ಚಾರ್ಜ ತೆಗೆದುಕೊಳ್ಳಲು ಶಿಕ್ಷಕರ ಮೇಲೆ BEO ರವರ ಬಲ ಪ್ರಯೋಗ..ಖೇದ ವ್ಯಕ್ತಪಡಿಸಿ ಖಂಡಿಸಿದ ಮಾಜಿ ರಾಜ್ಯಾಧ್ಯಕ್ಷ
ಬೆಳಗಾವಿ:
ಶಾಲಾ ಮುಖ್ಯಶಿಕ್ಷಕರು ನಿವೃತ್ತಿ ಹೊಂದಿದಾಗ ಹಿರಿಯ ಸಹಶಿಕ್ಷಕರು ಮುಖ್ಯಶಿಕ್ಷಕರು ಪ್ರಭಾರ ವಹಿಸಿಕೊಳ್ಳುವ ಬಗ್ಗೆ,
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯಶಿಕ್ಷಕರು, ಹಿರಿಯ ಮುಖ್ಯಶಿಕ್ಷಕರು ಭಡ್ರಿ ಹಾಗೂ ವರ್ಗಾವಣೆ/ ನಿವೃತ್ತಿ
ಹೊಂದಿದಾಗ ಶಾಲೆಯಲ್ಲಿ ಸೇವೆಯಲ್ಲಿ ಹಿರಿಯರಾದ ಸಹಶಿಕ್ಷಕರು ಪ್ರಭಾರವನ್ನು ವಹಿಸಿಕೊಳ್ಳಬೇಕು. ಇತ್ತೀಚೆಗೆ ಹಲವಾರು ಶಾಲೆಗಳಲ್ಲಿ ಮುಖ್ಯಶಿಕ್ಷಕರ ಪ್ರಭಾರವನ್ನು ವಹಿಸಿಕೊಳ್ಳಲು ಹಿರಿಯ ಸಹಶಿಕ್ಷಕರು ನಿರಾಕರಿಸುತ್ತಿರುವದು ಗಮನಕ್ಕೆ ಬಂದಿರುತ್ತದೆ. ಪ್ರಭಾರವನ್ನು ವಹಿಸಿಕೊಳ್ಳಲು ನಿರಾಕರಿಸುವ ಶಿಕ್ಷಕರಿಗೆ ಕಾಲಮಿತಿ ಬಡ್ತಿ, ಸ್ವಯಂಚಾಲತಿ ಬಡ್ತಿ, 20.25.30 ವರ್ಷದ ವಿಶೇಷ ವೇತನ ಬಡ್ತಿ ಮತ್ತು ಸ್ಥಗಿತ ವೇತನ ಬಡ್ತಿ ಮಂಜೂರಿಸುವದನ್ನು ತಡೆಹಿಡಿಯಲಾಗುವದು. ಆದ್ದರಿಂದ ಹಿರಿಯ ಸಹಶಿಕ್ಷಕರು ಮುಖ್ಯಶಿಕ್ಷಕರ ಪ್ರಭಾರ ವಹಿಸಿಕೊಂಡು ಸುಗಮ ಆಡಳಿತಕ್ಕೆ ಅನುವು ಮಾಡಿಕೊಡಲು ಆದೇಶಿಸಿದೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಈ ಆದೇಶ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.ಶಿಕ್ಷಕ ವೃಂದಲ್ಲಿ ವಿರೋಧ ವ್ಯಕ್ತವಾಗುತ್ತಿದೆ..
ಭಡ್ತಿಯನ್ನು ನಿರಾಕರಿಸಿದಂತೆ ಚಾರ್ಜ ತೆಗೆದುಕೊಳ್ಳುವದನ್ನು ನಿರಾಕರಿಸಬಹುದಾಗಿದೆ ..ಭಡ್ತಿ ಮತ್ತು ಚಾರ್ಜ ತೆಗೆದುಕೊಳ್ಪುವುದು ಕಡ್ಡಾಯವಲ್ಲ. ಆರ್ಥಿಕ ಸೌಲಭ್ಯದ ಭಡ್ತಿಗಳನ್ನು ತಡೆ ಹಿಡಿಯಲಾಗುವುದು ಎಂದು ಬಿ.ಇ.ಓ.ರವರು ಹೊರಡಿಸಿರುವ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕೆಂದು ಕರ್ನಾಟಕ ಸರಕಾರಿ ಗ್ತಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯಾಧ್ಯಕ್ಷರಾದ ಅಶೋಕ.ಎಮ್.ಸಜ್ಜನ.ಒತ್ತಾಯಿಸಿದ್ದಾರೆ.