ಮೂಳೆ, ಕೀಲು ಸಮಸ್ಯೆ: ಮುಂಜಾಗ್ರತೆ, ಚಿಕಿತ್ಸೆಯೇ ಮದ್ದು:
ಡಾ ನಯನಾ ಭಸ್ಮೆ
ಮುನವಳ್ಳಿ ಪಟ್ಟಣದ ಹತ್ತಿರ ದ ಸಿಂದೋಗಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದ ಆವರಣದಲ್ಲಿ ಶ್ರೀ ಹಾಸ್ಪಿಟಲ್ ಸವದತ್ತಿ ಇವರ ಆಶ್ರಯದಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸಂಧಿವಾತ, ಮಂಡಿನೋವು, ಹಿಮ್ಮಡಿ ನೋವು, ಕೀಲು ಸಂಬಂಧಿ ಯಾವುದೇ ಸಮಸ್ಯೆಗಳು ಕಂಡುಬಂದ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಮೂಳೆ ಸಮಸ್ಯೆ, ಕೀಲು ನೋವಿನಿಂದ ಬಳಲುತ್ತಿರುವವರಿಗೆ ಸುಧಾರಿತ ವೈದ್ಯಕೀಯ ಕ್ಷೇತ್ರದಲ್ಲಿ ಪರಿಹಾರವಿದೆ ಎಂದು ಡಾ ನಯನಾ ಭಸ್ಮೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಲವು ಕೀಲು ತಜ್ಞರಾದ ಡಾ ಹೇಮಂತ್ ಭಸ್ಮೆ “ಜಂಕ್ ಆಹಾರ ಸೇವನೆ, ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿ, ಏರುತ್ತಿರುವ ಬೊಜ್ಜು, ಒತ್ತಡದ ಬದುಕು, ಗಂಟೆಗಟ್ಟಲೇ ಕೂತು ಕೆಲಸ ಮಾಡುವುದರಿಂದ ಮೂಳೆ ಮತ್ತು ಕೀಲು ಸಂಬಂಧಿತ ಕಾಯಿಲೆಗಳು ಬಾಧಿಸುತ್ತವೆ. ಆರಂಭದಲ್ಲೇ ವೈದ್ಯರನ್ನು ಭೇಟಿಯಾಗಿ, ನಿಯಮಿತ ಆರೋಗ್ಯ ತಪಾಸಣೆ, ಅಗತ್ಯ ಚಿಕಿತ್ಸೆ ಪಡೆಯುವುದರಿಂದ ಮೂಳೆ ಸಂಬಂಧಿತ ಕಾಯಿಲೆಗಳನ್ನು ದೂರವಿಡಬಹುದು’ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸತ್ಸಂಗಿಗಳಾದ ಯಶವಂತ ಗೌಡರ ಮಾತನಾಡಿ “ಒಬ್ಬರ ನೋವನ್ನು ಅರಿತುಕೊಳ್ಳುವ ಗುಣವನ್ನು ಬೆಳೆಸಿಕೊಂಡ ವರಿಗೆ ಇನ್ನೊಬ್ಬರ ನೋವಿನ ಅರಿವಾಗುತ್ತದೆ.ಅದೇ ರೀತಿ ಸಮಾಜದ ನೋವು ನಿವಾರಣೆಗಾಗಿ ಆರೋಗ್ಯ ವನ್ನು ಕಾಪಾಡಲು ತಮ್ಮನ್ನು ಸೇವಾಭಾವದೊಂದಿಗೆ ತೊಡಗಿಸಿಕೊಂಡಿರುವ ಭಸ್ಮೆ ದಂಪತಿಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಆಶೀರ್ವಚನ ನೀಡಿದ ಶ್ರೋತ್ರೀಯ ಬ್ರಹ್ಮ ನಿಷ್ಠ ಸದ್ಗುರು ಮುಕ್ತಾನಂದ ಸ್ವಾಮೀಜಿಯವರು “ಮೂಳೆಗಳ ಸವೆತದಿಂದ ಕೆಲವರಲ್ಲಿ ಮೊಣಕಾಲಿನ ಚಿಪ್ಪಿನಲ್ಲಿ ನೋವು ಕಾಣಿಸಿಕೊಂಡರೆ, ಇನ್ನೂ ಕೆಲವರ ಕೀಲುಗಳಲ್ಲಿ ಊರಿಯೂತ, ಕೂರಲು ಆಗದಂತಹ ಅಸಹಜ ಸ್ಥಿತಿ ಎದುರಾಗುತ್ತದೆ. ಇವುಗಳನ್ನು ಪರಿಹರಿಸಲು ಶ್ರೀ ಮಠದಲ್ಲಿ ಇಂದು ಉಚಿತವಾಗಿ ಎಲವು ಕೀಲು ತಪಾಸಣೆ ಶಿಬಿರ ಆಯೋಜಿಸಲಾಗಿದ್ದು ವೈದ್ಯರು ಹೇಳಿದ ಸಲಹೆ ಸೂಚನೆಗಳನ್ನು ಪಾಲಿಸುವಂತೆ ಕರೆ ನೀಡಿದರು.
ಈ ಶಿಬಿರದಲ್ಲಿ ರಕ್ತ ತಪಾಸಣೆ ರಕ್ತ ದೊತ್ತಡ ತಪಾಸಣೆ ಯನ್ನು ವಿದ್ಯಾ ಘಂಟಿ ಹಾಗೂ ಸಹಾಯಕ ರಾಗಿ ಆಸ್ಮಾ ದಫೇದಾರ. ಮೂಳೆ ಸಾಂದ್ರತೆಯನ್ನು ತಾಂತ್ರಿಕ ಸಹಾಯಕ ರಾದ ಸುರೇಶ. ಹಾಗೂ ಸೌಮ್ಯ ನೀರಸಾಗರ ನೆರವೇರಿಸಿದರು. ಕಾರ್ಯ ಕ್ರಮದ ಉಸ್ತುವಾರಿಯನ್ನು ಪ್ರಶಾಂತ್ ವಡ್ಲಿ ನಡೆಸಿಕೊಟ್ಟರು. ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷರಾದ ಅನುರಾಧ ಬೆಟಗೇರಿ. ಕದಳಿ ಮಹಿಳಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷರಾದ ಅನ್ನಪೂರ್ಣ ಲಂಬೂನವರ ಸತ್ಸಂಗ ಆಶ್ರಮದ ಸತ್ಸಂಗಿಗಳಾದ ಅನಸೂಯಾ ಹೊನ್ನಳ್ಳಿ. ಚನಬಸು ನಲವಡೆ. ಸವಿತಾ ಕೆಂದೂರ.ಜಯಕ್ಕ ಹೊನ್ನಳ್ಳಿ. ಚನ್ನವ್ವಕ್ಕ ಹಲಗತ್ತಿ ಮಂಜುನಾಥ ಬೆಟಗೇರಿ ಪಂಚನಗೌಡ ಬಿಕ್ಕನಗೌಡ.ಯಶವಂತ ಗೌಡರ. ಬಸವರಾಜ ಹಲಗತ್ತಿ.ವೀರಣ್ಣ ಕೊಳಕಿ.ಪ್ರವೀಣ ಪಡಶ್ಯಾವಿಗಿ.ಸೋಮು ಗರಗದ.ವೈ ಬಿ ಕಡಕೋಳ. ಶ್ರೀನಿವಾಸ ಕಮ್ಮಾರ ಮೊದಲಾದವರು ಉಪಸ್ಥಿತರಿದ್ದರು. ಸವದತ್ತಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಶ್ರೋ. ಬ್ರ. ನಿ. ಸ. ಮುಕ್ತಾನಂದ ಸ್ವಾಮೀಜಿ ಯವರಿಗೆ ಭಸ್ಮೆ ದಂಪತಿಗಳು ಗುರುರಕ್ಷೆ ನೀಡಿ ಗೌರವಿಸಿದರು. ವೀರಣ್ಣ ಕೊಳಕಿ ಕಾರ್ಯಕ್ರಮ ನಿರೂಪಿಸಿದರು. ಅನಸೂಯಾ ಹೊನ್ನಳ್ಳಿ ಪ್ರಾರ್ಥನಾ ಗೀತೆ ಹೇಳಿದರು. ಚನಬಸು ನಲವಡೆ ಸ್ವಾಗತಿಸಿದರು. ಪ್ರವೀಣ ಪಡಸ್ಯಾವಿಗೆ ವಂದಿಸಿದರು