ಗಾಣಿಗರು ಉತ್ತರ ದಕ್ಷಿಣ, ಒಳಪಂಗಡ ಮರೆತು ಒಗ್ಗೂಡುವುದು ಅತೀ ಅವಶ್ಯಕವಿದೆ,
ಯೋಗೇಂದ್ರ ಮಾದಪ್ಪ,
ಹುಬ್ಬಳ್ಳಿ,:
ಗಾಣಿಗರು ಉತ್ತರ ದಕ್ಷಿಣ,ಸಜ್ಜನ ಕರಿಕುಲ,ಜ್ಯೋತಿಪಣ ತೇಲಿ ಮುಂತಾದ ಒಳಪಂಗಡಗಳನ್ನು ಮರೆತು ನಾವು ಗಾಣಿಗರು ಎಂದು ಘಟ್ಟಿ ಧ್ವನಿಯಿಂದ ಒಗ್ಗೂಡುವುದು ಅತೀ ಅವಶ್ಯಕವಿದೆ ಎಂದು ಮೈಸೂರಿನ ಅಂತರಾಷ್ಟ್ರೀಯ ಕ್ರೀಡಾಪಟು ಯೋಗೇಂದ್ರ ಮಾದಪ್ಪ ಹೇಳಿದರು,
ಅವರು ಹುಬ್ಬಳ್ಳಿ ಮಹಾನಗರದ ಬ್ಯಾಂಕರ್ಸ್ ಭವನದಲ್ಲಿ ಜರುಗಿದ, ಜ್ಞಾನ ಯೋಗಿ ವಿದ್ಯಾಸಂಸ್ಥೆ ರಿ. ಧಾರವಾಡ ಸಂಸ್ಥೆಯ ಉದ್ಘಾಟನೆ ಪದಾಧಿಕಾರಿಗಳ ಪದಗ್ರಹಣ ಶ್ರೀ ವೈ ಬಿ ಕಡಕೋಳ ಅವರ ಸಾರಥ್ಯದಲ್ಲಿ ಗಾಣಿಗರ ಹೆಜ್ಜೆಗಳು ಪುಸ್ತಕ ಬಿಡುಗಡೆ ಹಾಗೂ ಗಾಣಿಗರತ್ನ ರಾಜ್ಯ ಪ್ರಶಸ್ತಿ ಲೇಖಕರಿಗೆ ಗೌರವ ಸನ್ಮಾನವನ್ನು ಉದ್ಘಾಟಿಸಿ,ಮಾತನಾಡಿದರು “ಗಾಣಿಗರು ನಮ್ಮ ರಾಜ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದೆ , ಆದರೆ ಒಗ್ಗಟ್ಟು ಇಲ್ಲ ಕಾರಣ ಊರಿಗೊಂದು ಸಂಘಗಳು ಉದಯ ಆಗಿವೆ” ಎಂದು ಕಳವಳ ವ್ಯಕ್ತಪಡಿಸಿ, “ಎಲ್ಲಾ ಒಳಪಂಗಡಗಳು ಮತ್ತು ಸಂಘಗಳು ಏಕತೆಯಿಂದ ಹೋರಾಟ ಮಾಡುವುದು ಅತೀ ಅವಶ್ಯಕ ಇದೆ’ ಎಂದರು.
ಕೊಪ್ಪಳ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲವಾಗಿ ಮಾತನಾಡಿ “ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸಮಾಜ ಸೇವೆಯ ಮೂಲಕ ಇತರರಿಗೆ ಶಿಕ್ಷಣ ಕೊಡುವುದರ ಮೂಲಕ ಸಹಾಯ ಸಹಕಾರ ಸಹಬಾಳ್ವೆ ಹೊಂದಾಣಿಕೆ ಗುಣ ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಗುಣ ಹೊಂದಿರಬೇಕು.ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಬಹುಮುಖ್ಯ. ಪಾಲಕರು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಅತೀ ಮುತುವರ್ಜಿ ವಹಿಸಬೇಕು” ಎಂದು ಸಮಾಜದ ಜನರಿಗೆ ಕರೆಯಿತ್ತರು.
ಸಮಾಜದ ಹಿರಿಯರು ಗಾಣಿಗ ಸಮಾಜದ ನೌಕರರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾದ ಆರ್ ಜಿ ಪಾಟೀಲ್ ಮಾತನಾಡಿ ” ಜ್ಞಾನಯೋಗಿ ಶಿಕ್ಷಣ ಸಂಸ್ಥೆಯು ಇನ್ನು ಮುಂದೆ ಉತ್ತಮ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಗಾಣಿಗರ ಹೆಜ್ಜೆ ಪುಸ್ತಕ ಗಾಣಿಗ ಸಮಾಜದ ಇತಿಹಾಸ ಹಲವಾರು ವ್ಯಕ್ತಿಗಳ ಪರಿಚಯವನ್ನು ತಿಳಿಪಡಿಸುತ್ತದೆ ಇಂತಹ ಪುಸ್ತಕ ಕೊಂಡು ಓದುವ ಮೂಲಕ ಸಂಪಾದಕರನ್ನು ಅವರ ಬಳಗವನ್ನು ಪ್ರೋತ್ಸಾಹಿಸಿ ಎನ್ನುವ ಮೂಲಕ ಬಿಡುಗಡೆ ಸಂದರ್ಭದಲ್ಲಿ ತಮಗೆ ನೀಡಿದ ಪ್ರತಿಯ ಹಣವನ್ನು ಸಂಪಾದಕರಾದ ವೈ.ಬಿ.ಕಡಕೋಳರಿಗೆ ನೀಡುವ ಮೂಲಕ ಪುಸ್ತಕ ಓದುವ ಪರಂಪರೆಗೆ ಚಾಲನೆ ನೀಡಿದರು,
“ಉನ್ನತ ಶಿಕ್ಷಣ ಪಡೆದು ಸರಕಾರಿ ನೌಕರಿಗೆ ಪ್ರಯತ್ನ ಮಾಡುವ ಬದಲು ಗಾಣಿಗ ವೃತ್ತಿ ಪ್ರಾಮುಖ್ಯತೆಯನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡ ರವಿ ಅವರ ಯಶೋಗಾಥೆಯನ್ನು ಸಮಾಜದ ಸಂಶೋಧಕಿ ಡಾ ಜಿ ಮೇಘನ ತಿಳಿಸುತ್ತಾ ಇತಿಹಾಸ ಕಾಲದಿಂದಲೂ ಗಾಣಿದ ಮಹತ್ವ ಕುರಿತು ತಿಳಿಸಿದರು.
ಸಂಪಾದಕರಾದ ವೈ ಬಿ ಕಡಕೋಳ ಸಮಾಜದ ಇತಿಹಾಸ. ಕಲೆ ಸಾಹಿತ್ಯ ರಾಜಕೀಯ ಹೀಗೆ ವಿವಿಧ ರಂಗಗಳಲ್ಲಿ ಗಾಣಿಗ ಸಮಾಜದ ಪ್ರತಿಭೆಗಳ ಪರಿಚಯಿಸುವ ಒಂದು ಪ್ರಯತ್ನ ಈ ಕೃತಿಯ ಮೂಲಕ ಸಾಗಿದೆ. ಇಂತಹ ಕೃತಿಯನ್ನು ಕೊಂಡು ಓದುವ ಮೂಲಕ ಸಹಕರಿಸಿ ಎಂದು ಕರೆ ನೀಡಿದರು.
ದೇಸಾಯಿ ಚಲನಚಿತ್ರ ನಿರ್ಮಾಪಕ ನಟ ಮಹಾಂತೇಶ ಚೊಳಚಗುಡ್ಡ ಮಾತನಾಡಿ ಒಂದು ಪುಸ್ತಕ ಪ್ರಕಟಿಸುವುದು ಎಷ್ಟು ಕಷ್ಟ ಕರ ಎಂಬ ಸಂಗತಿಗಳನ್ನು ವೈ ಬಿ ಕಡಕೋಳ ತಿಳಿಸಿರುವರು ಹಾಗೆಯೇ ಒಂದು ಚಲನಚಿತ್ರ ನಿರ್ಮಾಣ ಕೂಡ ಮಾಡುವುದು ಕಷ್ಟ ಕರ. ಗಾಣದೇವತೆ ಹಿನ್ನೆಲೆಯಲ್ಲಿ ಕತೆಯನ್ನು ಮಾಡಿ ಒಂದು ಚಲನಚಿತ್ರ ದೇಸಾಯಿ ನಿರ್ಮಾಣ ಮಾಡಿರುವೆ. ಎಲ್ಲಾ ಬಾಂಧವರು ಚಲನಚಿತ್ರ ನೋಡುವ ಮೂಲಕ ಪ್ರೋತ್ಸಾಹ ನೀಡುವಂತೆ ಹೇಳಿದರು.
ಜಿ ಎಸ್ ಛಬ್ಬಿ ಅಶೋಕ ನವಲಗುಂದ ಮೊದಲಾದವರು ಮಾತನಾಡಿದರು. ಯೋಗಿ ಕಲ್ಲಿನಾಥ ಮಹಾಸ್ವಾಮಿಗಳ ಕೋಲಾರ ಇವರ ದಿವ್ಯ ಸಾನಿದ್ಯದಲ್ಲಿ ಜರುಗಿದ ಈ ಸಮಾರಂಭದಲ್ಲಿ, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷರಾದ ಶರಣಪ್ಪಗೌಡ ಆರ್ ಕೆಂಚಮ್ಮನವರ, ಶ್ರೀ ಆರ್ ಜಿ ಪಾಟೀಲ್ ಪ್ರಕಾಶ ಬಾಳೆಕುಂದ್ರಿ, ಮಾಲತೇಶ ಹಂಚಿನಾಳ, ಅಶೋಕ ಮಜ್ಜಿಗುಡ್ಡ ಅಶೋಕ ಶಿರೂರ ರಮೇಶ್ ಉಟಗಿ, ಶ್ರೀ ಕೆ ಎಂ ಗದಗೇರಿ ಶ್ರೀ ಕೆ ಬಿ ಕುರಹಟ್ಟಿ ಎಂ ಎಸ್ ಗಾಣಿಗೇರ್ ಎಲ್ ಐ ಲಕ್ಕಮ್ಮನವರ್ ರವಿಶಂಕರ್ ಗಡಿಯಪ್ಪನವರ್ ಕುಮಾರಿ ಯಶಸ್ವಿನಿ ಹೆಚ್ ಗಾಣಿಗೇರ್ ಮಂಜುಳಾ ಜ್ಯೋತಿ ಸುನಿತಾ ತೇಲಿ ನಿರ್ಮಲಾ ಮಹಾದೇವ ತೇಲಿ, ಬಸವರಾಜ ಪುರದಗುಡಿ, ಈರಪ್ಪ ಅಣ್ಣಪ್ಪ ತೇಲಿ, ನಿಂಗಪ್ಪ ಗುನ್ನಾಳ ಆನಂದ ಭಟಗುರ್ಕಿ, ಬಸವರಾಜ ಛಬ್ಬಿ, ಮಹಾಂತೇಶ ಚೊಳಚಗುಡ್ಡ ನಾಗೇಂದ್ರ ಮುನಿಯಪ್ಪ,ಮರಿಗೌಡ ವೀರನಗೌಡರ, ಟಿ ಬಿ ಕರದಾನಿ, ಶಂಕರಪ್ಪ ಪಳೋಟಿ, ಸಮಾಜ ಬಾಂಧವರು ಹಿರಿಯರು ವಿದ್ಯಾರ್ಥಿಗಳು ಸಂಸ್ಥೆ ಎಲ್ಲ ಪದಾಧಿಕಾರಿಗಳು ಕುಲಬಾಂಧವರು ಉಪಸ್ಥಿತರಿದ್ದರು.ರವಿಶಂಕರ ಗಡಿಯಪ್ಪನವರ ಕಾರ್ಯ ಕ್ರಮ ನಿರೂಪಿಸಿದರು. ಎಲ್ ಐ ಲಕ್ಕಮ್ಮನವರ ಸ್ವಾಗತಿಸಿದರು.