SSLC ಪರೀಕ್ಷಾ ಕೇಂದ್ರಕ್ಕೆ ಅಕ್ರಮವಾಗಿ ಪ್ರವೇಶಿಸಿದ ಶಿಕ್ಷಕನನ್ನು ಮನೆಗೆ ಕಳುಹಿಸಿ ಶಿಕ್ಷಣ ಇಲಾಖೆ…
ಸರ್ಕಾರಿ ಕೆಲಸ ಮಾಡೋದ ಬಿಟ್ಟು!! ಇವರಿಗೆ ಏಕೆ ಬೇಕಿತ್ತು ಅಕ್ರಮ ಪ್ರವೇಶ!!!
(ಅಫಜಲಪುರ ಜಿಲ್ಲೆ) ಕಲ್ಬುರ್ಗಿ: ತಾಲ್ಲೂಕಿನ ಶಿರವಾಳ ಗ್ರಾಮದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದೊಳಗೆ ಅಕ್ರಮವಾಗಿ ಪ್ರವೇಶಿಸಿದ ತಾಲ್ಲೂಕಿನ ಭಂಕಲಗಾ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಭೀಮಾಶಂಕರ್ ಮೇತ್ರಿ ಅವರನ್ನು ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಅಮಾನತು ಮಾಡಿದ್ದಾರೆ.
ಶಿರವಾಳ ಗ್ರಾಮದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ನಿರ್ಬಂಧಿತ ಪ್ರದೇಶದಲ್ಲಿ ಶಿಕ್ಷಕರು ಓಡಾಡುತ್ತಿದ್ದರು. ಹೀಗಾಗಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರು ಶಿಫಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಕ ಭೀಮಾಶಂಕರ್ ಅವರನ್ನು ಡಿಡಿಪಿಐ ಅಮಾನತು ಮಾಡಿದ್ದಾರೆ