ಮುಖ್ಯ ಶಿಕ್ಷಕ 14 ದಿನ ನ್ಯಾಯಾಂಗ ಬಂಧನ!!!
ಸರಕಾರಿ ಶಾಲೆಯ ಮುಖ್ಯ ಶಿಕ್ಷಕನನ್ನು ಅಮಾನತ್ ಮಾಡಿ ಆದೇಶ ಮಾಡಿದ್ರು ಡಿಡಿಪಿಐ…
ಈ ಶಾಲೆಯಲ್ಲಿ ಇದ್ದಿದ್ದು 85 ವಿದ್ಯಾರ್ಥಿಗಳು… ಇವತ್ತು ಶಾಲೆಗೆ ಹಾಜರಾಗಿದ್ದು ಮಾತ್ರ 10 ಜನ ವಿದ್ಯಾರ್ಥಿಗಳು…
ಚಿಕ್ಕಬಳ್ಳಾಪುರ: ತಾಲ್ಲೂಕಿನ ಸರ್ಕಾರಿ ಶಾಲೆಯೊಂದರ ಏಳನೇ ತರಗತಿ ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ..
ಆರೋಪಿ ಮುಖ್ಯ ಶಿಕ್ಷಕನನ್ನು 14 ದಿನ ನ್ಯಾಯಾಂಗ ಬಂಧನ ಒಪ್ಪಿಸಲಾಗಿದೆ. ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲಕಿಯರ ಬಾಲ ಮಂದಿರದಲ್ಲಿ ಇರಿಸಲಾಗಿದೆ.
ಡಿಡಿಪಿಐ ಬೈಲಾಂಜನೇಯ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಹಾಗೂ ಅಧಿಕಾರಿಗಳ ತಂಡ ಬುಧವಾರ ಶಾಲೆಗೆ ಭೇಟಿ ನೀಡಿ ಶಿಕ್ಷಕರು, ಮಕ್ಕಳಿಂದ ಮಾಹಿತಿ ಪಡೆಯಿತು.
ಶಾಲೆಯಲ್ಲಿ 85 ವಿದ್ಯಾರ್ಥಿಗಳು ಕಲಿಯುತ್ತಿದ್ದರೂ ಶಾಲೆ ಆರಂಭದ ಮೊದಲ ದಿನವಾದ ಬುಧವಾರ 10 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು.
‘ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ ಎಂದು ತಾಲ್ಲೂಕಿನ ಹಳ್ಳಿಗಳಲ್ಲಿ ಆಯಾ ಶಾಲೆಯ ಶಿಕ್ಷಕರು ಮನೆ ಮನೆಗೆ ಹೋಗಿ ಪೋಷಕರ ಮನವೊಲಿಸುತ್ತಿದ್ದರು. ಈಗ ಯಾವ ಮುಖ ಹೊತ್ತು ಪೋಷಕರ ಮನೆಗಳ ಬಳಿ ಹೋಗಬೇಕು’ ಎಂದು ಬಹಳಷ್ಟು ಶಿಕ್ಷಕರು ಅಧಿಕಾರಿಗಳ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.