ವೃತ್ತಿಯಿಂದ ನಿವೃತ್ತಿ ಹೊಂದುವ ದಿನವೇ ಲೋಕಾಯುಕ್ತ ಪೋಲಿಸರ್ ಅತಿಥಿಯಾದ ಅಧಿಕಾರಿ..
ಕೆಲಸದ ಕೊನೆಯ ದಿನ ನೆಮ್ಮದಿಯಿಂದ ನಿವೃತ್ತಿ ಹೊಂದಿ,ಕುಟುಂಬ ಜೊತೆ ಕಾಲ ಕಳೆಯುವ ಮೊದಲೆ ಕಂಬಿ ಹಿಂದೆ ಹೋದ ಅಧಿಕಾರಿ..
ರಾಮನಗರ: ಇನ್ನೇನು ವೃತ್ತಿಯ ಕೊನೆ ದಿನ ಕೆಲಸ ಮುಗಿಸಿ ನಿವೃತ್ತಿ ಜೀವನ ಕಳೆಯಬೇಕಿದ್ದ ರಾಮನಗರ ಆರ್ಟಿಓ ಇದೀಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿವೃತ್ತಿ ದಿನ ಆರ್ಟಿಓ ಶಿವಕುಮಾರ್ನನ್ನು ಲೋಕಾಯುಕ್ತರು ಬಂಧಿಸಿದ್ದಾರೆ
ರಾಮನಗರ ಆರ್ ಟಿಓ ಆಗಿರುವ ಶಿವಕುಮಾರ್ ಅವರದ್ದು (ಜೂನ್ 28) ಕೆಲಸದ ಕೊನೆ ದಿನ ನಿವೃತ್ತಿಯಾಗುವವರು ಇದ್ದರು ಆದ್ರೆ, ಕೊನೆಯ ದಿನವೇ ಆರ್ ಟಿಓ ಶಿವಕುಮಾರ್ ಅವರಿಗೆ ಲೋಕಾಯುಕ್ತ ಬಿಗ್ ಶಾಕ್ ಕೊಟ್ಟಿದೆರಾಮನಗರ ಆರ್ ಟಿಓ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎನ್ನುವ ದೂರುಗಳ ಮೇರೆಗೆ ಲೋಕಾ ಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ
ಕೊನೆ ದಿನ ಕೆಲಸ ಮುಗಿಸಿ ಮನೆಗೆ ಹೊರಡಬೇಕೆಂದಿದ್ದ ಶಿವಕುಮಾರ್ ಲೋಕಾ ಯುಕ್ತ ಬಲೆಗೆ ಬಿದ್ದಿದ್ದಾರೆ.ಸರ್ಕಾರಕ್ಕೆ ಕೋಟ್ಯಾಂ ತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು, ರಾಮ ನಗರ RTO ಅಧಿಕಾರಿ ಶಿವಕುಮಾರ್, ಎಸ್ಡಿಎ ರಚಿತ್ ರಾಜ್ ಮತ್ತು ಬ್ರೋಕರ್ ಸತೀಶ್ ಅವರನ್ನು ಬಂಧಿಸಿದ್ದಾರೆ.
ಒಟ್ಟು 2 ಸಾವಿರ ಟ್ರ್ಯಾಕ್ಟರ್ಗಳಿಗೆ ಹೊಸ ದಾಖಲೆ ನೀಡಿರುವುದು ಬೆಳಕಿಗೆ ಬಂದಿದೆ. ತಪ್ಪು ಮಾಡಿದ ವರನ್ನು ಕಾಲ ಯಾರನ್ನು ಬಿಡುವುದಿಲ್ಲ ಅಂತಾರೆ ಅದರಂತೆ ಇನ್ನೇನು ಇಂದು ಕೊನೆ ದಿನ ಕೆಲಸ ಮುಗಿಸಿ ನಿವೃತ್ತಿ ಜೀವನ ಕಳೆಯಬೇಕಿದ್ದ ಆರ್ಟಿಓ ಇದೀಗ ಲೋಕಾಯುಕ್ತ ಬಲೆಗೆ ಬದ್ದು ಜೈಲು ಸೇರಿದ್ದಾರೆ.