ಇವತ್ತು ಭಾನುವಾರ,ನಾಳೆ ಸೋಮವಾರ..ನಾಳೆಯಿಂದಲೇ ಸರ್ಕಾರದ ಈ ಆದೇಶ ಜಾರಿ…
ಸರ್ಕಾರದ ಪ್ರತಿಯೊಂದು ಇಲಾಖೆಗೆ ಈ ಆದೇಶ ಜಾರಿ…
ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ..
ಸರ್ಕಾರಿ ನೌಕರ/ಅಧಿಕಾರಿ ಸಿಬ್ಬಂದಿ ಕೆಲಸಕ್ಕೆ ಗೈರಾಗುವ ಮೋದಲು ಈ ವರದಿ ನೋಡಿ..
ಬೆಂಗಳೂರು: ಪ್ರತಿಯೊಂದು ಇಲಾಖೆಯ ಅಧಿಕಾರಿ, ನೌಕರರು ಪ್ರತಿ ಸೋಮವಾರ ತಮ್ಮ ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲಿ ಹಾಜರಿದ್ದು, ಕಚೇರಿಗಳಿಗೆ ಆಗಮಿಸುವ ಜನರಿಗೆ ಸರಕಾರಿ ಸೇವೆ ಒದಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳ ಬೇಕು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಅವರ ಸೂಚನೆಯಂತೆ ಸಿಬ್ಬಂದಿ ಮತ್ತು ಸುಧಾರಣಾ ಇಲಾಖೆಯ ಆಡಳಿತ ಸರಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ. ಬಿ ಅವರು ಎಲ್ಲ ಸರಕಾರಿ ಇಲಾಖೆಗಳಿಗೆ ಆದೇಶ ಹೊರಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪಣಿ 1/2/2024 ಉಲ್ಲೇಖ ಮಾಡಿ ವಿಮಲಾಕ್ಷಿ ಬಿ. ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಸು-ತಪಾಸಣೆ) ಸಹಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳಿಗೆ ಈ ಕುರಿತು ಟಿಪ್ಪಣಿ ಕಳಿಸಿದ್ದಾರೆ.
ಸಿದ್ದರಾಮಯ್ಯ ಟಿಪ್ಪಣಿ ವಿವರ: ಕೃಷಿ ಪ್ರಧಾನವಾದ ಸಂಸ್ಕೃತಿಗಳಲ್ಲಿ ಕರ್ನಾಟಕ ಪ್ರಧಾನ ಪಾತ್ರ ವಹಿಸುತ್ತಿದೆ. ಸಾಮಾನ್ಯವಾಗಿ ನಮ್ಮ ಕೃಷಿಕರು ಸೋಮವಾರದ ದಿನಗಳಂದು ತುಸುಮಟ್ಟಿಗೆ ಕೃಷಿ ಚಟುವಟಿಕೆಗಳಿಗೆ ಬಿಡುವು ನೀಡಿ, ಸಂತೆ/ ಪೇಟೆ ಕೆಲಸಗಳಿಗೆ ಹಾಗೂ ಕಛೇರಿಗಳಿಗೆ ತಮ್ಮ ಕೆಲಸಗಳಿಗಾಗಿ ಹೋಗುವುದು ಹಿಂದಿನಿಂದ ನಡೆದುಕೊಂಡು ಬಂದ ವಾಡಿಕೆ.
ಹಿಂದೆ, ಪ್ರತಿ ಸೋಮವಾರಗಳಂದು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಾದಿಯಾಗಿ ಎಲ್ಲರೂ ಸಹ ತಮ್ಮ ತಮ್ಮ ಕೇಂದ್ರಸ್ಥಾನದ ಕಛೇರಿಗಳಲ್ಲಿದ್ದು, ಜನರ ಕೆಲಸಗಳನ್ನು ಮಾಡುತ್ತಿದ್ದ ಹಿನ್ನೆಲೆ ರಾಜ್ಯಕ್ಕೆ ಇದೆ. ಕೃಷಿಯೇತರ ಹಿನ್ನೆಲೆಗಳಿಂದ ಅಧಿಕಾರಿಗಳು/ ನೌಕರರು ಸರ್ಕಾರಿ ಸೇವೆಗೆ ಬರುವ ಪ್ರಮಾಣ ಹೆಚ್ಚಿದ ಮೇಲೆ ಈ ಪದ್ಧತಿಯಲ್ಲಿ ಸ್ವಲ್ಪ ಮಟ್ಟಿಗೆ ಏರು ಪೇರುಗಳಾಗಿವೆ.
ಆದ್ದರಿಂದ, ಪ್ರತಿಯೊಂದು ಇಲಾಖೆಯ ಅಧಿಕಾರಿ/ ನೌಕರರು ಪ್ರತಿ ಸೋಮವಾರಗಳಂದು ತಮ್ಮ ತಮ್ಮ ಕೇಂದ್ರ ಸ್ಥಾನದ ಕಛೇರಿಗಳಲ್ಲಿ ಹಾಜರಿದ್ದು, ಕಛೇರಿಗಳಿಗೆ ಭೇಟಿ ನೀಡುವ ಜನರಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶ್ರೀ ಅಡಗೂರು ಎಚ್. ವಿಶ್ವನಾಥ್, ಮಾನ್ಯ ವಿಧಾನ ಪರಿಷತ್ ಸದಸ್ಯರು ಕೋರಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸಲು ಸೂಚಿಸಿದೆ ಎಂದು ಸಿದ್ದರಾಮಯ್ಯ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದರು.
ಈ ಟಿಪ್ಪಣಿ ಉಲ್ಲೇಖ ಮಾಡಿ ವಿಮಲಾಕ್ಷಿ ಬಿ. ಪತ್ರದ ಮೂಲಕ ಮಾಹಿತಿ ನೀಡಿದ್ದು, ಈ ಪತ್ರ ಪ್ರತಿ ಸೋಮವಾರದಂದು ಕೇಂದ್ರ ಸ್ಥಾನದ ಕಛೇರಿಗಳಲ್ಲಿ ಎಲ್ಲಾ ಅಧಿಕಾರಿ/ ನೌಕರರು ಕರ್ತವ್ಯ ನಿರ್ವಹಿಸುವ ಕುರಿತು ಎಂಬ ವಿಷಯ ಒಳಗೊಂಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ಸನ್ಮಾನ್ಯ ಮುಖ್ಯಮಂತ್ರಿಯವರ ಟಿಪ್ಪಣಿ ಲಗತ್ತಿಸಿದೆ. ಸದರಿ ಟಿಪ್ಪಣಿಯಲ್ಲಿ ಪ್ರತಿಯೊಂದು ಇಲಾಖೆಯ ಅಧಿಕಾರಿ/ ನೌಕರರು ಪ್ರತಿ ಸೋಮವಾರಗಳಂದು ತಮ್ಮ ತಮ್ಮ ಕೇಂದ್ರ ಸ್ಥಾನದ ಕಛೇರಿಗಳಲ್ಲಿ ಹಾಜರಿದ್ದು, ಕಛೇರಿಗಳಿಗೆ ಭೇಟಿ ನೀಡುವ ಜನರಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿರುತ್ತಾರೆ. ಅದರಂತೆ ಸನ್ಮಾನ್ಯ ಮುಖ್ಯಮಂತ್ರಿಗಳ ಟಿಪ್ಪಣಿಯಲ್ಲಿ ಸೂಚಿಸಿರುವಂತೆ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವಂತೆ ಈ ಮೂಲಕ ತಿಳಿಸಿದೆ ಎಂದು ಸೂಚಿಸಿದ್ದಾರೆ.
ವಿವಿಧ ಇಲಾಖೆಯಗಳು ಈ ಪತ್ರದ ಅನ್ವಯ ಅಧಿಕಾರಿ/ ಸಿಬ್ಬಂದಿಗಳು ಸೋಮವಾರ ಕೇಂದ್ರ ಸ್ಥಾನದಲ್ಲಿರುವ ಕುರಿತು ಆದೇಶ ಹೊರಡಿಸಿವೆ.
ಸಾರಿಗೆ ಇಲಾಖೆ ಈ ಕುರಿತು ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಬೆಂಗಳೂರು, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು. ವ್ಯವಸ್ಥಾಪಕ ನಿರ್ದೇಶಕರು,ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಂಗಳೂರು. ವ್ಯವಸ್ಥಾಪಕ ನಿರ್ದೇಶಕರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ. ವ್ಯವಸ್ಥಾಪಕ ನಿರ್ದೇಶಕರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರಗಿ, ಮತ್ತು ವ್ಯವಸ್ಥಾಪಕ ನಿರ್ದೇಶಕರು, ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಲಿ., ಬೆಂಗಳೂರು ಇವರಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.
ಪ್ರತಿ ಸೋಮವಾರದಂದು ಕೇಂದ್ರಸ್ಥಾನದ ಕಛೇರಿಗಳಲ್ಲಿ ಎಲ್ಲಾ ಅಧಿಕಾರಿ/ ನೌಕರರು ಕರ್ತವ್ಯ ನಿರ್ವಹಿಸುವ ಕುರಿತು ಎಂಬ ವಿಷಯವನ್ನು ಪತ್ರ ಒಳಗೊಂಡಿದೆ ಮಾನ್ಯ ಮುಖ್ಯಮಂತ್ರಿಯವರ ಟಿಪ್ಪಣಿಯನ್ನು ಲಗತ್ತಿಸಿ, ಟಿಪ್ಪಣಿಯಲ್ಲಿ ಸೂಚಿಸಿರುವಂತೆ, ಪ್ರತಿಯೊಂದು ಇಲಾಖೆಯ ಅಧಿಕಾರಿ/ ನೌಕರರು ಪ್ರತಿ ಸೋಮವಾರಗಳಂದು ತಮ್ಮ ಕೇಂದ್ರ ಸ್ಥಾನದ ಕಛೇರಿಗಳಲ್ಲಿ ಹಾಜರಿದ್ದು, ಕಛೇರಿಗಳಿಗೆ ಭೇಟಿ ನೀಡುವ ಜನರಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಹೇಳಿದ್ದಾರೆ.
ಇಲಾಖೆಯ ಈ ಪತ್ರದ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಆದೇಶವೊಂದನ್ನು ಹೊರಡಿಸಿದೆ. ಪ್ರತಿ ಸೋಮವಾರದಂದು ಕೇಂದ್ರಸ್ಥಾನದ ಕಛೇರಿಗಳಲ್ಲಿ ಎಲ್ಲಾ ಅಧಿಕಾರಿ/ ನೌಕರರು ಕರ್ತವ್ಯ ನಿರ್ವಹಿಸುವ ಕುರಿತು ಎಂಬ ವಿಚಾರವನ್ನು ಪತ್ರ ಒಳಗೊಂಡಿದೆ.
ಪ್ರತಿ ಸೋಮವಾರಗಳಂದು ಪ್ರತಿಯೊಂದು ಇಲಾಖೆಯ ಅಧಿಕಾರಿ/ನೌಕರರು ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲಿ ಹಾಜರಿದ್ದು, ಕಛೇರಿಗಳಿಗೆ ಭೇಟಿ ನೀಡುವ ಜನರಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಿ ಪತ್ರದಲ್ಲಿ ನಿರ್ದೇಶನಗಳನ್ನು ನೀಡಲಾಗಿರುತ್ತದೆ.
ಅದರಂತೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯ ಎಲ್ಲಾ ಕಛೇರಿಗಳಲ್ಲಿ ತುರ್ತು ಕಾರ್ಯಗಳನ್ನು ಹೊರತುಪಡಿಸಿ, ಪ್ರತಿ ಸೋಮವಾರಗಳಂದು ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲಿ ಹಾಜರಿದ್ದು, ಕಛೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ/ ನೌಕರರಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಂಬಂಧಪಟ್ಟವರೆಲ್ಲರೂ ಮೇಲಿನ ಸೂಚನೆಗಳನ್ನು ಮನದಟ್ಟು ಮಾಡಿಕೊಂಡು, ಅದರಂತೆ ಕ್ರಮ ಕೈಗೊಳ್ಳತಕ್ಕದ್ದು. ಈ ಆದೇಶವು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಹೇಳಿದೆ.