ಶಿಕ್ಷಕ ದಂಪತಿಗಳಿಗೆ ಚಾಕೂ ತೋರಿಸಿ ಮನೆ ದರೋಡೆ ಮಾಡಿದ ಕಳ್ಳರು..
ಬೆಡ್ ರೂಂನಲ್ಲಿ ಮಲಗಿರುವಾಗಲೇ ಅಟ್ಯಾಕ…
ಶಿಕ್ಷಕ ದಂಪತಿ ಆಸ್ಪತ್ರೆಗೆ ದಾಖಲು..
ಜೂನ್ 23 ಚಿತ್ರದುರ್ಗ:- ಚಾಕು ತೋರಿಸಿ ಮನೆ ದರೋಡೆ ಮಾಡಿದ ಕಳ್ಳರು. ಪೋಲೀಸರಿಗೆ ಹೇಳಿದ ಕೊಲೆ ಮಾಡುತ್ತೆವೆ ಎಂದು ಬೆದರಿಕೆ ಹಾಕಿದ ಪ್ರಕರಣ ಜೂನ ೨೩ ರಂದು ನಡೆದಿದೆ..
ಚಳ್ಳಕೆರೆ ನಗರದ ಹೊರವಲಯದ ನಿರ್ಮಲ ಲಾಡ್ ಸಮೀಪ ಪೂಜಾ ಡಾಬ್ ಎದರು ಬೃಂದಾವನ ಮನೆಗೆ ಹಿಂಭಾಗಲಿನಿಂದ ನುಗ್ಗಿದ್ದ ಮೂರು ಜನ ಕಳ್ಳರು ಮನೆಯ ಮಾಲೀಕ ಶಿಕ್ಷಕ ಈರಣ್ಣ ಹಾಗೂ ಶಿಕ್ಷಕನ ಪತ್ನಿ ರಾಧ ಇಬ್ಬರಿಗೆ ಚಾಕು ತೋರಿಸಿ ಮಾರಣಾಂತಿಕ ಹಲ್ಲೆ ಮಾಡಿ ಹಣ ಬಂಗಾರದ ಒಡವೆ ಬೆಳ್ಳಿ ಒಡವೆಗಳನ್ನ ದೂಚಿ ಪರಾರಿಯಾಗಿದ್ದಾರೆ.
ಶನಿವಾರ ರಾತ್ರಿ 10.40 ರ ಸಮಯದಲ್ಲಿ ಈ ಘಟನೆ ನಡೆದಿದೆ.ಮನೆಯ ಹಿಂಭಾಗದ ಹಿಂಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಬೆಡ್ ರೂಮನಲ್ಲಿ ಮಲಗಿದ್ದ ಇಬ್ಬರ ದಂಪತಿಗಳನ್ನ ಚಾಕು ತೋರಿಸಿ ದೊಣ್ಣೆಯಿಂದ ಹಲ್ಲೆ ಮಾಡಿ ಮೈ ಮೇಲೆ ಹಾಕಿಕೊಂಡಿದ್ದ ಒವಡವೆಗಳನ್ನು ಹಾಗೂ ಬೀರುವಿನಲ್ಲಿದ್ದ ಹಣವನ್ನು ದೋಚಿ ಪೊಲೀಸರಿಗೆ ತಿಳಿಸಿದರೆ ಪ್ರಾಣ ತೆಗೆಯುತ್ತಿವೆ ಎಂದು ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ.
ಇನ್ನು ಅಕ್ಕ ಪಕ್ಕದ ಮನೆಯವರಿಗೆ ಕರೆ ಮಾಡಿದ ಶಿಕ್ಷಕರು, ಅಕ್ಕ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆರ್ ಎಫ್ ದೇಸಾಯಿ ಹಾಗೂ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಗಾಯಗೊಂಡ ದಂಪತಿಗಳನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ..