ಯೋಗದಿಂದ ಮನಸ್ಸು ಶಾಂತವಾಗಿ ಮತ್ತು ಸಮಾದಾನ ಶರೀರ ಉಲ್ಲಾಸವಾಗಿರುತ್ತದೆ, ರವಿಚಂದ್ರ ದೊಡ್ಡಿಹಾಳ.
ಹೆಬ್ಬಳ್ಳಿ :
ಈ ಯೋಗ ಸಾವಿರಾರು ವಷ೯ಗಳ ಇತಿಹಾಸ ಇರುವಂತಹದು
ನಾವುಗಳು ಇದನ್ನು ನಮ್ಮ ದೇಹದ ಆರೋಗ್ಯ ಕಾಪಾಡುವದಕ್ಕಾಗಿ, ಪ್ರತಿದಿನ ಬೆಳಗ್ಗೆ ಸ್ವಲ್ಪ ಸಮಯ ಯೋಗ ಮಾಡಬೇಕು ಎಂದು ಹುಬ್ಬಳ್ಳಿಯ ಪಾವರ್ ಆಫ್ ಯುತ್ ಫೌಂಡೇಶನ್ ಅಧ್ಯಕ್ಷರಾದ ಆರ್ ಜಿ ದೊಡ್ಡಿಹಾಳ ಹೇಳಿದರು, ಅವರು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ, ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ವೈದ್ಯರಿಂದ ಮತ್ತು ಔಷಧಿಯಿಂದ ದೂರವಿರಲು,ಯೋಗ ಅತ್ಯಂತ ದೊಡ್ಡ ಔಷಧಿಯಾಗಿದೆ.ನಿತ್ಯ ಯೋಗ ಮಾಡುವುದನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು ಎಂದರು.
ಇಸ್ಲಾಂ ಧರ್ಮ ಗುರು ಮೌಲಾನಾ ಶಾಕೀರಲಿ ಯೋಗ ವ್ಯಾಯಾಮ ಮನಸ್ಸನ್ನು ಸದೃಢಗೊಳಿಸುವುದು. ಯೋಗಾಭ್ಯಾಸ ಈ ದಿನ ಮಾತ್ರ ಮಾಡುವುದಲ್ಲ. ಇದು ದಿನನಿತ್ಯದ ಕಾಯಕವನ್ನಾಗಿ ರೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಖ್ಯಶಿಕ್ಷಕಿ ಬಿ ಎಂ ಸುತಾರ ಸಹಶಿಕ್ಷಕರುಗಳಾದ ಎಲ್ ಐ ಲಕ್ಕಮ್ಮನವರ ಕೆ ಎಂ ಶಿವಳ್ಳಿ ದಾಲಪಟ ಕಲಾವಿದರ ಸಂಘದ ಅಧ್ಯಕ್ಷರಾದ ಯಲ್ಲಪ್ಪ ಸಾಲಿ ಮಕ್ಕಳ ಜೊತೆಗೆ ಯೋಗ ಮಾಡಿದರು.