ಲೂಸಿ ಸಾಲ್ಡಾನರವರ 107ನೇ ದತ್ತಿ ಕಾರ್ಯಕ್ರಮ ಶಾಲೆಗೆ ಗ್ರಾಮಸ್ಥರಿಂದ ಹರಿದು ಬಂದ ದತ್ತಿ ದಾನ..
ಧಾರವಾಡ ಲೂಸಿ ಸಾಲ್ಡಾನರವರ 107 ನೇ ದತ್ತಿ ಕಾರ್ಯಕ್ರಮದ
ಚೆಕ್ ಹಸ್ತಾಂತರವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ತಾಲೂಕಿನ ಅಧ್ಯಕ್ಷರಾದ ಅಜಿತ್ ಕುಮಾರ್ ದೇಸಾಯಿ ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರಿಗೆ ಹಾಗೂ ಮುಖ್ಯ ಶಿಕ್ಷಕ ಶಿವಾನಂದ ಕೆಲಗೇರಿಯವರಿಗೆ ವಿತರಿಸಿದರು.
ಲೂಸಿ ಸಾಲ್ಡಾನ ಒಬ್ಬ ಶ್ರೇಷ್ಠ ಶಿಕ್ಷಕಿ, ತಾನು ದುಡಿದ ಹಣದಲ್ಲಿ ಉಳಿಕೆ ಮಾಡಿ ನಿರಂತರವಾಗಿ, ಸರಕಾರಿ ಶಾಲೆಗಳಿಗೆ ದತ್ತಿ ನೀಡುತ್ತಿರುವುದು ಒಂದು ಶ್ರೇಷ್ಠ ಕಾಯಕವಾಗಿದೆ ಎಂದರು, ಪ್ರಾಸ್ತಾವಿಕವಾಗಿ ಮಾತನಾಡಿದ ಸಿಆರ್ ಪಿ ಆರ್ ಎಂ ಕುರ್ಲಿ ಕಷ್ಟಪಟ್ಟು ಬದುಕು ಕಟ್ಟಿಕೊಂಡ ಮೇಲೆ ತಾವಾಯಿತು,ತಮ್ಮ ಸಂಸಾರವಾಯಿತು,ಎನ್ನುವವರ ಮದ್ಯೆ ಈ ಮಹಾನ ತಾಯಿ ಆದರ್ಶವಾಗಿದ್ದಾರೆ,ತನಗೆ ಬರುವ ಸಂಬಳದ ಶೇಕಡಾ ತೊಂಬತ್ತರಷ್ಟು ಹಣವನ್ನು ಉಳಿಸಿ, ಸರಕಾರಿ ಶಾಲೆಗಳಿಗೆ ಬಡ ಮಕ್ಕಳ ಕಲಿಕೆಗೆ ಕಲಿಕಾ ಸಾಮಗ್ರಿಗಳಿಗೆ ಸಹಾಯವಾಗಲಿ ಎಂದು ಸುಮಾರು ಮೂವತ್ತು ವರ್ಷಗಳಿಂದ ಈ ದತ್ತಿ ನೀಡುವ ಕಾಯಕವನ್ನು ರೂಢಿಸಿಕೊಂಡು ಬಂದಿದ್ದಾರೆ ಎಂದರು, ಕಾರ್ಯಕ್ರಮದಲ್ಲಿ ಹಾಜರಿದ್ದ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಮತ್ತು ಶಿಕ್ಷಣಪ್ರೇಮಿಗಳು,ಗ್ರಾಮಸ್ಥರು ಹಾಜರಿದ್ದು ಅಕ್ಷರತಾಯಿ ಲೂಸಿ ಸಾಲ್ಡಾನರವರ ದತ್ತಿಗೆ ಕೈಜೋಡಿಸಿದರು,
ಶ್ರೀ ವಿಠ್ಠಲ ರಾ ತೊರವತ್ತ SDMC ಅಧ್ಯಕ್ಷರು ದೂಪಾರ್ತಿವಾಡೆ, ಇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ,
ಜಿತೇಂದ್ರ ಕಾಂಬಳೆ ಉಪವಲಯ ಅರಣ್ಯ ಅಧಿಕಾರಿಗಳು ಬಣದೂರ, ಪಾಂಡುರಂಗ ಶಿದ್ದು ತೊರವತ್ತ ಧನಗರ ಗೌಳಿ ಜಿಲ್ಲಾ ಅಧ್ಯಕ್ಷರು,ಶ್ರೀ ಮಂಜುನಾಥ ದೊಡಮನಿ ಅರಣ್ಯ ರಕ್ಷಕ ಹೊಲ್ತಿಕೊಟಿ, ಕಾಶಪ್ಪ ಹಲಸೂರ ನಿವೃತ ಪ್ರಧಾನ ಗುರುಗಳು, ಶ್ರೀ ಸಹದೇವಪ ಕೆಲಗೇರಿ ನಿವೃತ ಬ್ಯಾಂಕ್ ಅಧಿಕಾರಿ , ರಮೇಶ ಸಂಕಣ್ಣವರ ಗ್ರಾಮ ಪಂಚಾಯಿತಿ ಸದಸ್ಯರು, ಬಸವರಾಜ ಕೋರಿ ಜಾಗ ದಾನಿಗಳು, K.G ದೇವರಮನಿ ನಿವೃತ ಉಪನ್ಯಾಸಕರು ಡೈಟ್ ಧಾರವಾಡ ,ಶ್ರೀ ರುದ್ರೇಶ ಕುರ್ಲಿ CRP ತಡಕೊಡ ,ಮೈಲಾರ ಹಡಪದ CRP ಗರಗ,L.I.ಲಕ್ಕಮ್ಮನವರ ಸಂಚಾಲಕರು, ಮಂಜುನಾಥ ಕೆಲಗೇರಿ ಶಿಕ್ಷಣ ಪ್ರೇಮಿ, ವಿಠ್ಠಲ ಬಾಬು ಬಾವದಾನೆ ಶಿಕ್ಷಣ ಪ್ರೇಮಿ, ಶ್ರೀಮತಿ ಅನಸೂಯಾ ಗುಡಿಹಾಳ ಉಪಾಧ್ಯಕ್ಷರು SDMC, ಜನ್ನು ವರ್ಕೆ SDMC ಸದಸ್ಯರು , ತಾನಾಜಿ ಬಾಜಾರಿ SDMC ಸದಸ್ಯರು , ಸಂಜು ಕರಾತ ಗ್ರಾಮದ ಹಿರಿಯರು, ದೇವು ಕೊಳಾಪಟ್ಟೆ SDMC ಸದಸ್ಯರು
ಊರಿನ ಎಲ್ಲಾ ಹಿರಿಯರು,ಹಳೆಯ ವಿದ್ಯಾರ್ಥಿಗಳು ತಾಯಂದಿರು, ಮಕ್ಕಳ ಪಾಲಕರು ಭಾಗವಹಿಸಿದ್ದರು .
ದತ್ತಿ ನೀಡಿದ ಮಹಾದಾನಿಗಳ ವಿವರ
ಶ್ರೀಮತಿ ಲೂಸಿ ಸಾಲ್ಡಾನ ರೂ20,000 (ಇಪ್ಪತ್ತು ಸಾವಿರ),ಶ್ರೀ ಜಿತೇಂದ್ರ ಕಾಂಬಳೆ ಉಪವಲಯ ಅರಣ್ಯ ಅಧಿಕಾರಿಗಳು ಬಣದೂರ ರೂ10,001(ಹತ್ತು ಸಾವಿರದ ಒಂದು), ಶ್ರೀ ಕಾಶಪ್ಪ ಹಲಸೂರ ನಿವೃತ ಪ್ರಧಾನ ಗುರುಗಳು ಸಾ/ ಖಾನಾಪೂರ ರೂ5001( ಐದು ಸಾವಿರದ ಒಂದು), ಶ್ರೀ ಸಹದೇವಪ್ಪ ದ್ಯಾ ಕೆಲಗೇರಿ ಸಾ ಹುಲಕೊಪ್ಪ ನಿವೃತ ಬ್ಯಾಂಕ್ ಅಧಿಕಾರಿ ರೂ 5001(ಐದು ಸಾವಿರದ ಒಂದು), ಶ್ರೀ ಶಿದ್ದು ವಿಠ್ಠು ತೊರವತ್ತ ಗೌಳಿ ಸಮುದಾಯದ ಮುಖ್ಯಸ್ಥರು ಸಾ ನಾಗನೂರು 5001 (ಐದು ಸಾವಿರದ ಒಂದು),ಶ್ರೀ ವಿಠ್ಠಲ ಬಾಬು ಬಾವದಾನೆ ಶಿಕ್ಷಣ ಪ್ರೇಮಿ ಸಾ/ ದೂಪಾರ್ತಿವಾಡೆ ರೂ 5001 (ಐದು ಸಾವಿರದ ಒಂದು),ಶ್ರೀ ಮಂಜುನಾಥ ದಡವಾಡ ಶಿಕ್ಷಕರು ಸಾ; ಮಾದನಬಾವಿ ರೂ 2001(ಎರಡು ಸಾವಿರದಾ ಒಂದು ), ದಿವಂಗತ ಶ್ರೀ ಮಹೇಶ ಸಾವಳಗಿ ಸ್ಮರಣಾರ್ಥ, ಶ್ರೀಮತಿ ಸುಕನ್ಯಾ ಕಾಶಪ್ಪ ಹಲಸೂರ ರೂಂ 5001 ( ಐದು ಸಾವಿರದ ಒಂದು),ದಿವಂಗತ ಮಂಜುನಾಥ ಯಲ್ಲಪ್ಪ ಗುಡಿಹಾಳ ಸ್ಮರಣಾರ್ಥ, ಶ್ರೀಮತಿ ಅನಸೂಯಾ ಗುಡಿಹಾಳ ರೂ 2001 (ಎರಡು ಸಾವಿರದಾ ಒಂದು),ದಿವಂಗತ ಶ್ರೀ ಭಿಮಪ್ಪ ದರ್ಗಾದ ಸ್ಮರಣಾರ್ಥ ಶ್ರೀ ಶ್ರೀಕಾಂತ ದರಗಾದ ಶಿಕ್ಷಕರು ಸಾ, ಹುಲಕೊಪ್ಪ ರೂ2001( ಎರಡು ಸಾವಿರದಾ ಒಂದು), ಶ್ರೀ ವಿಠ್ಠಲ ರಾಮು ತೊರವತ್ತ SDMC ಅಧ್ಯಕ್ಷರು ರೂ 2001(ಎರಡು ಸಾವಿರದಾ ಒಂದು)
ಈ ದಿನದ ಒಟ್ಟು ದತ್ತಿನಿಧಿ ರೂ 63,007(ಅರವತ್ತ ಮೂರು ಸಾವಿರದಾ ಏಳು ಮಾತ್ರ)
ಶಿಕ್ಷಕಿ ಸುಖನ್ಯ ಹಲಸೂರ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.