ಸಹಜತೆ.ನೈಜತೆ.ನಮ್ಮ ಜೀವನ ಆಗಬೇಕಲ್ಲವೇ.?
ಮೊನ್ನೆ ನಾನು ತರಕಾರಿ ತರಲು ಹೋಗಿದ್ದೆ ಅಲ್ಲಿ 5 ರೂಪಾಯಿ ಪ್ರತಿ ಕಟ್ಟಿನ ಬೆಲೆ, ಆದ್ರೂ ಯಾಕಪ್ಪ ಇಷ್ಟೊಂದು ದುಬಾರಿ ಕೊಡ್ತೀಯಾ? ಅಂತ್ತ ಕೇಳ್ದೆ..ನಿನ್ನೆಯ ದಿನ ನನ್ನ ಮಗಳು ಅದೇ ತರಕಾರಿ 25 ರೂಪಾಯಿಗೆ ಒಂದು ಕಟ್ಟು ತಂದು ಅಮ್ಮ ಅತೀ ಕಡಿಮೆ ಬೆಲೆಗೆ ಕೊಟ್ಟಿದ್ದಾರೆ ಅಂದ್ಲು.ಇಂದು ನಮ್ಮ ಮನೆಯ ಬಾಗಿಲಿಗೆ ರೈತನೊಬ್ಬ ಬಂದು ವಿಧವಿಧವಾದ ಹಸಿರಾದ ತರಕಾರಿ ತಂದು ಮಾರುತ್ತಿದ.ಅದರಲ್ಲಿ ಪಕ್ಕದ ಮನೆಯ ಲತಾ ಕೇಳಿದಳು ಏನ್ರಿ ನಂದಿನಿ ಮೇಡಂ ನೀವು ಹೀಗೆಲ್ಲ ರಸ್ತೆಗಳಲ್ಲಿ ಮಾರಾಟ ಮಾಡುವ ರೈತರ ಹತ್ತಿರ ತರಕಾರಿ ಖರೀದಿ ಮಾಡುತ್ತೀರಾ? ಅಯ್ಯೋ ನಮ್ಮ ಇಮೇಜ್ ಹೋಗುತ್ತೆ ರಿ.. ನಾನು ಮಾತ್ರ ತರಕಾರಿಯಿಂದ ಹಿಡಿದು ಕೊಲಡ್ರಿಂಕ್ಸ್ , ಚಪ್ಪಲಿ, ಬಟ್ಟೆ, ಹೀಗೆ ಬ್ಯೂಟಿ ಪಾರ್ಲರ್, ಸಿನಿಮಾ ಕೂಡ ಅಲ್ಲೆ.ಇತ್ತ ಹಳ್ಳಿಯಿಂದ ತರಕಾರಿ ಮಾರಲು ಬಂದ ರೈತ ಗಾಬರಿಇಂದ ಕೇಳಿದ ಅಮ್ಮ ನನಗೆ ತುಂಬಾ ಹುಷಾರಿಲ್ಲ ಮಾಲ್ ನಲ್ಲಿ ಯಾವ ಡಾಕ್ಟರ್ ಇದಾರೆ ಬೇಗ ಹೇಳಿ? ಇನ್ನು ಮುಂದೆ ನಾನೂ ಪ್ರತಿ ಖರೀದಿಗೂ ಮಾಲ್ ಗೆ ಹೋಗುವೆ. ಅಷ್ಟರಲ್ಲಿ ಆ ಕಡೆಯಿಂದ ಸರಸ್ವತಿ ಒಂದು ಕಟ್ಟು ಪಾಲಕ್ ಸೊಪ್ಪು ಹಾಗೂ ಟೊಮ್ಯಾಟೋ ತಗೊಂಡು ಕಾರ್ ನಿಂದ ಇಳಿದು ನಮ್ಮ ಕಡೆ ಬಂದಳು, ಎಲ್ಲಿಗೆ ಹೋಗಿದ್ದೀರಾ? ಅಂತ ಕೇಳಿದಾಗ ತರಕಾರಿ ತರಲು ಮಾಲ್ ಗೆ ಹೋಗಿದ್ದೆ ಕಣೆ. ಒಂದು ಕಟ್ಟು ಪಾಲಾಕಿನ ಸೊಪ್ಪು 25 ರೂಪಾಯಿ,ಕೆಜಿ ಗೆ 100 ರೂಪಾಯಿ ಟೊಮೇಟೊ ತಂದಿದ್ದೀನಿ ಅಂದಳು. ರೈತ ಗಾಬರಿ ಗೊಂಡು ಅಲ್ಲ ತಾಯಿ ನಾವು ಬೆಳೆದು ನಿಮ್ಮ ಬಾಗಿಲವರೆಗೆ ತಂದ ಪಲಾಕೂ ಸೊಪ್ಪಿನ ಬೆಲೆ ಕೇವಲ ₹5 ಕಣಮ್ಮ. ಮಾಲ್ ಗಳಲ್ಲಿ ಇಷ್ಟು ದುಬಾರಿ ಬೆಲೆಗೆ ಯಾಕೆ?ಅಲ್ಲಿ ಎಲ್ಲವೂ ಫ್ರೆಶ್ ಮತ್ತು ಹೈಜಿನ್ ಇರೋದು.ನಿನಗೇನು ಗೊತ್ತು ಕಣಪ್ಪ? ನಾವು ಡಿಗ್ರಿ ಆದವರು ನಮ್ಮ ಸ್ಟೇಟಸ್ ಮೆಂಟೈನ್ ಮಾಡಬೇಕು ಗೊತ್ತಾ? ಅಲ್ಲ ಮಾ ವಿಷಪುರಿತ ಕೆಮಿಕಲ್ ಹಾಕಿದ ಎಷ್ಟೋ ತಿಂಗಳುಗಟ್ಟಲೆ ಪ್ಯಾಕ್ ಮಾಡಿಟ್ಟ ಆಹಾರ ಹಿಂದೆ ಮುಂದೆ ಯೋಚನೆ ಮಾಡದೆ ಮಾಲ್ಗಳಲ್ಲಿ ಹಣ ಸುರಿತಿವಿ ಇಮೇಜ್ಗಾಗಿ.ಉತ್ತಮ ಆರೋಗ್ಯಕ್ಕೆ ಫ್ರೆಶ್ ಇರುವ ಹಸಿರು ತರಕಾರಿ ಹಾಗೂ ಹಣ್ಣುಗಳು ಬೇಕು ಇವುಗಳಿಗೆ ಬೆಲೆ ಕಟ್ಟಲು ಸಾಧ್ಯ ಇಲ್ಲ ಇವುಗಳ ಬಗ್ಗೆ ಮನವರಿಕೆ ಮಾಡಿಕೊಡುವುದು ಪಾಲಕರ ಜವಾಬ್ದಾರಿ. ಆದರೆ ಎಷ್ಟೋ ಆಹಾರ ವಿಷಪೂರಿತ ಪದಾರ್ಥಗಳು ರಾಸಾಯನಿಕಗಳಿಂದ ಕೂಡಿದ್ದು,ಬಣ್ಣ ಬಣ್ಣದ ಪೋಟ್ಟನಣಗಳಲ್ಲಿ ನಮ್ಮನ್ನು ಆಕರ್ಶಿಸುವಂತ್ತೆ ಪ್ಯಾಕ್ ಮಾಡಿ ಮಾರುತ್ತಿರುವರು.ಚಾಕಲೇಟ್, ಕೋಲ್ಡ್ ಡ್ರಿಂಕ್ಸ್, ಫಾಸ್ಟ್ ಫುಡ್ ಯಾಕೆ ಬೇಕು ಮಾ? ಮಕ್ಕಳಿಗೆ ಬೇಕಾಗುವ ಪಾನಕ, ರುಚಿರುಚಿಯಾದ ತಿಂಡಿ ತಿನಿಸು,ತರಕಾರಿ ಕಾಳುಗಳನ್ನು ತಿನಿಸಿ ಮಾ ಅಂದಾಗ. ಏನಯ್ಯ್ ಹಳ್ಳಿಯವ ನಿನಗೆ ಕೆಮಿಕಲ್ ಜಂಕ್ ಫುಡ್ ಬಗ್ಗೆ ಇಷ್ಟೆಲ್ಲಾ ಗೊತ್ತಾ?ಆಗ ರೈತ ಹೇಳಿದ ಮಾ ನಾನು Msc ಓದಿದ್ದು,ಫಾಸ್ಟ್ ಫುಡ್ ಆಹಾರ ತಯಾರಿಸುವ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತಿದ್ದೆ. ಆಹಾರ ತಯಾರಿಸುವಾಗ ಬಳಸುವ ವಿಪುರಿತ ಕೆಮಿಕಲ್ ಬಳಕೆ ನೋಡಿ ಲಕ್ಷಗಟ್ಟಲೆ ಸಂಬಳ ತೆಗೆದುಕೊಳ್ಳುವ ಬದಲು, ನಮ್ಮ ಗ್ರಾಮಕ್ಕೆ ಬಂದು, ಸಾವಯವ ಕ್ರಷಿ ಇಂದ ಬೆಳೆ ತರಕಾರಿಗಳನ್ನು ಬೆಳೆದು, ಮನೆ ಮನೆಗೆ ಬಂದು ತರಕಾರಿ ಮಾರುವದರಲ್ಲಿ ತೃಪ್ತಿ ಇದೆ ಮಾ.
ಹಿಂದೆ ಮುಂದೆ ಯೋಚಿಸದೆ ಎಷ್ಟೆ ಬೆಲೆಯಾದರೂ ಸರಿ ಮಾಲ್ ನಲ್ಲಿ ಹೋಗಿ ತರುತ್ತಿದ್ದೇವೆ. ತರಕಾರಿ ಕೂಡ ಮಾಲ್ಗಳ್ಳಲ್ಲೆ.ಆದ್ರೆ ಅದೇ ರೈತ ಮಾರುಕಟ್ಟೆಗೆ, ಮನೆ ಬಾಗಿಲಿಗೆ ಬಂದು ತರಕಾರಿ ಮಾರುತಿರವಾಗ ರೂಪಾಯಿಗೆ ವಾದ ಮಾಡುತ್ತೇವೆ. ಇದು ಯಾವ ನ್ಯಾಯ. ರೈತನ ಸ್ಥಾನದಲ್ಲಿ ನಿಂತ್ತು ನೋಡಿ ಅವರ ನೋವು ಏನು ಅಂತ.ಎಲ್ಲವೂ ಆಡಂಬರ. ನಮ್ಮ ಜೀವನದಲ್ಲಿ ಆಡಂಬರಕ್ಕೆ ಒತ್ತು ನೀಡದೇ ನೈಜತೆಗೆ ಒತ್ತು ನೀಡಿದಾಗ ಬದುಕು ಅರ್ಥಪೂರ್ಣ ಎನಿಸುತ್ತದೆ.ಎಲ್ಲವೂ ನಮ್ಮ ಯೋಚನೆಗೆ ಬಿಟ್ಟಿದ್ದು.ಸಹಜತೆ.ನೈಜತೆ.ನಮ್ಮ ಜೀವನ ಆಗಬೇಕಲ್ಲವೇ.?
ನಂದಿನಿ ಸನಬಾಳ್
ಶಿಕ್ಷಕಿ
ಪಾಳಾ
ಕಲಬುರಗಿ ಜಿಲ್ಲೆ