ಲೋಕಸಭೆ ಚುನಾವಣೆ ಮುಗಿದ ನಂತರ ರಾಜ್ಯ ಸರ್ಕಾರದ ಎರಡು ಸಚಿವ ಸಂಪುಟ ಸಭೆ ನಡೆದಿವೆ.. ಎರಡು ಸಭೆಗಳಲ್ಲಿ ವೇತನ ಆಯೋಗದ ಕುರಿತು ಚರ್ಚೆ ನಡೆದಿಲ್ಲ..ಅಧಿಕೃತವಾಗಿ ಎಲ್ಲೂ ಕೂಡ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿಲ್ಲ..ಕೇವಲ ಮಾಧ್ಯಮಗಳಲ್ಲಿ ಮಾತ್ರ ಈ ಕುರಿತು ಚರ್ಚೆ ಯಾಗಿಲ್ಲ. ಎರಡು ಬಾರಿ ಕೂಡ ಸಚಿವ ಎಚ್ ಕೆ ಪಾಟೀಲ ಯಾವುದೇ ಚರ್ಚೆಯಾಗಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ…
ಕಳೆದ ಗುರುವಾರ ಸಿ ಎಸ್ ಷಡಕ್ಷರಿಯವರು ಮಾದ್ಯಮಗಳ ಜೊತೆ ಮಾತನಾಡಿ, ನಾವು ಸಿಎಮ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದಿದ್ದರು..ಸಚಿವ ಸಂಪುಟದಲ್ಲಿ ಚರ್ಚೆ ಯಾಗಿದೆ.. ಏಳನೇ ವೇತನ ಅಯೋಗ ಜಾರಿ ಸಿಎಮ್ ಅವರ ವಿವೇಚನೆ ಗೆ ಬಿಟ್ಟಿದೆ,ಜುಲೈ ಅಂತ್ಯದೊಳಗೆ ವೇತನ ಆಯೋಗ ಜಾರಿ ಆಗುತ್ತದೆ ಎಂದು ಹೇಳಿದ್ದರು..
ಸಿಎಮ್ ಅವರಿಗೆ
ಪರಮಾವಧಿ ನೀಡಲಾಗಿದೆ ಎಂದು ಹೇಳಲಾಗುತ್ತಿತ್ತು. ಆದ್ರೆ ಇದೆಲ್ಲವೂ ಸತ್ಯ ಕ್ಕೆ ದೂರವಾಗಿದೆ… ಸಚಿವರು ಹೇಳಿದ್ದ ನ್ನು ನಂಬಬೇಕೋ ಅಥವಾ ಸಿಎಸ್ ಷಡಕ್ಷರಿಯವರು ಹೇಳಿದ್ದನ್ನು ನಂಬಬೇಕು ಎಂಬುದು ತಿಳಿಯದಂತಾಗಿದೆ..
ರಾಜ್ಯ ಪ್ರವಾಸದಲ್ಲಿರುವ ಸಿಎಸ್ ಷಡಕ್ಷರಿಯವರು ವೇತನ ಆಯೋಗದ ಕುರಿತು ಮಾತನಾಡಿರುವ ಸುದ್ದಿ ಈ ಕೆಳಗಿನಂತಿದೆ..
ಬಾಗಲಕೋಟೆ: ರಾಜ್ಯ ಸರಕಾರ ಜುಲೈ ತಿಂಗಳ ಒಳಗಾಗಿ 7ನೇ ವೇತನ ಆಯೋಗದ ವರದಿ ಜಾರಿಗೆ ತರುವ ನಿರೀಕ್ಷೆ ಇದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನವನಗರದ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯರ ವಾರ್ಷಿಕ ಮಹಾಸಭೆ, ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ, ನೂತನ ಮಳಿಗೆಗಳ ಉದ್ಘಾಟನೆ ಹಾಗೂ ರಾಜ್ಯ, ಕೇಂದ್ರ ಸರಕಾರಿ ನೌಕರರ ಮತ್ತು ಖಾಸಗಿ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದ ಸರ್ವಸದಸ್ಯರ ಸಭೆಯಲ್ಲಿ ಅವರು ಮಾತನಾಡಿ, 7ನೇ ವೇತನ ಆಯೋಗದ ಜಾರಿಗೆ ಒತ್ತಾಯಿಸಿ ಈಗಾಗಲೇ ವಾರದಲ್ಲಿ ಎರಡು ಬಾರಿ ಸರಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ. ಒಂದು ವೇಳೆ ಜುಲೈನಲ್ಲಿ ವರದಿ ಅನುಷ್ಠಾನಗೊಳ್ಳದ್ದಿದ್ದಲ್ಲಿ ನೌಕರರ ಸಂಘ ಪ್ರತಿಭಟನೆಯ ಹಾದಿ ತುಳಿಯಲಿದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು..
7ನೇ ವೇತನ ಆಯೋಗದ ವರದಿ ಜತೆಗೆ ಹಳೇ ಪಿಂಚಣಿ ವ್ಯವಸ್ಥೆ ಜಾರಿ ಹಾಗೂ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಸರಕಾರದ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುತ್ತಿದೆ. ಸರಕಾರ ಗ್ಯಾರಂಟಿ ನಡುವೆ ನಮ್ಮ ಬೇಡಿಕೆ ಬಗ್ಗೆ ಯೋಚನೆ ನಡೆಸಿದೆ.