ಸಮಸ್ತ
ಆಜೀವ ಸದಸ್ಯರು,
ಕರ್ನಾಟಕ ಸರಕಾರಿ ಗ್ರಾಮೀಣ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುಬ್ಬಳ್ಳಿ
ಇವರಿಗೆ,
ಜೂನ 9 ರಂದು ಜರುಗಲಿರುವ, ಸರ್ವಸದಸ್ಯರ ಸಭೆಯಲ್ಲಿ,
ರಾಜ್ಯ ಘಟಕದ ಪದಾಧಿಕಾರಿಗಳ ಆಯ್ಕೆಗಾಗಿ ಅರ್ಜಿಯನ್ನು ಸಲ್ಲಿಸುವ ಕುರಿತು,
ಆತ್ಮೀಯರೇ ಜೂನ 9 ರಂದು ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಮಠದ ಸಭಾಂಗಣದಲ್ಲಿ ಜರುಗಲಿರುವ, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ, ಸರ್ವ ಸದಸ್ಯರ ಸಭೆಯಲ್ಲಿ, ತಾವುಗಳು, ಯಾವ ಯಾವ ಹುದ್ದೆಗೆ ಆಯ್ಕೆ ಬಯಸಲು ಇಶ್ಚಿಸುವಿರಿ, ತಾವುಗಳು ಲಿಖಿತ ರೂಪದಲ್ಲಿ ಒಂದು ಪತ್ರ ಬರೆದು ಉನ್ನತ ಸಮಿತಿಯ ಪದಾಧಿಕಾರಿಗಳಲ್ಲಿ ಒಬ್ಬರಾದ ಶ್ರೀ ಗೋವಿಂದ ಜುಜಾರೆ ಅವರಿಗೆ ಕಳಿಸಲು ಕೋರಿದೆ.
ಮೊಬೈಲ್ ಸಂಖ್ಯೆ 9148213979.
ಜೂನ 3 ಸಂಜೆ 6 ಗಂಟೆಯ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಕಳಿಸಬೇಕಾದ ವಿಳಾಸ.
ಗೋವಿಂದ ಜುಜಾರೆ
ನಿವೃತ್ತ ಮುಖ್ಯೋಪಾಧ್ಯಾಯರು
# 123, 5th cross
Mayur nagar, Anandanagar ,Old Hubli.
ಗೆ, ಉನ್ನತ ಸಮಿತಿ
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುಬ್ಬಳ್ಳಿ ಇವರಿಗೆ,
ವಿಷಯ, ರಾಜ್ಯಾದ್ಯಕ್ಷ ಹುದ್ದೆಗೆ ಆಯ್ಕೆ ಬಯಸಿದ ಕುರಿತು,
ಮಾನ್ಯರೇ
ನಾನು ಅಂದರೆ ಶ್ರೀ ಹನುಮಂತಪ್ಪ ಮೇಟಿ ಆಜೀವ ಸದಸ್ಯರು, ಆಜೀವ ಸದಸ್ಯತ್ವದ ಸಂಖ್ಯೆ,———- ನಾನು ಜೂನ 9 ರಂದು ಹುಬ್ಬಳ್ಳಿಯಲ್ಲಿ ಜರುಗಲಿರುವ ಸರ್ವಸದಸ್ಯರ ಸಭೆಯಲ್ಲಿ, ನಾನು ರಾಜ್ಯಾದ್ಯಕ್ಷ ಹುದ್ದೆಗೆ ಆಯ್ಕೆ ಬಯಸಿರುವೆ, ಆದ್ದರಿಂದ ನನ್ನ ಅರ್ಜಿಯನ್ನು, ರಾಜ್ಯಾದ್ಯಕ್ಷರ ಹುದ್ದೆಗೆ ಪರಿಗಣಿಸಿ,
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ.
ಹುದ್ದೆಗಳು.
ರಾಜ್ಯಾದ್ಯಕ್ಷರು 1
ಪ್ರಧಾನ ಕಾರ್ಯದರ್ಶಿ 1
ಕೋಶಾದ್ಯಕ್ಷರು 1
ಗೌರವಾದ್ಯಕ್ಷರು 1
ಕಾರ್ಯಾದ್ಯಕ್ಷರು 2
ಮಹಾಪೋಷಕರು 2
ರಾಜ್ಯ ಉಪಾಧ್ಯಕ್ಷರು 5
ರಾಜ್ಯ ಸಹಕಾರ್ಯದರ್ಶಿಗಳು 5
ರಾಜ್ಯ ಸಂಘಟನೆಯ ಕಾರ್ಯದರ್ಶಿಗಳು 5
ಈ ಮೇಲಿನಂತೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಉನ್ನತ ಸಮಿತಿಯ ಶ್ರೀ ಅಶೋಕ ಸಜ್ಜನ, ಶ್ರೀ ಎಲ್ ಐ ಲಕ್ಕಮ್ಮನವರ ಶ್ರೀ ಗೋವಿಂದ ಜುಜಾರೆ ಶ್ರೀ ಡಿ ಎಸ್ ಭಜಂತ್ರಿ ಶ್ರೀ ಡಿಟಿ ಬಂಡಿವಡ್ಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.