ರಾಜ್ಯದ ಸರ್ಕಾರಿ ನೌಕರರಿಗೆ ಲೋಕಸಭಾ ಚುನಾವಣೆಯ ನಂತರ ಸಿಗಲಿದೆ ಏಳನೇ ವೇತನ ಆಯೋಗದ ಕುರಿತು ಶೀಘ್ರದಲ್ಲೇ ಶುಭ ಸುದ್ದಿ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು ಬೆಂಗಳೂರಿನಲ್ಲಿ ಮಾತನಾಡಿದ ಅವರು ಏಳನೇ ವೇತನ ಆಯೋಗವನ್ನು ಜುಲೈ ಅಂತ್ಯದೊಳಗೆ ಜಾರಿಗೊಳಿಸುವುದಾಗಿ ಹೇಳಿದರು..
ಶಿಕ್ಷಕರ ಕ್ಷೇತ್ರಕ್ಕೆ ಹಿಂದಿನಿಂದಲೂ ಕಾಂಗ್ರೆಸ್ ನ್ಯಾಯ ಒದಗಿಸುತ್ತಾ ಬಂದಿದ್ದು ನೌಕರರ ಪರವಾಗಿ ನಮ್ಮ ರಾಜ್ಯ ಸರ್ಕಾರ ಇದೆ ಎಂದರು ಇನ್ನೂ ಶೀಘ್ರ ಒಪಿಎಸ್, ಎನ್ಪಿಎಸ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಇವುಗಳ ಜಾರಿಗೆ ಕೆಲವು ಕಾನೂನಾತ್ಮಕ ಚರ್ಚೆಗಳಾಗಬೇಕಿದೆ. ಶೀಘ್ರದಲ್ಲೇ ಜಾರಿಗೊಳಿಸಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಲಿದೆ ಎಂದರು.