ಶಾಲೆಗೆ ಚಕ್ಕರ ಹಾಕುವ ಶಿಕ್ಷಕರಿಗೆ ಮೂಗುದಾನ ಹಾಕುವರು ಯಾರು??
ಅಮಾನತ್ ಮಾಡಿದ್ರೆ ಸಾಲದು!! ಇಂತಹ ಶಿಕ್ಷಕರಿಗೆ ಯಾವ ಶಿಕ್ಷೆ…
ಶಿಕ್ಷಕರ ವಿರುದ್ದ ಆರೋಪಗಳ ಸುರಿಮಳೆ!! ಯಾವ ಶಾಲೆ? ನೀವೆ ನೋಡಿ…
ಕೂಡ್ಲಗಿ: ತಾಲ್ಲೂಕಿನಲ್ಲಿ ಕೆಲವು ಶಿಕ್ಷಕರು ಸಮಯ, ಕರ್ತವ್ಯ ನಿಷ್ಠೆ ಪಾಲನೆ ಮಾಡುತ್ತಿಲ್ಲ. ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸದಸ್ಯರು ಕಳೆದ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಕೆಲವು ಶಾಲೆಗಳಲ್ಲಿ 30 ವಿದ್ಯಾರ್ಥಿಗಳಿಗೆ ಮೂರು ಜನ ಶಿಕ್ಷಕರಿದ್ದರೂ ಗುಣ ಮಟ್ಟದ ಶಿಕ್ಷಣ ಕೊಡುವಲ್ಲಿ ವಿಫಲವಾಗಿದ್ದಾರೆ. 6ನೇ ತರಗತಿ ವಿದ್ಯಾರ್ಥಿಗಳಿಗೆ ಸರಿಯಾಗಿ ರಾಷ್ಟಗೀತೆ ಹಾಡಲು ಬರುವುದಿಲ್ಲ. ಮಗ್ಗಿ, ಪಾಠಗಳನ್ನು ನೋಡಿಕೊಂಡು ಓದಲು ಬರುವುದಿಲ್ಲ. ಇಂತವರನ್ನು ನೋಡಿಕೊಂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡುವುದನ್ನು ಮರೆತಿರುವ ಶಿಕ್ಷಕರು, ಶಾಲೆಯಲ್ಲಿ ಹಾಜರಾತಿಗೆ ಸಹಿ ಮಾಡಿ ಹೊರ ಹೋಗುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಬಿಸಿಯೂಟ ಹಾಗೂ ಹಾಲನ್ನು ಸರಿಯಾಗಿ ನೀಡುವುದಿಲ್ಲ. ಸರ್ಕಾರದ ಅದೇಶ ಪಾಲಿಸದೆ ಇರುವವರು ಗುಣ ಮಟ್ಟದ ಶಿಕ್ಷಣವನ್ನು ಕೊಡಲು ಹೇಗೆ ಸಾಧ್ಯ ಎಂದು ಮನವಿ ಪತ್ರದಲ್ಲಿ ಪಶ್ನಿಸಿದ್ದು, ಇಂತವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮಾನಾಭ ಕರಣಂ ಮನವಿ ಪತ್ರ ಸ್ವೀಕರಿಸಿದರು.
ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ, ತಾಲ್ಲೂಕು ಅಧ್ಯಕ್ಷೆ ಟಿ. ಭಾಗ್ಯ, ವಾಲ್ಮೀಕಿ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬೊಮ್ಮಗಟ್ಟ ಪಂಪಾಪತಿ, ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ಬಿ.ಟಿ. ಗುದ್ದು ಚಂದ್ರು, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕರಿಯಣ್ಣ, ಸದಸ್ಯರಾದ ಮಲ್ಲೇಶ, ಹರಕಬಾವಿ ಕೋಟೇಶ್, ಶ್ರೀಧರ್ ಆಚಾರಿ, ಮರುಳಸಿದ್ದಾಚಾರಿ, ನಭೀ ಸಾಬ್, ಕಾಪಲಮ್ಮ ಪಲ್ಗೊಂಡಿದ್ದರು.