ಚಿಕ್ಕುಂಬಿಯಲ್ಲಿ ಸವದತ್ತಿ ತಾಲೂಕ ಮಟ್ಟದ ಶಾಲಾ ಪ್ರಾರಂಭೋತ್ಸವ.
ಸವದತ್ತಿ ಃ ತಾಲೂಕಿನ ಚಿಕ್ಕುಂಬಿ ಗ್ರಾಮದಲ್ಲಿ ಹಬ್ಬದ ಸಡಗರದೊಂದಿಗೆ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.ಗ್ರಾಮದಲ್ಲಿ ವಿವಿಧ ವೇಷಭೂಷಣಗಳನ್ನು ಹೊಂದಿದ ಮಕ್ಕಳು ಚಕ್ಕಡಿಯಲ್ಲಿ ಮೆರವಣಿಗೆಯಲ್ಲಿ ಹೊರಟಿದ್ದು ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಯಶವಂತಕುಮಾರ್.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ.ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ.ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ.ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯಲ್ಲವ್ವ ಮಾರುತಿ ಉಪ್ಪಾರ ಪಿ.ಡಿ.ಓ ಆನಂದ ಸುತಗಟ್ಟಿ.ಪಿ.ಎಸ್.ಐ.ಆನಂದ ಕ್ಯಾರಕಟ್.ಚಿಕ್ಕುಂಬಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಗಂಗಪ್ಪ ಸಿರಸಂಗಿ.ಪ್ರೌಢಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪುಂಡಲೀಕ ಕುರಿ.ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಸುಧೀರ ವಾಗೇರಿ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿರಣ ಕುರಿ.ಸದಸ್ಯರುಗಳಾದ ಡಿ ಎ ಮೇಟಿ. ಮೈಲಾರಪ್ಪ.ಚುಂಚನೂರ ಮಹಿಳಾ ಮತ್ತು ಮಕ್ಕಳ ಅಧಿಕಾರಿ ಸುನಿತಾ ಪಾಟೀಲ ತಾಲೂಕಾ ಯೋಜನಾ ಅಧಿಕಾರಿಗಳಾದ ಮಾರುತಿ ಚೌಡಪ್ಪನವರ.ಜಿಲ್ಲಾ ಪಂಚಾಯತಿ ಅಭಿಯಂತರಾದ ಕದ್ರಾಪುರ.ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ವ್ಹಿ.ಸಿ.ಹಿರೇಮಠ,ಬಿ.ಐ.ಚಿನಗುಡಿ.ರಾಜು ಭಜಂತ್ರಿ.ರತ್ನ ಸೇತಸನದಿ.ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರುಗಳಾದ ಎಸ್.ಬಿ.ಬೆಟ್ಟದ.ಸಿ.ವ್ಹಿ.ಬಾರ್ಕಿ.ವೈ.ಬಿ.ಕಡಕೋಳ.ದುರಗಪ್ಪ ಭಜಂತ್ರಿ.ಸಂಪನ್ಮೂಲ ವ್ಯಕ್ತಿಗಳಾದ ಡಿ.ಟಿ.ಮರಕುಂಬಿ.ಕುಶಾಲ್ ಮುದ್ದಾಪುರ.ಎಚ್.ಎಲ್.ನಧಾಪ್.ರವಿ ನಲವಡೆ.ಗ್ರಾಮ ಪಂಚಾಯತಿಯ ಸರ್ವಸದಸ್ಯರುಗಳು.ಶಿಕ್ಷಣ ಸಂಯೋಜಕರಾದ ಜಿ.ಎಂ.ಕರಾಳೆ.ಪ್ರಶಾಂತ ಹಂಪನ್ನವರ.ಪ್ರೌಢಶಾಲಾ ಮುಖ್ಯಾಪಾಧ್ಯಾಯರಾದ ಎಂ.ವೈ.ಇಂಗಳೇಶ್ವರ.ಚುಳಕಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಆರ್.ಗುಡದಪ್ಪನವರ.ವಿವಿಧ ಶಾಲೆಗಳ ಪ್ರಧಾನ ಗುರುಗಳು ಉಪಸ್ಥಿತರಿದ್ದರು.ವಿವಿಧ ರೂಪಕಗಳು ವಾದ್ಯಮೇಳಗಳೊಂದಿಗೆ ಮಕ್ಕಳ ಪ್ರಭಾತ ಫೇರಿ ಗಮನ ಸೆಳೆಯಿತು. ನಂತರ ಶಾಲೆಯ ಮುಖ್ಯದ್ವಾರದಲ್ಲಿ ಗುಲಾಬಿ ಹೂ ಹಾಗೂ ಸಿಹಿ ನೀಡುವ ಮೂಲಕ ಮಕ್ಕಳನ್ನು ಶಾಲೆಗೆ ಸ್ವಾಗತಿಸಲಾಯಿತು.
ನಂತರ ವೇದಿಕೆಯಲ್ಲಿ ಜರುಗಿದ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿಕ್ಕುಂಬಿಯ ಪರಮಪೂಜ್ಯ ಶ್ರೀಮದ್ ಅಭಿನವ ನಾಗಲಿಂಗ ಮಹಾಸ್ವಾಮಿಗಳು ವಹಿಸಿದ್ದರು.ಈ ಸಂದರ್ಭದಲ್ಲಿ ಶಾಲೆಗೆ ಟ್ರೇಝರಿ ನೀಡಿದ ನಿಂಗಪ್ಪ ಬಡ್ಲಿ.ಉರ್ದು ಶಾಲೆಯ ಶಿಕ್ಷಕರಾದ ಎಚ್.ಐ.ಅಸುಂಡಿಯವರ ನಿವೃತ್ತಿ ನಿಮಿತ್ತ ಸನ್ಮಾನಿಸಿ ಗೌರವಿಸಲಾಯಿತು.ನಂತರ ನಡೆದ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ರೂಪಕವನ್ನು ಪ್ರದರ್ಶಿಸಲಾಯಿತು.ಮಕ್ಕಳ ಈ ರೂಪಕ ಗಮನ ಸೆಳೆಯಿತು.ಇದೇ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳನ್ನು ಸಾಂಕೇತಿಕವಾಗಿ ವೇದಿಕೆಯಲ್ಲಿ ವಿತರಿಸಲಾಯಿತು.ಕಾರ್ಯಕ್ರಮದ ಪ್ರಾರಂಭದಲ್ಲಿ ಚಿಕ್ಕುಂಬಿಯ ಪರಮಪೂಜ್ಯ ಶ್ರೀಮದ್ ಅಭಿನವ ನಾಗಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಯ ಆಚರಿಸಲಾಯಿತು.ಕಾರ್ಯಕ್ರಮದ ಪ್ರಾರಂಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ ಮಾತನಾಡಿದರು.ನಂತರ ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಯಶವಂತಕುಮಾರ ಮಾತನಾಡುತ್ತ “ಶಾಲೆಯ ಅಭಿವೃದ್ಧಿಯಲ್ಲಿ ಪಂಚಾಯತಿಗಳ ಪಾತ್ರವನ್ನು ತಿಳಿಸುತ್ತ ಶಿಕ್ಷಕರು ಪಾಠ ಮಾಡುವ ಮೂಲಕ ಶಿಕ್ಷಣ ನೀಡುವರು.ಮಕ್ಕಳ ಶಿಕ್ಷಣ ಮತ್ತು ಸಂಸ್ಕಾರವನ್ನು ಪಾಲಕರು ನೀಡಬೇಕು.ಪಾಲಕರ ಜವಾಬ್ದಾರಿ ಇಂದಿನ ಮೋಬೈಲ್ ಯುಗದಲ್ಲಿ ಬಹಳ ಇರುವುದನ್ನು ಉದಾಹರಣೆ ಸಹಿತವಾಗಿ ತಿಳಿಸುತ್ತ ಮಕ್ಕಳ ಕಾಳಜಿ ಅವರ ಅಭ್ಯಾಸದತ್ತ ಪಾಲಕರ ಗಮನ ಇರುವುದು ಸೂಕ್ತ ಎಂಬುದನ್ನು ತಾವು ಸವದತ್ತಿ ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿಯಾದ ನಂತರದ ದಿನಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿ ಗ್ರಾಮದ ಸೌಂದರ್ಯವನ್ನು ಉಳಿಸುವಲ್ಲಿ ಪ್ರತಿಯೊಬ್ಬರ ಪಾತ್ರದ ಮಹತ್ವವನ್ನು ತಿಳಿಸಿದರು.
ಪಿಎಸ್ಐ ಆನಂದ ಕ್ಯಾರಕಟ್ಟಿ ಮಾತನಾಡಿ “ಮಕ್ಕಳಿಗೆ ಮೊದಲ ಪಾಠಶಾಲೆ ಮನೆ.ಮನೆಯಲ್ಲಿ ಅವರಿಗೆ ಸಂಸ್ಕಾರ ನೀಡುವುದು ಇಂದಿನ ಯುಗದಲ್ಲಿ ಅವಶ್ಯಕವಿದೆ.ದೈಹಿಕ ಶಿಕ್ಷಣಕ್ಕೂ ಕೂಡ ಶಾಲೆಯಲ್ಲಿ ಅವಕಾಶವಿದೆ.ಪ್ರತಿಯೊಬ್ಬರೂ ಮನೆಗೊಂದು ಗಿಡ ನೆಟ್ಟು ಪರಿಸರ ಉಳಿಸಿ”ಎಂದು ಪಾಲಕರ ಶಿಕ್ಷಕರ ಮಹತ್ವ ತಿಳಿಸುತ್ತ ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ ಮಾತನಾಡುತ್ತ “ಮಗು ಬಾವಿಯಲ್ಲಿ ಬಿದ್ದರೆ ರಕ್ಷಿಸಬಹುದು ಮೊಬೈಲ್ ಗೀಳಿನಲ್ಲಿ ಬಿದ್ದರೆ ರಕ್ಷಿಸುವುದು ಕಷ್ಟ. ತಂದೆ ತಾಯಿ ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಶಿಕ್ಷಕರು ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುವರು.ಎರಡೂ ಕೈ ಸೇರಿದಾಗ ಚಪ್ಪಾಳೆ ಆದಂತೆ ಶಿಕ್ಷಕರು ಮತ್ತು ಪಾಲಕರ ಜವಾಬ್ದಾರಿ ಇಂದು ಬಹಳ ಮಹತ್ವದ್ದಾಗಿದೆ ಶೈಕ್ಷಣಿಕ ಬಲವರ್ಧನೆ ವರ್ಷವನ್ನಾಗಿ ಈ ವರ್ಷವನ್ನು ಆಚರಿಸುತ್ತಿದ್ದು ಕಲಿಕೆ ಪರಿಣಾಮಕಾರಿಯಾಗುವಲ್ಲಿ ಶಿಕ್ಷಕ ಪಾಲಕ ಮಕ್ಕಳು ಎಲ್ಲರ ಕಾಳಜಿ ಮಹತ್ವದ್ದು ಎಂಬುದನ್ನು ತಿಳಿಸುತ್ತ ತಾಲೂಕ ಮಟ್ದದ ಶಾಲಾ ಪ್ರಾರಂಭೋತ್ಸವವನ್ನು ಹಬ್ಬದ ಸಡಗರದಲ್ಲಿ ಕೈಗೊಂಡ ಚಿಕ್ಕುಂಬಿ ಗ್ರಾಮದ ಸಕಲ ಗುರುಹಿರಿಯರಿಗೂ ಪಂಚಾಯತಿ ಎಸ್.ಡಿ.ಎಂ.ಸಿಯವರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ದಿವ್ಯ ಸಾನಿಧ್ಯವನ್ನು ವಹಿಸಿದ್ದ ಚಿಕ್ಕುಂಬಿಯ ಪರಮಪೂಜ್ಯ ಶ್ರೀಮದ್ ಅಭಿನವ ನಾಗಲಿಂಗ ಮಹಾಸ್ವಾಮಿಗಳು,ಆಶೀರ್ವಚನ ನೀಡುತ್ತ “ ಮಕ್ಕಳ ಬಗ್ಗೆ ಪಾಲಕರು ಇಂದು ಕಾಳಜಿ ವಹಿಸುವುದು ಬಹಳ ಮಹತ್ವದ್ದು.ನಮ್ಮ ಊರಿನ ಎಲ್ಲ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ.ತಮ್ಮ ಶ್ರೀಮಠದ ವತಿಯಿಂದ ನಡೆಸಲಾಗುತ್ತಿರುವ ಶಾಲೆಯಲ್ಲಿ ಈ ವರ್ಷದಿಂದ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.ಇದು ನಮ್ಮ ಊರು ಎಂಬ ಭಾವನೆಯಿಂದ ಎಲ್ಲ ಅಧಿಕಾರಿಗಳು ಇಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ.ಈ ಹಬ್ಬದ ವಾತಾವರಣಕ್ಕೆ ಕಾರಣರಾದ ಗ್ರಾಮದ ಜನತೆ ಸದಾಕಾಲವೂ ಎಲ್ಲ ಕಾರ್ಯಗಳಿಗೆ ಸಹಕಾರ ನೀಡುತ್ತಿರುವುದನ್ನು ಸ್ಮರಿಸಿದರು.
ಕಾರ್ಯಕ್ರಮವನ್ನು ಪ್ರೌಢಶಾಲಾ ಶಿಕ್ಷಕ ಸುಧೀರ ವಾಗೇರಿ ನಿರೂಪಿಸಿದರು.ಸಾಂಸ್ಕೃತಿಕ ಮತ್ತು ಪಠ್ಯ ಪುಸ್ತಕ. ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಸಾಧನೆ ತೋರಿದ ಮಕ್ಕಳ ಸನ್ಮಾನ ಶಾಲೆಗೆ ದೇಣಿಗೆ ನೀಡಿದ ಮಹನೀಯರ ಹಾಗೂ ನಿವೃತ್ತರ ಸನ್ಮಾನ ಕಾರ್ಯಕ್ರಮವನ್ನು ಎಂ.ಎಸ್.ಅಮೋಘಿಮಠ ನಡೆಸಿಕೊಟ್ಟರು.,ಪ್ರಭಾರಿ ಮುಖ್ಯೋಪಾಧ್ಯಾಯರಾದ ಎನ್.ಜಿ.ತೊಪ್ಪಲದ ಸ್ವಾಗತಿಸಿದರು.ಸಿ.ವ್ಹಿ.ಬಾರ್ಕಿ ವಂದಿಸಿದರು.