ಶಿಕ್ಷಕ ಲೋಕಾಯುಕ್ತ ಬಲೆಗೆ!! ಕ್ಷೇತ್ರ ಶಿಕ್ಷಣಾಧಿಕಾರಿ ಪರಾರಿ…
ಮತ್ತೊಂದು ಪ್ರಕರಣದಲ್ಲಿ ಪೋನ ಪೇ ಮೂಲಕ ಲಂಚ ಪಡೆದಿದ್ದ ಶಿಕ್ಷಣ ಇಲಾಖೆ ಇಬ್ಬರು FDA ಲೋಕಾಯುಕ್ತ ಬಲೆಗೆ..
ಕಲಬುರಗಿ: ಜಿಲ್ಲೆಯ ಆಳಂದದಲ್ಲಿ ನಿವೃತ್ತ ಶಿಕ್ಷಕಿರೊಬ್ಬರ ಪಿಂಚಣಿಗಾಗಿ ಲಂಚ ಪಡೆಯುತ್ತಿದ್ದ ಬಿಇಒ ಹಣಮಂತ ರಾಠೋಡ ಅವರ ಆಪ್ತ, ಶಿಕ್ಷಕ ರಾಧಾಕೃಷ್ಣ ಲೋಕಾಯುಕ್ತ ಬಲೆಗೆ ಬಿದ್ದಿದಾರೆ. ಬಿಇಒ ಹಣಮಂತ ತಲೆಮರೆಸಿಕೊಂಡಿದ್ದಾರೆ.
50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ನಿವೃತ್ತ ಶಿಕ್ಷಕಿಯ ಪತಿ ಯಶವಂತ ಜಮಾದಾರ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಇಬ್ಬರು ಸಿಬ್ಬಂದಿ ಬಂಧನ
ವಿಜಯಪುರದಲ್ಲಿ ಹತ್ತನೇ ತರಗತಿ ಅಂಕಪಟ್ಟಿ ನಕಲುಪ್ರತಿ ನೀಡಲು ಫೋನ್ ಪೇ ಮೂಲಕ ಲಂಚ ಸ್ವೀಕರಿಸಿದ ಪ್ರೌಢ ಶಿಕ್ಷಣ ಮಂಡಳಿಯ ಎಫ್ ಡಿಎಗಳಾದ ಶಿವಶಂಕರಯ್ಯ ನೆಪ್ಪರಾಗಿ, ಜಟಿಂಗರಾಯ ಲೋಕಾಯುಕ್ತ ಬಲೆಗೆ ಶನಿವಾರ ಬಿದ್ದಿದ್ದಾರೆ.
2019ರಲ್ಲಿ ತೇರ್ಗಡೆ ಹೊಂದಿದ್ದ ವಿದ್ಯಾರ್ಥಿಯೊಬ್ಬ ಕಳೆದು ಹೋದ ತನ್ನ ಮೂಲ ಅಂಕಪಟ್ಟಿ ಬದಲಿಗೆ, ನಕಲು ಪ್ರತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಇಬ್ಬರು ಸಿಬ್ಬಂದಿ 5,000 ಆನ್ಲೈನ್ನಲ್ಲಿ ಹಣ ಕಟ್ಟಬೇಕು ಎಂದು ಹೇಳಿ ಶುಕ್ರವಾರ ಸಂಜೆ ಫೋನ್ ಪೇ ಮುಖಾಂತರ 3,000 ರೂ. ಮುಂಗಡ ಹಣ ಪಡೆದಿದ್ದರು…