ಹೋಮ್ ವರ್ಕ್ ಮಾಡದ ವಿದ್ಯಾರ್ಥಿ ಗೆ ಥಳಿಸಿದ ಶಿಕ್ಷಕ!!ಎಲ್ಲೆಡೆ ವಿಡಿಯೋ ವೈರಲ್…
BEO ಅವರಿಂದ ನೋಟಿಸ್ ಜಾರಿ..
ಪೋಲಿಸ್ ಠಾಣೆ ಮೆಟ್ಟಿಲು ಏರಿದ ಪ್ರಕರಣ..
ಬೀದರ್: ಹೋಮ್ ವಕ್೯ ಮಾಡಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಶಿಕ್ಷಕರೊಬ್ಬರು ಥಳಿಸಿ ಮೃಗಿಯ ವರ್ತನೆ ತೋರಿರುವ ಘಟನೆ ಭಾಲ್ಕಿ ತಾಲೂಕಿನ ನಿಟ್ಟೂರ (ಬಿ) ಗ್ರಾಮದಲ್ಲಿ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈಗ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದೆ.
ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆಯ ಶಿಕ್ಷಕ ಜೈಶಂಕರ್ 8ನೇ ತರಗತಿ ವಿದ್ಯಾರ್ಥಿ ವೀರಪ್ಪ ಸಂತೋಷಕುಮಾರ ನಿಡೋದಾ ಎಂಬುವನ ಮೇಲೆ ಬರೆ ಹಾಕಿದ್ದು, ಈ ಬಗ್ಗೆ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾನೆ. ವಿದ್ಯಾರ್ಥಿಯ ಬೆನ್ನು, ಕೈ, ತೊಡೆ ಮೇಲೆ ಬಾಸುಂಡೆ ಬಂದಿವೆ.
ಶಿಕ್ಷಣ ಹಕ್ಕು ಕಾಯ್ದೆ ಅಡಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗಿದ್ದು, ಶಿಕ್ಷಕನ ಮೇಲೆ ಕ್ರಮಕೈಗೊಳ್ಳಬೇಕು. ಮೂರು ದಿನಗಳ ಒಳಗೆ ವರದಿ ನೀಡಬೇಕು ಎಂದು ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ್ ಹುಸೇನ್ ತಿಳಿಸಿದರು.
ಘಟನೆ ಸಂಬಂಧ ಶುಕ್ರವಾರ ಶಿಕ್ಷಕ ಮತ್ತು ವಿದ್ಯಾರ್ಥಿ, ಪಾಲಕರಿಗೆ ಪೊಲೀಸ್ ಠಾಣೆಗೆ ಕರೆಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.