ಡಿಡಿಪಿಐ ಹಾಗೂ ಶಿಕ್ಷಕರ ವಿರುದ್ದ ಗರಂ ಆದ ಸಚಿವ ಪರಮೇಶ್ವರ!!
ಎಲ್ಲರನ್ನೂ ಸಸ್ಪೆಂಡ ಮಾಡಿ ಮನೆಗೆ ಕಳಿಸುತ್ತೇನೆ!!
ಅಷ್ಟಕ್ಕೂ ಸಚಿವರು ಈ ರೀತಿ ಮಾತನಾಡಲು ಕಾರಣ ಏನು ಅಂತ ನೀವೆ ನೋಡಿ..
ಕೊರಟಗೆರೆ : ಮದುಗಿರಿ ಡಿಡಿಪಿಐ ಹಾಗೂ ಕೊರಟಗೆರೆ ಶಿಕ್ಷಣ ಇಲಾಖೆ ವಿರುದ್ಧ ಪರಮೇಶ್ವರ್ ಕೋಪಗೊಂಡಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಶಿಕ್ಷಕರ ಬೇಜವಾಬ್ದಾರಿ ಕಾರಣ ಎಂದು ಪರಮೇಶ್ವರ್ ಕಿಡಿಕಾರಿದರು.
ಅವರು ತಾಲೂಕಿನ ಅಗ್ರಹಾರ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಶಾಸಕನು ಸಚಿವನು ನಿಮಗೆ ಸರಿಯಾಗಿ ತಿಳಿದಿಲ್ಲ ಇನ್ನು ಮಕ್ಕಳಿಗೆ ಏನು ಹೇಳುತ್ತೀರಾ, ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಯಾಕೆ ಜಾಸ್ತಿ ಆಗುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಯಾಕೆ ಕಡಿಮೆಯಾಗುತ್ತಿದೆ ಎಂದು ಈಗ ಅರ್ಥವಾಗುತ್ತಿದೆ. ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದೀರಾ ಎಂದು ಶಿಕ್ಷಣ ಅಧಿಕಾರಿಗಳ ವಿರುದ್ಧ ಪರಮೇಶ್ವರ್ ಕಿಡಿಕಾರಿದರು.
ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶ ನೋಡಿದರೆ ಅರ್ಥವಾಗತ್ತದೆ ಶಿಕ್ಷಣ ಇಲಾಖೆ ಎಷ್ಟು ಮಟ್ಟಿಗೆ ಜವಾಬ್ದಾರಿ ತೆಗೆದುಕೊಂಡಿದೆ ಎಂದು. ಇದೇ ರೀತಿ ಮುಂದುವರೆದರೆ ಎಲ್ಲರನ್ನು ಸಸ್ಪೆಂಡ್ ಮಾಡಿ ಮನೆಗೆ ಕಳಿಸುತ್ತೇನೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಗೃಹ ಸಚಿವರು ಬೇಸರ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಶಿಸ್ತು ಕಣ್ಮರೆಯಾಗಿದೆ ಯಾವ ಸರ್ಕಾರಿ ಶಾಲೆಗಳಲ್ಲಿ ಈ ರೀತಿ ನಡೆಯುತ್ತಿದೆ ಎಂದು ಗಮನಿಸಿ ನಾನೇ ಖುದ್ದು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಶಿಕ್ಷಕರಿಗೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಗೃಹ ಸಚಿವ ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದರು.