ಆದಿತ್ಯ ಮಿಲ್ಕ ಮಾಲಿಕ ಅಕಾಲಿಕ ನಿಧನ..
ಉದ್ಯಮಿ ನಿಧನಕ್ಕೆ ಕಂಬನಿ ಮಿಡಿದ ಕರುನಾಡಿನ ಜನತೆ…
ಬೆಳಗಾವಿ: ಬೆಳಗಾವಿಯ ಪ್ರಸಿದ್ಧ ಆದಿತ್ಯ ಮಿಲ್ಕ್ ಮಾಲೀಕ ಶಿವಕಾಂತ ಸಿದ್ನಾಳ (49) (Shivkant Sidnala) ಶನಿವಾರ ನಿಧನರಾಗಿದ್ದಾರೆ.
ಮಾಜಿ ಸಂಸದ ದಿವಂಗತ ಎಸ್.ಬಿ. ಸಿದ್ನಾಳ ಅವರ ಪುತ್ರ ಹಾಗೂ ವಿ.ಆರ್.ಎಲ್. ಸಮೂಹ ಸಂಸ್ಥೆಯ ಚೇರ್ಮನ್ ವಿಜಯ ಸಂಕೇಶ್ವರ ಅವರ ಅಳಿಯರಾಗಿರುವ ಶಿವಕಾಂತ ಸಿದ್ನಾಳ, ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ಅವರು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಶಿವಕಾಂತ್ ಸಿದ್ನಾಳ್ ಅವರು 2004ರಲ್ಲಿ ವಿಜಯ ಸಂಕೇಶ್ವರ ಅವರ ಕನ್ನಡ ನಾಡು ಪಕ್ಷದಿಂದ ಕಿತ್ತೂರು ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧೆಗಿಳಿದು ಗಮನ ಸೆಳೆದಿದ್ದರು. ಅಲ್ಲದೆ, ಸಾಕಷ್ಟು ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದರು.
ಶಿವಕಾಂತ್ ಸಿದ್ನಾಳ್ ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ವಿಜಯ ಸಂಕೇಶ್ವರ ಅವರು ಬೆಂಗಳೂರಿನಿಂದ ಆಗಮಿಸುತ್ತಿದ್ದು, ಅವರ ಆಗಮನದ ಬಳಿಕ ಅಂತ್ಯಕ್ರಿಯೆ ಕುರಿತು ನಿರ್ಧರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.