ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ದಿಸೆಯಲ್ಲಿ ಶುಕ್ರವಾರ ಶಾಲೆ ನಡೆಸುವುದು ಸ್ವಾಗತಾರ್ಹ….
ಮತ್ತೆ ಮಾರನೆ ದಿನ ಶನಿವಾರದಂದು ಪೂರ್ಣ ದಿನ ಶಾಲೆ ಏಕೆ…??!!
ಮಕ್ಕಳ- ಶಿಕ್ಷಕರ ಹಕ್ಕು ಕಸಿದುಕೊಳ್ಳಬೇಡಿ…??!!
ಆದೇಶ ಪುನರ್ ಪರಿಶೀಲಸಲು ಆಗ್ರಹ..
ಬೆಂಗಳೂರು: ಶಿಕ್ಷಣ ಇಲಾಖೆಯ ಆದೇಶ ಈ ಕೆಳಗಿನಂತಿದೆ…
ವಿಷಯ : ದಿನಾಂಕ: 21.06.2024 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳಲ್ಲಿ ಯೋಗಭ್ಯಾಸವನ್ನು ಹಮ್ಮಿಕೊಳ್ಳುವ ಬಗ್ಗೆ.
ಉಲ್ಲೇಖ :ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳ ಮನವಿ ದಿನಾಂಕ: 20.06.2024.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ: 21.06.2024 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ / ಅನುದಾನಿತ / ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಬೆಳಗಿನ ಅವಧಿಯಲ್ಲಿ ಯೋಗಭ್ಯಾಸವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಸದರಿ ದಿನದಂದು (21.06.2024 ರಂದು) ಶನಿವಾರದ ಅವಧಿಯಂತೆ 1/2 ದಿನ ಶಾಲೆ ನಡೆಸಲು ಹಾಗೂ ದಿನಾಂಕ: 22.06.2024 ರ ಶನಿವಾರದಂದು ಪೂರ್ಣ ಅವಧಿ ಶಾಲೆಗಳನ್ನು ನಡೆಸಿ ಶಾಲಾ ಅವಧಿಯನ್ನು ಸರಿದೂಗಿಸಿಕೊಳ್ಳಲು ತಿಳಿಸಿದೆ…
ಶಿಕ್ಷಣ ಇಲಾಖೆಯ ಈ ಆದೇಶವನ್ನು ಶಿಕ್ಷಕ ವೃಂದ ಸ್ವಾಗತಿಸುತ್ತದೆ ಆದ್ರೆ ಬೆರೆ ಇಲಾಖೆಯಲ್ಲಿ ಸರ್ಕಾರಿ ನೌಕರರಿಗೆ ಹೆಚ್ಚು ರಜೆಗಳಿವೆ,ಈಗಾಗಲೇ ಶಿಕ್ಷಣ ಇಲಾಖೆಯಲ್ಲಿ ರಜೆಗಳನ್ನು ಕಡಿತಗೊಳಿಸಲಾಗಿದೆ..ಶನಿವಾರದಂದು ಪೂರ್ಣ ದಿನ ಶಾಲೆ ನಡೆಸದೆ ಎಂದಿನಂತೆ ಅರ್ಧ ದಿನ ನಡೆವುದು ಸೂಕ್ತವಾಗಿದೆ ಎಂದು ಕರ್ನಾಟಕ ಸರ್ಕಾರಿ ಗ್ತಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯಾದ್ಯಕ್ಷರಾದ ಅಶೋಕ ಎಮ್ ಸಜ್ಜನ ಆಗ್ರಹಿಸಿದ್ದಾರೆ..
ಇಲಾಖೆಯ ಇ ಆದೇಶದಿಂದ ಮಕ್ಕಳ ಹಕ್ಕನ್ನು ಕಸಿದುಕೊಂಡಂತಾಗುತ್ತದೆ.. ಶಿಕ್ಷಕರಿಗೂ ಶನಿವಾರದಂದು ಅವರ ಕುಟುಂಬದ ಜೊತೆ ಸಮಯ ಕಳಿಯಲು ಆಗುವುದಿಲ್ಲ, ಪೂರ್ವ ನಿಯೋಜಿಜ ಕಾರ್ಯಕ್ರಮ ಗಳಿಗೆ ತೊಂದರೆಯಾಗುತ್ತದೆ…
ಈ ಆದೇಶವನ್ನು ಶಿಕ್ಷಕ ಸಂಘಟನೆಗಳು ಹಾಗೂ ಸರ್ಕಾರಿ ನೌಕರರ ಸಂಘ ಶಿಕ್ಷಣ ಇಲಾಖೆಯ ಆಯಕ್ತರನ್ನು ಭೇಟಿ ಮಾಡಿ ಇಲಾಖೆಯ ಆದೇಶವನ್ನು ಮರು ಪರಿಶೀಲಿಸುವುದು ಅಗತ್ಯವಿದೆ…ಶನಿವಾರದಂದು ಎಂದಿನಂತೆ ನಡೆಸುವಂತೆ ಆದೇಶಿಸುವುದು ಅಗತ್ಯವಿದೆ..