ಶ್ರೇಷ್ಠ ವೈದ್ಯ ಡಾ|| ಶರಣಬಸಪ್ಪ ಕ್ಯಾತನಾಳ
ಕಲಬುರಗಿ ಭಾಗದಲ್ಲಿ ಡಾ. ಶರಣಬಸಪ್ಪ ಕ್ಯಾತನಾಳ ವೈದ್ಯಕೀಯ ಕ್ಷೇತ್ರದ ಕಾರ್ಯಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು ಇಡೀ ಕರ್ನಾಟಕವೇ ಕಲಬುರಗಿಯತ್ತ ನೋಡುವಂತೆ ಸೇವೆ ಸಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು.
೨೦೧೯ ರಲ್ಲಿ ಇಡೀ ಕಲಬುರಗಿಯಲ್ಲಿ ಕೋವಿಡ್ ಮೊದಲ ಫೇಸ್ ಪತ್ತೆಯಾದಾಗ ಸೇವೆ ಸಲ್ಲಿಸಿದ ಇವರಿಗೆ ಆಗಿನ ಜಿಲ್ಲಾಧಿಕಾರಿಗಳು ಶರತ ಅವರು ಇವರ ಸೇವೆಯನ್ನು ಮನಗಂಡು ಇವರನ್ನು ಬಾಸ್ ಹಾಗೂ ಡೈನಾಮಿಕ್ ಡಾಕ್ಟರ ಎಂದು ಕರೆಯುತ್ತಿದ್ದರು. ಜಗತ್ತು ಕೋವಿಡ್-೧೯ ಎಂಬ ಮಹಾಮಾರಿಗೆ ಕಂಗೆಟ್ಟ ಆ ಸಮಯದಲ್ಲಿ ಭಾರತದ ಪ್ರಥಮ ಕೋವಿಡ್ ರೋಗಿ ನಮ್ಮ ಕಲಬುರಗಿಯಲ್ಲಿ ದಿ:: ಶ್ರೀ ಹುಸೇನ್ ಸಿದ್ದಿಕ್ ಇವರ ಮರಣ ಹೊಂದಿದ ಸಮಯ ಜನತೆಯಲ್ಲಿ ತಲ್ಲಣ ಮೂಡಿತು. ದಿ:: ಶ್ರೀ ಹುಸೇನ್ ಸಿದ್ದಿಕ್ ಸಾವಿನ ಸಂದರ್ಭದಲ್ಲಿ ಎಲ್ಲೆಲ್ಲೂ ಭಯದ ವಾತಾವರಣ ಇದ್ದೀತಾದರು ಯಾವುದಕ್ಕು ಹಿಂಜರೆಯದೆ ದಿ:: ಶ್ರೀ ಹುಸೇನ್ ಸಿದ್ದಿಕ್ ಅವರ ಅಂತ್ಯ ಸಂಸ್ಕಾರವನ್ನು ಮಾಡಿದಲ್ಲದೆ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಿ ಅನೇಕ ಒತ್ತಡಗಳ ನಡುವೆಯು ದಿ: ಹುಸೇನ್ ಸಿದ್ದಿಕ್ ಅವರ ಕುಟುಂಬಕ್ಕೆ ಭೇಟಿ ಮಾಡಿ ಕುಟುಂಬಸ್ಧರನ್ನು ಪ್ರಥಮ ಕ್ವಾರಂಟೈನ್ ಹಾಗೂ ದ್ವಿತೀಯ ಕ್ವಾರಂಟೈನ್ನಲ್ಲಿ ಉಳಿಯುವಂತೆ ಹೇಳಿ ಧೈರ್ಯ ಕೊಟ್ಟು ಸಮಸ್ಯೆಯನ್ನು ಹತೋಟಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದರು. ಕೋವಿಡ್ ಸಮಯದಲ್ಲಿ ಕಲಬುರಗಿ ಯಾದ್ಯಂತ ಅನೇಕ ಕ್ವಾರಂಟೈನ್ ಹಾಗೂ ಐಸೋಲೇಶನ ಸೆಂಟರಗಳನ್ನು ಮಾಡಿ ಅಲ್ಲಿ ಕೋವಿಡ್ ರೋಗಿಗಳಿಗೆ ಬೇಕಾದ ಹಾಸಿಗೆ.ಆಕ್ಸಿಜನ್, ಹಾಗೂ ಸುಸಜ್ಜಿತವಾದ ಚಿಕಿತ್ಸೆಗಳನ್ನು ಅಚ್ಚುಕಟ್ಟಾಗಿ ನೀಡಿದರು.
ಅಲ್ಲದೇ ಅಯುಷ್ಮಾನ ಭಾರತ ಯೋಜನೆ ಅಡಿಯಲ್ಲಿ ಒಳಪಡುವ ಆಸ್ಪತ್ರೆಯಲ್ಲಿಯೂ ಕೂಡ ಡಾ|| ರಾಜಾ ಪಿ. (ಪಿ.ಓ) ಇವರೊಂದಿಗೆ ಕೂಡಿ ಹೆಚ್ಚಿನ ಹಾಸಿಗೆ ಹಾಗೂ ಆಕ್ಸಿಜನ್ ಹಾಗೂ ಚಿಕಿತ್ಸಾ ವೆಚ್ಚಗಳನ್ನು ಸರಕಾರಿ ಖರ್ಚಿನಲ್ಲಿ ಮಾಡಿಸಲಾಯಿತು. ಕೋವಿಡ್ ೧೯ ಸಂದರ್ಭದಲ್ಲಿ ಸತತವಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ಯಾತನಾಳ ದಂಪತಿಗಳು ಹಾಗೂ ಇವರ ಮಕ್ಕಳು ಕೂಡ ಅನೇಕ ಬಾರಿ ಕೋವಿಡ್ ಕಾಯಿಲೆಗೆ ತುತ್ತಾದರು. ಆದರೂ ಇವರ ಸೇವೆ ಹಾಗೂ ದೇವರ ಆಶೀರ್ವಾದ ಇವರನ್ನು ರಕ್ಷಿಸಿದ್ದು. ೨೦೨೧ ರ ಕೋವಿಡ್ ಸಂದರ್ಭದಲ್ಲಿ ಇವರ ತಂದೆಯವರಾದ ರಾಯಪ್ಪ ಕ್ಯಾತನಾಳ ಕೋವಿಡ್ಗೆ ಬಲಿಯಾದರು. ಡಾ|| ಶರಣಬಸಪ್ಪ ಕ್ಯಾತನಾಳ ೧೯ ನೇ ಜೂನ್ ೧೯೭೧ ಕಲಬುರಗಿಯಲ್ಲಿ ಜನಿಸಿದರು. ಡಾ|| ಶರಣಬಸಪ್ಪ ಕ್ಯಾತನಾಳ ಇವರ ತಂದೆ ದಿ: ರಾಯಪ್ಪ ಕ್ಯಾತನಾಳ (ನಿವೃತ್ತ ತಹಸೀಲ್ದಾರ) ತಾಯಿ ಶಂಕರಲಿಂಗಮ್ಮ (ನಿವೃತ್ತಿ ಐ.ಓ.ಎಸ್) ಸಹೋದರ ದಿ: ಚಂದ್ರಕಾಂತ ಕ್ಯಾತನಾಳ (ಇಂಜಿನೀಯರ) ಸೋದರಿ ಅನುಸೂಯಾ ಕೊಲ್ಲೂರ (ಶಿಕ್ಷಕಿ) ಇನ್ನೊಬ್ಬ ಸಹೋದರಿ ಸುಧಾ ದಂತೆ (ಪಿ.ಡಿ.ಓ) ಡಾ|| ಶರಣಬಸಪ್ಪ ಕ್ಯಾತನಾಳ ಇವರ ಪ್ರಾಥಮಿಕ ಶಿಕ್ಷಣ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆ ಕಲಬುರಗಿ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ವಿಜಯವಿದ್ಯಾಲಯ ಶಿಕ್ಷಣ ಸಂಸ್ಧೆ ಕಲಬುರಗಿ ಸಿದ್ಧಾರ್ಥ ಮೆಡಿಕಲ್ ಕಾಲೇಜ್ ತುಮಕೂರಿನಲ್ಲಿ ಎಂ.ಬಿ.ಬಿ.ಎಸ್. ಮುಗಿಸಿರುತ್ತಾರೆ.
ಸೇವೆಯೊಂದಿಗೆ ಡಿಪ್ಲೋಮಾ ಇನ್ ಮೆಡಿಕಲ್ ಹೆಲ್ಥ ಮತ್ತು ಡಿಪ್ಲೋಮಾ ಇನ್ ಹೆಲ್ಥ & ಫ್ಯಾಮಿಲಿವೆಲ್ಫೇರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ವಾಹಣೆ) ನಗರದಲ್ಲಿ ಓದಿದ್ದ ಇವರು ಸೇವೆಗೆ ಸೇರಿದ್ದು ೧೦ ಮಾರ್ಚ ೨೦೦೧ ಪ್ರಾಥಮಿಕ.ಆರೋಗ್ಯ.ಕೇಂದ್ರ ಕಮಲಾಪೂರಿನಲ್ಲಿ ಗುತ್ತಿಗೆ ಆಧಾರದ ಮೇಲೆ ತಮ್ಮ ಸೇವೆಯನ್ನು ಆರಂಭಿಸಿರುತ್ತಾರೆ.
೨೧ ನೇ ಫೆಬ್ರವರಿ ೨೦೦೩ ರಲ್ಲಿ ಡಾ|| ರವಿಕಾಂತಿ ಕ್ಯಾತನಾಳ ವೈದ್ಯರು (ಎಂ.ಬಿ.ಬಿ.ಎಸ್., ಎಂ.ಡಿ) ಇವರೊಂದಿಗೆ ಮದುವೆಯಾದರು. ಇವರಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದು ಹಿರಿಯವ ಚಿರಂಜೀವಿ ಕ್ಯಾತನಾಳ (ಎಂ.ಬಿ.ಬಿ.ಎಸ್) ಓದುತ್ತಿದ್ದು, ಕಿರಿಯ ಮಗ ರಿಷಿಕಾಂತ ಕ್ಯಾತನಾಳ (ಕಂಪ್ಯೂಟರ್ ಇಂಜಿನೀಯರ್) ಓದುತ್ತಿರುವರು. ೨೦೦೩ ರಲ್ಲಿ ಸೇವೆಗೆ ಸೇರಿದ ಡಾ|| ರವಿಕಾಂತಿ ಕ್ಯಾತನಾಳ ಮೇಡಂ ಇವರು ಯಾದಗಿರಿ ಜಿಲ್ಲೆಯ ದೋರನಹಳ್ಳಿಯಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ನಂತರ ಕಡಗಂಚಿ ಹಾಗೂ ಕಮಲಾಪೂರದಲ್ಲಿ ವೈದ್ಯ ದಂಪತಿಗಳು ಜೊತೆಯಾಗಿ ತಮ್ಮ ಸೇವೆಯನ್ನು ಆರಂಭಿಸಿದರು.
ನಗರದಲ್ಲಿ ಬೆಳೆದ ಇವರಿಗೆ ಗ್ರಾಮೀಣ ಪ್ರದೇಶಗಳಿದ್ದು ಸೇವೆ ಮಾಡಲು ಕಷ್ಟದ ಕೆಲಸವೇ ಆಗಿತ್ತು. ಆದರೂ ಸಹ ಸೇವಾ ಮನೋಭಾವನೆ ಹೊಂದಿದ ಇವರು ಕಮಲಾಪೂರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ತಮ್ಮ ಸೇವೆ ನೀಡುತ್ತಿದ್ದರು. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಹೀಗೆ ಅನೇಕ ಸಮಸ್ಯೆಗಳ ಮಧ್ಯೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ೧೫ ಟೊಬಕ್ಟಮಿ ಆಪರೇಶನಗಳನ್ನು ಮಾಡುತ್ತಿದ್ದರು. ರಾಷ್ಟ್ರೀಯ ಕಾರ್ಯಕ್ರಮಗಳ ಅಡಿ ಮಲೇರಿಯಾ ನಿರ್ಮೂಲನ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಹಾಗೆಯೇ ಪ್ರತಿ ೧೦ ರಂತೆ ತಿಂಗಳಿಗೆ ೩೫೦ ಬಾಣತನ ಹಾಗೂ ೧೦೦ ಟೊಬಕ್ಟಮಿ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ೧೦ ವರ್ಷಗಳ ಸಾರ್ಥಕ ಸೇವೆ ಮಾಡಿದ ಕ್ಯಾತನಾಳ ದಂಪತಿಗಳು ಕಮಲಾಪೂರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿರಪರಿಚತರಾಗಿರುವರು.
ಈ ದಂಪತಿಗಳು ಅನೇಕ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಗೆ ಒಳಪಡುವ ರೋಗಿಗಳಿಗೆ ಸ್ವಂತ ಖರ್ಚಿನಿಂದ ಅಂಬ್ಯೂಲನ್ಸ್ ವ್ಯವಸ್ಧೆ ಹಾಗೂ ವೈದ್ಯಕೀಯ ನೆರವು ನೀಡಿದ್ದು ಜನರು ಮರೆಯುವಂತಿಲ್ಲ. ಹಾವು, ಚೇಳುಗಳು ಓಡಾಡುವ ಗ್ರಾಮೀಣ ಪ್ರದೇಶಗಳಲ್ಲಿಯೇ ಇವರ ಮಕ್ಕಳ ಲಾಲನೆ ಪೋಷಣೆ ಮಾಡಿದರು. ೭ ನೇ ಜುಲೈ ೨೦೦೭ ರಲ್ಲಿ ಖಾಯಂ ವೈದ್ಯರಾಗಿ ಸೇವೆ ಮುಂದುವರಿಸಿದ ಇವರು ೨೦೧೨ ರಲ್ಲಿ ಪಾಥಮಿಕ್ರ.ಆರೋಗ್ಯ.ಕೇಂದ್ರ ರಹಮತ್ ನಗರ ಕಲಬುರಗಿಯಲ್ಲಿ ವರ್ಗಾವಣೆಗೊಂಡು ಸೇವೆ ಮುಂದುವರಿಸಿದರು. ೨೦೧೫ ರಲ್ಲಿ ಜಿಲ್ಲಾ ಲ್ಯಾಪರಸಿ (ಡಿ.ಎಲ್.ಓ) ಅಧಿಕಾರಿಯಾಗಿ ಬಡ್ತಿ ಹೊಂದಿದ ಇವರು ತಮ್ಮ ಅವಧಿಯಲ್ಲಿ ಲ್ಯಾಪರಸಿ ರೋಗದ ಬಗ್ಗೆ ಜಾಗೃತಿ ಮೂಡಿಸಿ ಲ್ಯಾಪರಸಿ ನಿರ್ಮೂಲನೆ ಮಾಡುವಲ್ಲಿ ಶ್ರಮಿಸಿದರು. ವಿವಿಧ ತಾಲೂಕುಗಳಲ್ಲಿ ತಂಡಗಳನ್ನಾಗಿ ಮಾಡಿ ಕುರುಡುತನ ಪತ್ತೆ ಹಚ್ಚಿ ಯಶಸ್ವಿ ಶಸ್ತ್ರಚಿಕಿತ್ಸೆಗಳ ಮೂಲಕ ಕುರುಡುತನ ನಿರ್ಮೂಲನೆ ಮಾಡುವಲ್ಲಿ ರಾಜ್ಯದಲ್ಲಿ ಕಲಬುರಗಿ ಜಿಲ್ಲೆಯೂ ೩ ನೇ ಸ್ಧಾನ ಪಡೆಯಿತು.
ಮುಂದೆ ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿಯಾಗಿ ಬಡ್ತಿ ಹೊಂದಿದ ಡಾ|| ಶರಣಬಸಪ್ಪ ಕ್ಯಾತನಾಳ ಇವರ ನೇತ್ರತ್ವದಲ್ಲಿ ಪ್ರತಿ ತಾಲೂಕುಗಳನ್ನು ತಂಡಗಳನ್ನು ಮಾಡಿ ತಾಲೂಕು ಕೇಂದ್ರಗಳಲ್ಲಿಯ ಕ್ಯಾಂಪ್ಗಲ್ಲಿ ಮಾನಸಿಕ ರೋಗಿಗಳ ಪತ್ತೆ ಹಾಗೂ ಮಾನಸಿಕ ವೈದ್ಯರಿಂದ ಯಶಸ್ವಿ ಚಿಕಿತ್ಸೆ ನೀಡುತ್ತಿದ್ದು ಕಲಬುರಗಿ ಜಿಲ್ಲೆಯನ್ನು ರಾಜ್ಯದಲ್ಲಿ ೨ನೇ ಸ್ಧಾನಕ್ಕೆ ತಂದ ಶ್ರೆಯಸ್ಸು ಇವರಿಗೆ ಸಲ್ಲುತ್ತದೆ. ನಂತರ ತಾಲೂಕು ವೈದ್ಯಾಧಿಕಾರಿ (ಟಿ.ಹೆಚ್.ಓ) ಆಗಿ ನಗರ ಹಾಗೂ ಗ್ರಾಮೀಣ ಆಸ್ಪತ್ರೆಗಳ ನಿರ್ವಹಣೆ ಮಾಡಿದರು. ೨೦೨೨ ರಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ (ಕೆಟಿಎಂಇ) ಯಾಗಿ ಬಡ್ತಿ ಹೊಂದಿದ್ದು ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡುವಾಗ ಯಾವುದೇ ಆಮಿಷಕ್ಕೆ ಬಲಿಯಾಗದೆ ಅಚ್ಚುಕಟ್ಟಾದ ಸೇವೆಗೆ ಸಿದ್ಧವಿರುವ ಆಸ್ಪತ್ರೆಗಳಿಗೆ ಮಾತ್ರ ಅನುಮತಿ ನೀಡುತ್ತಿದ್ದರು PCPNDT ಅಡಿಯಲ್ಲಿ ಬ್ರೂಣಪತ್ತೆ ಹಾಗೂ ಹೆಣ್ಣು ಬ್ರೂಣಹತ್ತೆ ಮಾಡುವ ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ಅವರ ಪರವಾನಿಗೆ ಲೈಸನ್ಸ್ ರದ್ದುಪಡಿಸಿ ಬ್ರೂಣಹತ್ತೆ ತಡೆಯುವಲ್ಲಿ ಯಶಸ್ವಿ ಕಾರ್ಯ ನಿರ್ವಹಿಸಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಕಲಿ ವೈದ್ಯ ಹಾಗೂ ಆರ್.ಎಂ.ಪಿ. ವೈದ್ಯರನ್ನು ಪತ್ತೆ ಹಚ್ಚಿ ರೇಡ್ ಹಾಕುತ್ತಿದ್ದರು. LAQSHA ಅಡಿಯಲ್ಲಿ ಗರ್ಬಿಣಿ ಸ್ತ್ರೀಯರಿಗೆ ಹಾಗೂ ಸುಸಜ್ಜಿತ ಸುರಕ್ಷಿತ ಬಾಣಂತನ ಸೇವೆಯನ್ನು ಒದಗಿಸಿದರು. ನಂತರ NQUAS (ರಾಷ್ಟ್ರೀಯ ಗುಣಮಟ್ಟದ ನೋಡಲ್ ಅಧಿಕಾರಿ ೧೩ ಪ್ರಾ.ಆ.ಕೇಂದ್ರ ೧ ಜಿಲ್ಲಾ ಆಸ್ಪತ್ರೆ, ೩ ತಾಲೂಕು ಆಸ್ಪತ್ರೆಗಳಿಗೆ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಎಲ್ಲಾ ಚಿಕಿತ್ಸೆಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿದರು. ಇವರ ಅವಧಿಯಲ್ಲಿ ರಾಜ್ಯಕ್ಕೆ ಶೇ. ೯೮ ರಷ್ಟು ಸಾಧನೆ ಮಾಡಿ ತೋರಿಸಿದ್ದು ಶ್ಲಾಘನೀಯ.
ಜುಲೈ ೨೦೨೩ ರಲ್ಲಿ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ RCHO ಅಧಿಕಾರಿಯಾಗಿ ಗರ್ಭಿಣಿ ಹಾಗೂ ಗಂಡಾಂತರ ಗರ್ಭಿಣಿ ಹಾಗೂ ಶಿಶುಗಳಿಗೆ ಹಾಕುವ ಲಸಿಕೆಗಳನ್ನು ಯಶಸ್ವಿಯಾಗಿ ನೀಡುತ್ತಾರೆ. ಗರ್ಭಿಣಿ ಸ್ತ್ರೀಯರ ಚಿಕಿತ್ಸೆ ಹಾಗೂ ಆರೋಗ್ಯಕರ ಬಾಣಂತನ ಹಾಗೂ ತಾಯಿ ಹಾಗೂ ಶಿಶುಮರಣ ತಪ್ಪಿಸಲು ಕೈಗೊಳ್ಳುತ್ತಿರುವ ಚಿಕಿತ್ಸಾ ವಿಧಾನಗಳನ್ನು ಇಡೀ ರಾಜ್ಯವೇ ಕಲಬುರಗಿಯನ್ನು ಮಾದರಿಯಾಗಿ ಮಾಡಿರುವುದಲ್ಲದೇ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯವರು ಕೂಡ ಕಲಬುರಗಿಯ ಚಿಕಿತ್ಸಾ ವಿಧಾನಗಳನ್ನು ಅನುಸರಿಸುವರು. ಈ ನಿಟ್ಟಿನಲ್ಲಿ ಕಲಬುರಗಿಯನ್ನು ರಾಜ್ಯದಲ್ಲಿ ನಂ.೧ ಸ್ಧಾನಕ್ಕೆ ತಂದ ಶ್ರೆಯಸ್ಸು ಡಾ|| ಕ್ಯಾತನಾಳ ಸರ್ ಯವರಿಗೆ ಸಲ್ಲುತ್ತದೆ.
RBSK ಅಡಿಯಲ್ಲಿ ಬಾಲಕರಿಗೆ ಹೃದಯದ ಸಮಸ್ಯೆ, ಬೆನ್ನು ಹುರಿ ಸಮಸ್ಯೆ, ಅಂಗವೈಕಲ್ಯ ಗೂನುಬೆನ್ನು ಸಮಸ್ಯೆಗಳಿರುವ ಮಕ್ಕಳನ್ನು ಪತ್ತೆ ಹಚ್ಚಿ ಇಲ್ಲಿಯವರಿಗೂ ೧೭೫ ಯಶಸ್ವಿ ಹೃದಯ ಚಿಕಿತ್ಸೆಗಳನ್ನು ಹಾಗೂ ಆಪರೇಶನಗಳನ್ನು ಬೆಂಗಳೂರಿನ ವೈದ್ಯರಾದ ಡಾ|| ರಾಘವೇಂದ್ರ ಕುಲಕರ್ಣಿ ಇವರೊಂದಿಗೆ ಮಾಡಿರುತ್ತಾರೆ. ಇವರ ಕಾರ್ಯಕ್ಕೆ ಕಲಬುರಗಿಯ ಜಿಲ್ಲಾಧಿಕಾರಿಗಳು ಹಾಗೂ ಸಿ.ಇ.ಓ. ಅಧಿಕಾರಿಗಳು ಅಭಿನಂದಿಸಿದ್ದು ವಿಶೇಷ.
ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಚಾಪು ಮೂಡಿಸಿ ಸೇವೆ ಸಲ್ಲಿಸುತ್ತಿರುವ ಡಾ|| ಕ್ಯಾತನಾಳ್ ಇವರು ಸಮಾಜಮುಖಿ ಅಗತ್ಯವಿರುವ ಜನರಿಗೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಘ ಸಂಸ್ಧೆಗಳಿಗೆ ಆರ್ಥಿಕವಾಗಿ ಸೇವೆ ಸಲ್ಲಿಸುತ್ತಿರುವರು. ಇವರು ಕರ್ನಾಟಕ ರಾಜ್ಯ ಸರಕಾರಿ ಅರೇ ಸರಕಾರಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘ ಕೇಂದ್ರ ಕಛೇರಿ ಕಲಬುರಗಿ ಸಂಘಟನೆಯ ರಾಜ್ಯ ಹಾಗೂ ಕಲಬುರಗಿ ಜಿಲ್ಲೆಯ ಉಪಾಧ್ಯಕ್ಷರಾಗಿ ತಮ್ಮ ಸಮುದಾಯದ ಜನತೆಗೂ ಕೂಡ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಪ್ರತಿ ಕಾರ್ಯ ಚಟುವಟಿಕೆಗಳಲ್ಲಿಯೂ ಇವರ ಪತ್ನಿ ಬೆನ್ನೆಲುಬಾಗಿ ನಿಂತಿರುವ ಡಾ|| ರವಿಕಾಂತಿ ಕ್ಯಾತನಾಳ ಮೇಡಂ ಅವರಿಗೂ ಕೂಡ ಶ್ರೆಯಸ್ಸು ಸಲ್ಲುತ್ತದೆ.
ಇವರ ಸೇವೆಗೆ ಸಂದಿರುವ ಪ್ರಶಸ್ತಿಗಳು ೨೦೦೧ ರಲ್ಲಿ ವೈದ್ಯವಿಭೂಷಣ ೨೦೦೨ ರಲ್ಲಿ ವೈದ್ಯಶ್ರೀ ಕಾಯಕಲ್ಪ ಪ್ರಶಸ್ತಿ ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಶಸ್ತಿ (KPME) ಶ್ರೇಷ್ಠ ವೈದ್ಯ ಪ್ರಶಸ್ತಿ ಹಜಕಮೀಟಿ ಉತ್ತಮ ವೈದ್ಯ ಹೀಗೆ ಅನೇಕ ಪ್ರಶಸ್ತಿ ಸನ್ಮಾನಗಳು ಲಭಿಸಿವೆ. ಸೇವೆಯೊಂದಿಗೆ ಕುಟುಂಬ ಹಾಗೂ ಸಹೋದ್ಯೋಗಿಗಳು ಹಾಗೂ ಗೆಳೆಯರಾದ ಶ್ರೀ ಸುರೇಂದ್ರ ಸಂಬಾಳ, ಶ್ರೀ ಮಹೇಶ ಹುಬ್ಬಳ್ಳಿ, ವಿಜಯ, ಸಂಜುಕಪೂರ, ಡಾ|| ನಾಗನಳ್ಳಿ, ಮಾರ್ಥಂಡ , ವೈಭವ, ಡಾ|| ಶಿವಾನಂದ ಪಾಟೀಲ್, ಶ್ರೀ ಸುಚಿಂದ್ರ ಸಂಬಾಳ, ಗೆಳೆಯರ ಬಳಗದೊಂದಿಗೂ ಕೂಡ ತುಂಬಾ ಆತ್ಮಿಯರಾಗಿದ್ದಾರೆ.
ಇಂದು ಇವರ ಹುಟ್ಟು ಹಬ್ಬ ಇದ್ದು ಈ ಸಂದರ್ಭದಲ್ಲಿ ಸಮಸ್ತ ಜನತೆ ಪದಾಧಿಕಾರಿಗಳು ಹಾಗೂ ಸದಸ್ಯರು ಕರ್ನಾಟಕ ರಾಜ್ಯ ಸರಕಾರಿ ಅರೇ ಸರಕಾರಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘ ಕೇಂದ್ರ ಕಚೇರಿ ಕಲಬುರಗಿ ಸಂಘದ ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಅಭಿನಂದನೆಗಳು.
ನಂದಿನಿ ಸುರೇಂದ್ರ ಸನಬಾಳ
ಶಿಕ್ಷಕರು, ಕಲಬುರಗಿ.