ಬೆಂಗಳೂರು: ಸರ್ಕಾರಿ ನೌಕರರ ಪ್ರಮುಖ ಬೇಡಿಕೆ OPS ಜಾರಿಗೆ ಸಂಬಂಧಿಸಿದಂತೆ ಇವತ್ತು ಸಿಎಮ್ ಸಿದ್ದರಾಯ್ಯವರನ್ನು ಶಾಂತಾರಾಮ ನೇತೃತ್ವದಲ್ಲಿ ಭೇಟಿ ಮಾಡಲಾಯಿತು..ಏಳನೇ ವೇತನ ಆಯೋಗ ಜಾರಿ ಎಷ್ಟು ಮಹತ್ವವೋ ಅಷ್ಟೇ ಮಹತ್ವ ಹಳೆ ಪಿಂಚಣಿ ಜಾರಿಗೆ ಇದೆ..
ಈ ದಿನ ದಿನಾಂಕ 22.6.2024 ರಂದು NPS to OPS ಗೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷರಾದ ಶ್ರೀ ಶಾಂತರಾಮ್ ತೇಜಾರವರ ನೇತೃತ್ವದಲ್ಲಿ, ಮಾನ್ಯ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಮಾನ್ಯ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ NPS ರದ್ದತಿಯ ಕುರಿತು ಅಂತಿಮ ಸಭೆಗೆ ದಿನಾಂಕ ವನ್ನು ನಿಗದಿಗೊಳಿಸಿ ಕೊಡುವಂತೆ ಕೋರಲಾಯಿತು.
ಮಾನ್ಯ ಮುಖ್ಯಮಂತ್ರಿಗಳು ಸಭೆಗೆ ದಿನಾಂಕವನ್ನು ನಿಗದಿಗೊಳಿಸಿ ಕೊಡುವುದಾಗಿ ಹಾಗೂ ಈ ವಿಷಯವನ್ನು ಕ್ಯಾಬಿನೆಟ್ ನಲ್ಲಿ ಚರ್ಚಿಸುವುದಾಗಿ ತಿಳಿಸಿರುತ್ತಾರೆ.