್ ಆರ್ಎ ಶೇ 16 ರಷ್ಟಿದ್ದರೆ ಗ್ರಾಮೀಣ ಪ್ರದೇಶಗಳಲ್ಲಿ ಶೇ 8 ರಷ್ಟು ಇದೆ. ಅನೇಕ ವರ್ಷಗಳಿಂದ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮಕ್ಕಳ ವಿದ್ಯಾಭ್ಯಾಸ, ನಂತರದಲ್ಲಿ ನೌಕರಿ ಸೇರಿದಂತೆ ನಗರಗಳ ಸವಲತ್ತು ಅನುಭವಿಸುತ್ತಿದ್ದಾರೆ. ಈಗ ನಗರ ಶಿಕ್ಷಕರ ಎಚ್ಆರ್.ಎ ಲಾಬಿಯೇ ಕಡ್ಡಾಯ ವರ್ಗಾವಣೆ ರದ್ದು ಮಾಡುವುದಕ್ಕೆ ಕಾರಣ ಎಂಬ ಚರ್ಚೆ ನಡೆಯುತ್ತಿದೆ.
ಪತಿ-ಪತ್ನಿ ಇಬ್ಬರಿಗೂ
ನಗರದಲ್ಲಿ ಪತಿ-ಪತ್ನಿ ಇಬ್ಬರೂ ಒಂದೇ ವೃತ್ತಿ, ಒಂದೇ ಶಾಲೆಯಲ್ಲಿ ಶಿಕ್ಷಕರಿದ್ದರೂ ಇಬ್ಬರಿಗೂ ಪ್ರತ್ಯೇಕವಾಗಿ ಎಚ್.ಆರ್.ಎ ನೀಡಲಾಗುತ್ತದೆ. ಇಬ್ಬರದ್ದೂ ಸೇರಿ ಶೇ 32 ರಷ್ಟು ಬಾಡಿಗೆ ಬರುತ್ತದೆ. ಒಂದು ವೇಳೆ ಗ್ರಾಮೀಣ ಪ್ರದೇಶಗಳಿಗೆ ವರ್ಗಾವಣೆ ಆದರೆ? ಈ ಸವಲತ್ತು ಇಲ್ಲವಾಗುತ್ತದೆ ಎಂಬ ಬೇಗುದಿಯೂ ನಗರ ಶಿಕ್ಷಕರನ್ನು ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಅನೇಕ ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ನ್ಯಾಯ ಸಿಕ್ಕಿಲ್ಲ. ಈ ಸರ್ಕಾರ ಎಲ್ಲವನ್ನೂ ಅಧ್ಯಯನ ನಡೆಸಿ ಅವರಿಗೆ ನ್ಯಾಯ ಒದಗಿಸಬೇಕು. ಶಿಕ್ಷಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು.
ಅರುಣ ಶಹಪೂರ ಮಾಜಿ ಎಂಎಲ್ಪಿ
ಬೆಂಗಳೂರು: ಶಿಕ್ಷಕರ ವರ್ಗಾವಣೆ ಅರ್ಜಿ ಸಂಖ್ಯೆ ಭಾರಿ ಇಳಿಕೆಯಾಗಿದೆ. ವರ್ಗಾವಣೆ ಕೋರಿ ಶಿಕ್ಷಕರು ಸಲ್ಲಿಸುತ್ತಿದ್ದ ಅರ್ಜಿ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ 10 ಸಾವಿರದಷ್ಟು ಕಡಿಮೆಯಾಗಿದೆ. ಈ ವರ್ಷ 63,571 ಅರ್ಜಿ ಸಲ್ಲಿಕೆಯಾಗಿವೆ.
ಸಲ್ಲಿಕೆಯಾದ 63,571 ಅರ್ಜಿಗಳಲ್ಲಿ 47,587 ಅರ್ಜಿಗಳು ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಸಂಬಂಧಿಸಿದ ಅರ್ಜಿಗಳಾಗಿವೆ.
15,974 ಅರ್ಜಿಗಳು ಪ್ರೌಢಶಾಲೆ ಶಿಕ್ಷಕರಿಂದ ಸಲ್ಲಿಕೆಯಾಗಿವೆ. ಕೋರಿಕೆ ವರ್ಗಾವಣೆಗೆ ಹೆಚ್ಚಿನ ಬೇಡಿಕೆ ಇದೆ.
ವರ್ಗಾವಣೆಗಾಗಿ ಶಿಕ್ಷಕರಿಂದ ಸಲ್ಲಿಕೆಯಾಗಿರುವ 63 ಸಾವಿರ ಅರ್ಜಿಗಳಲ್ಲಿ 59,582 ಅರ್ಜಿಗಳು ಕೋರಿಕೆ ವರ್ಗಾವಣೆಗೆ ಸಂಬಂಧಿಸಿವೆ.2303 ಅರ್ಜಿಗಳು ಪರಸ್ಪರ ವರ್ಗಾವಣೆ ಕೋರಿದ ಅರ್ಜಿಗಳಾಗಿವೆ. 1686 ಅರ್ಜಿಗಳು ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಸೇರಿವೆ ಎನ್ನಲಾಗಿದೆ.