ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದ 200 ಕ್ಕೂ ಹೆಚ್ಚು ಶಿಕ್ಷಕರು…
ಇವರ ಬೇಡಿಕೆಗಳೇನು? ತಮ್ಮ ಸಂಘಧ ವಿರುದ್ದ ತಾವೆ ತಿರುಗಿ ಬಿದ್ದರೆ?
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿರುದ್ಧ ತಿರುಗಿ ಬಿದ್ದ ಸಕಲೇಶಪುರದ ಶಿಕ್ಷಕರು..
2016 ಕ್ಕಿಂತ ಮುಂಚೆ 1 ರಿಂದ 7 ನೇ ತರಗತಿಗೆ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರು,, ಮುಂಬಡ್ತಿ ಪಡೆಯುವ ಬದಲು ಹಿಂಬಡ್ತಿ ಪಡೆದು 1 ರಿಂದ 5 ನೇ ತರಗತಿಯ PST ಶಿಕ್ಷಕ ಎಂಬ ಹಣೆಪಟ್ಟಿ ಕಟ್ಟಿಕೊಂಡು ಅವಮಾನಕ್ಕೊಳಗಾಗಿ ಈಗ 8 ವರ್ಷಗಳೇ ಕಳೆದಿವೆ.. ನ್ಯಾಯ ಕೊಡಿಸದೇ ಇರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ 200 ರೂ. ವಂತಿಕೆ ಕಟಾವಣೆ ನಿಲ್ಲಿಸುವಂತೆ ಸಕಲೇಶಪುರ ತಾಲೂಕಿನಲ್ಲಿ ಸಾಮೂಹಿಕವಾಗಿ 206 ಜನ ಶಿಕ್ಷಕರು ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು…
ನಮ್ಮ ಬೇಡಿಕೆಗಳು
2017 ರ C & R ನಿಯಮಾವಳಿಗಳನ್ನು 2016 ಕ್ಕಿಂತ ಮುಂಚೆ ನೇಮಕ ಹೊಂದಿದ ಶಿಕ್ಷಕರಿಗೆ ಪೂರ್ವಾನ್ವಯ ಮಾಡಬಾರದು, ಅಂದರೆ 1-7/8 ಕ್ಕೆ ನೇಮಕ ಹೊಂದಿದವರನ್ನು 1-5 ಕ್ಕೆ ಹಿಂಬಡ್ತಿ ನೀಡಿದ್ದನ್ನು ಹಿಂಪಡೆಯಲೇಬೇಕು…
2016 ಕ್ಕಿಂತ ಮುಂಚೆ ನೇಮಕ ಹೊಂದಿದ ಪದವಿ ಪೂರೈಸಿದ ಎಲ್ಲ ಶಿಕ್ಷಕರನ್ನು ಸೇವಾ ಜೇಷ್ಟತೆಯೊಂದಿಗೆ ಪದವೀಧರ (GPT) ಶಿಕ್ಷಕರೆಂದು ಪುನರ್ ಪದನಾಮ ಮಾಡಲೇಬೇಕು..
ಈ ಮೊದಲಿನ ಹೈ ಸ್ಕೂಲ್ C & R ನಿಯಮಾವಳಿಯಂತೆ 2016 ಕ್ಕಿಂತ ಮುಂಚೆ ನೇಮಕ ಹೊಂದಿದ B ED ಅರ್ಹತೆ ಪಡೆದ ಶಿಕ್ಷಕರು ಖಾಲಿಯಾಗುವವರೆಗೂ ಹೈ ಸ್ಕೂಲ್ ಬಡ್ತಿಗೆ ಪರಿಗಣಿಸಲೇಬೇಕು..
ಈ ಮೊದಲಿನಂತೆ ಸೇವಾಜೇಷ್ಠತೆ ಆಧರಿಸಿ ಮುಖ್ಯೋಪಾಧ್ಯಾಯ ಬಡ್ತಿಗೆ ನಮ್ಮನ್ನು ಪರಿಗಣಿಸಬೇಕು…
ರಾಜ್ಯದಾದ್ಯಂತ ಪದವೀಧರ ಶಿಕ್ಷಕರು ಈ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿರುದ್ಧ ತಿರುಗಿ ಬಿದ್ದಿದ್ದು ,,ಸಕಲೇಶಪುರ ತಾಲೂಕಿನಲ್ಲಿ ಈ ನಿಟ್ಟಿನಲ್ಲಿ ಮೊದಲು ಕಾರ್ಯ ಪ್ರವೃತ್ತರಾಗುತ್ತಿದ್ದಾರೆ..
ಈ ಸಂದರ್ಭದಲ್ಲಿ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷರಾದ ಕುಮಾರ್.. ಗೌರವಾಧ್ಯಕ್ಷರಾದ ಹರೀಶ್ ರೈ.. ಕಾರ್ಯದರ್ಶಿಗಳಾದ ತೇಜೇಶ್.. BRP ಕೃಷ್ಣ. CRP ಮಂಜುನಾಥ್.ಪದವೀಧರ ಸಂಘದ ಎಲ್ಲಾ ಪದಾಧಿಕಾರಿಗಳು,,, ನೌಕರರ ಸಂಘದ ಪದಾಧಿಕಾರಿಗಳು. ಹಾಗೂ ತಾಲೂಕಿನ ಎಲ್ಲ ಶಿಕ್ಷಕರು ಸಹ ಈ ಸಂದರ್ಭದಲ್ಲಿ ಭಾಗವಹಿಸಿ ಮನವಿ ಸಲ್ಲಿಸಿದರು..