ಕರ್ತವ್ಯದಲ್ಲಿದ್ದಾಗಲೆ ನೌಕರನಿಗೆ ಹೃದಯಘಾತ:
ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಯಲ್ಲಿಯೇ ಸಾವನ್ನಪ್ಪಿದ ನೌಕರ..
ಸಾವಿನ ಕೊನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಯಿತು!!!..
ಎಷ್ಟೇ ಒತ್ತಡವಿದ್ದರು ಸ್ವಲ್ಪ ಆರೋಗ್ಯದ ಕಡೆ ಗಮನ ಕೊಡಿ…
ರಾಮನಗರ: ಕರ್ತವ್ಯದಲ್ಲಿದ್ದ ಡಿ ಗ್ರೂಪ್ ನೌಕರ ಹೃದಯಾಘಾತದಿಂದ ಮೃತಪಟ್ಟಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಯೋಗ್ಯ ಕುಮಾರ್ (45) ಮೃತ ದುರ್ದೈವಿ.
ಯೋಗ್ಯ ಕುಮಾರ್ ಅವರು ಜಿಲ್ಲಾಧಿಕಾರಿ ಕಚೇರಿ ಡಿ ಗ್ರೂಪ್ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಮಧ್ಯಾಹ್ನ ಊಟ ಮಾಡುವ ವೇಳೆ ಏಕಾಏಕಿ ಹೃದಯಾಘಾತದಿಂದ ಸಂಭವಿಸಿ ಕುಸಿದು ಬಿದಿದ್ದಾರೆ.
ಇದನ್ನೂ ಗಮನಿಸಿದ ಕೂಡಲೇ ಯೋಗ್ಯ ಕುಮಾರ್ ಅವರನ್ನು ಸಹಪಾಠಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟೋತ್ತಿಗೆ ಯೋಗ್ಯ ಕುಮಾರ್ ಅವರು ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.