ಕರ್ಕಶ ಶಬ್ದ ಮಾಡುವ ಬೈಕ್ಗಳಿಗೆ ಬಿಸಿ ಮುಟ್ಟಿಸಿದ ಪೋಲಿಸರು..
ವಾಹನ ಸವಾರರಿಗೆ ಎಚ್ಚರಿಕೆ!!
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಈಗ ಶಬ್ದ ಮಾಲಿನ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಬೈಕ್ ಮೂಲಕ ಕರ್ಕಶ ಶಬ್ದ ಮಾಡಿ ಅವಳಿನಗರದಲ್ಲಿ ಶಬ್ದ ಮಾಲಿನ್ಯ ಮಾಡುವ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.
ಹೌದು, ಡಿಸಿಪಿ ಟ್ರಾಫಿಕ್ ಆ್ಯಂಡ್ ಕ್ರೈಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕರ್ಕಶ ಶಬ್ದ ಮಾಡುವ ಬೈಕ್ ಸವಾರರ ಬೈಕ್ ಸೈಲೆನ್ಸರ್ ವಶಕ್ಕೆ ಪಡೆದು ರೋಡ್ ರೂಲರ ಮೂಲಕ ಪುಡಿ ಪುಡಿ ಮಾಡಿ ಶಬ್ದ ಮಾಲಿನ್ಯ ಮಾಡದಂತೆ ಬಿಸಿ ಮುಟ್ಟಿಸಿದ್ದಾರೆ.
ಈಗಾಗಲೇ ಬೇಕಾಬಿಟ್ಟಿಯಾಗಿ ಶಬ್ದ ಮಾಡಿ ಬೈಕ್ ಚಾಲನೆ ಮಾಡುವ ಮೂಲಕ ಜನರಿಗೆ ತೊಂದರೆ ಕೊಡುವ ಬೈಕ್ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದು ಸಂಚಾರಿ ಪೊಲೀಸರು ಖಡಕ್ ಎಚ್ಚರಿಕೆ ನೀಡಿದರು.