ಪರಿಶಿಷ್ಟರ ಮೇಲಿನ ದೌರ್ಜನ್ಯ ಬೆಂಗಳೂರು ಪರಿಶಿಷ್ಟರ ಮೇಲಿನ ದೌರ್ಜನ್ಯ ನಿರ್ವಹಿಸಲು ನಾಗರಿಕ ಹಕ್ಕು ನಿರ್ದೇಶನಾಲಯದ ( D. C. R) 33 ಘಟಕಗಳು ಪೊಲೀಸ್ ಠಾಣೆಗಳಿಂದ ರೂಪಿಸಲು ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಈ ತೀರ್ಮಾನ ಕೈಗೊಳ್ಳಲಾಗಿದೆ.
ಪ್ರತಿ ಜಿಲ್ಲೆಗೊಂದು ಪೊಲೀಸ್ ಠಾಣೆ ಮತ್ತು ಬೆಂಗಳೂರಿನಲ್ಲಿ ಎರಡು ವಿಶೇಷ ಪೊಲೀಸ್ ಠಾಣೆಗಳು ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣ ವರ್ಗಾವಣೆ ಮಾಡುವುದು. ಜಿಲ್ಲಾಡಳಿತ ಇಲಾಖೆಯಿಂದ(C. R. P. C) ಕಾಯ್ದೆ 1073 ಕಲಂ 2,SRD ತೀರ್ಮಾನ ತೆಗೆದುಕೊಳ್ಳಲಾಗಿದೆ ಕೆಲವು ರಾಜ್ಯಗಳಲ್ಲಿ ಈಗಾಗಲೇ ವಿಶೇಷ ಪೋಲಿಸ್ ಠಾಣೆ ಇದೆ.
ರಾಜ್ಯದಲ್ಲಿ 2022ರ ಡಿಸೆಂಬರ್ ಒಳಗೆ 7633 ಪ್ರಕರಣಗಳು ನ್ಯಾಯಾಲಯಕ್ಕೆ ಬಂದಿದ್ದು ಈ ಪೈಕಿ 1723 ಪ್ರಕರಣಗಳು ಖುಲಾಸೆ ಆಗಿದ್ದು 68 ಪ್ರಕರಣಗಳು ಶಿಕ್ಷೆ ಆಗಿದೆ.ಶಿಕ್ಷೆ ಪ್ರಮಾಣ 4% ಇದೆ.
ರಾಜ್ಯದಲ್ಲಿ ಪ್ರತಿ ವರ್ಷ 2000 ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಧಿಕ ದುಸ್ಥಿತಿ ಬಗ್ಗೆ ಅರಿವು ಮೂಡಿಸಲು ಸಹಾಯಕ ಆಗಬೇಕೆಂದು ಶ್ರೀ ಸಂಜೀವ ಚವ್ಹಾಣ KPCC ( ಪರಿಶಿಷ್ಟ ವಿಭಾಗ )ಜಿಲ್ಲಾ ಮಾಧ್ಯಮ ವಕ್ತಾರರು- ವಿಜಯಪುರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.