ಅಮ್ಮಿನಬಾವಿ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವ
ಮಾ.29 ರಿಂದ ಪುರಾಣ ಪ್ರವಚನ, ಧರ್ಮ ಚಿಂತನ ಸಮಾವೇಶ, ವಿಶೇಷ ಪೂಜೆಯ ಆಯೋಜನೆ
ಧಾರವಾಡ : ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗ್ರಹ ಹಿರೇಮಠದ ಮಹಾತಪಸ್ವಿ ಕರ್ತೃ ಶ್ರೀಗುರುಶಾಂತಲಿಂಗ ಶಿವಯೋಗಿಗಳ ಪ್ರಥಮ ಜಾತ್ರಾ ಮಹೋತ್ಸವ ಏಪ್ರಿಲ್-12ರಂದು ಜರುಗಲಿದ್ದು, ಇದರ ಅಂಗವಾಗಿ ಮಾರ್ಚ್-29 ರಿಂದ ಕಲಬುರ್ಗಿ ಶ್ರೀಶರಣಬಸವೇಶ್ವರ ಪುರಾಣ ಪ್ರವಚನ ನಡೆಯಲಿದೆ. ಕಲಬುರ್ಗಿ ಜಿಲ್ಲೆ ಸೂಗೂರು ಶ್ರೀರುದ್ರಮುನೇಶ್ವರ ಸಂಸ್ಥಾನ ಹಿರೇಮಠದ ಡಾ. ಚೆನ್ನರುದ್ರಮನಿ ಶಿವಾಚಾರ್ಯ ಸ್ವಾಮೀಜಿ ಪುರಾಣ ಪ್ರವಚನ ನೀಡಲಿದ್ದಾರೆ.
ಮಾ. 29 ರಂದು ಸಂಜೆ 6-30ಕ್ಕೆ ಕಲಘಟಗಿ ಹನ್ನೆರೆಡುಮಠದ ಶ್ರೀರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಪುರಾಣ ಪ್ರವಚನ ಉದ್ಘಾಟಿಸುವರು. ಹಾವೇರಿ ಜಿಲ್ಲೆ ನೆಗಳೂರು ಸಂಸ್ಥಾನ ಹಿರೇಮಠದ ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಮುಳುಮುತ್ತಲ-ಯಾದವಾಡ ಸಿದ್ಧಾರೂಢಮಠದ ಡಾ. ಆನಂದ ಸ್ವಾಮೀಜಿ ಪಾಲ್ಗೊಳ್ಳುವರು. ಎಪ್ರಿಲ್-8ರಂದು ಸಂಜೆ 6-30ಕ್ಕೆ ಪುರಾಣ ಪ್ರವಚನದ ಮಂಗಲಗೊಳ್ಳಲಿದ್ದು, ವಿಜಯನಗರ ಜಿಲ್ಲೆ ಹಂಪಸಾಗರ ನವಲಿಹಿರೇಮಠದ ಶ್ರೀಅಭಿನವ ಶಿವಲಿಂಗ ರುದ್ರಮನಿ ಶಿವಾಚಾರ್ಯ ಸ್ವಾಮೀಜಿ, ಇನಾಮಹೊಂಗಲ ವಿರಕ್ತಮಠದ ಶ್ರೀಅಭಿನವ ಸಿದ್ಧಲಿಂಗ ಸ್ವಾಮೀಜಿ, ಮಂಟೂರು ರಾಮಲಿಂಗೇಶ್ವರಮಠದ ಶ್ರೀಮಹಾಂತಲಿಂಗ ಸ್ವಾಮೀಜಿ ಪಾಲ್ಗೊಳ್ಳುವರು.
ಉದ್ಘಾಟನೆ : ಎಪ್ರಿಲ್-9ರಂದು ಸಂಜೆ 6-30ಕ್ಕೆ ಪ್ರಥಮ ಜಾತ್ರಾ ಮಹೋತ್ಸವವನ್ನು ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸುವರು. ಮುರಗೋಡ ದುರುದುಂಡೇಶ್ವರಮಠದ ಶ್ರೀನೀಲಕಂಠ ಸ್ವಾಮೀಜಿ, ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶ್ರೀಕುಮಾರ ವಿರೂಪಾಕ್ಷ ಸ್ವಾಮೀಜಿ, ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ನವಲಗುಂದ ಪಂಚಗ್ರಹ ಹಿರೇಮಠದ ಶ್ರೀಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ನರಗುಂದ ಪಂಚಗೃಹ ಹಿರೇಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಳ್ಳುವರು.
ಎಪ್ರಿಲ್-10ರಂದು ರಂದು ಸಂಜೆ 6-30ಕ್ಕೆ ಜನಜಾಗೃತಿ ಭಾವೈಕ್ಯ ಧರ್ಮ ಸಮಾವೇಶವನ್ನು ವರೂರು ನವಗ್ರಹತೀರ್ಥ ಜೈನ್ ಮಠದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಪಟ್ಟದಾರ್ಯ ಸ್ವಾಮೀಜಿ ಉದ್ಘಾಟಿಸಲಿದ್ದು, ತಿಪಟೂರು ತಾಲೂಕಿನ ನೊಣವಿನಕೆರೆ ಕಾಡುಸಿದ್ಧೇಶ್ವರಮಠದ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ, ದೊಡ್ಡವಾಡ ಹಿರೇಮಠದ ಜಡೇಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಜಿಲ್ಲೆ ಬೇರುಗುಂಡಿ ಬ್ರಹನ್ಮಠದ ಶ್ರೀರೇಣುಕಮಹಾಂತ ಶಿವಾಚಾರ್ಯ ಸ್ವಾಮೀಜಿ, ಕಲಬುರ್ಗಿ ಜಿಲ್ಲೆ ಬೆಳಗುಂಪಿ ಬ್ರಹನ್ಮಠದ ಶ್ರೀಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮೀಜಿ, ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿಜಯಾನಂದ ಸರಸ್ವತಿ ಹಾಗೂ ಉಪ್ಪಿನಬೆಟಿಗೇರಿಯ ಇಸ್ಲಾಂ ಧರ್ಮಗುರು ಹಜರತ್ ಆರಿಫ್ಹುಲ್ಹಕ್ಷಾ ಖಾದ್ರ್ರಿ ಚಿಸ್ತಿ ಭಾಗವಹಿಸುವರು.
ಏಪ್ರೀಲ್-11 ರಂದು ಸಂಜೆ 6-30ಕ್ಕೆ ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನಿಧ್ಯದಲ್ಲಿ ಧರ್ಮೋತ್ತೇಜಕ ಸಮಾರಂಭ ನಡೆಯಲಿದೆ. ಸುಳ್ಳ ಪಂಚಗೃಹ ಹಿರೇಮಠದ ಶ್ರೀಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಿರಕೋಳ ಹಿರೇಮಠದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಮೈಸೂರು ಅರಮನೆ ಜಪದಕಟ್ಟಿಮಠದ ಮುಮ್ಮಡಿ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕುಂದಗೋಳ ಪಂಚಗೃಹ ಹಿರೇಮಠದ ಶ್ರೀಶಿಥಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಳ್ಳುವರು. ಮಾರ್ಚ್-29 ರಿಂದ ಏಪ್ರಿಲ್-12ರವರೆಗೆ ಪ್ರತಿನಿತ್ಯದ ಧರ್ಮ ಸಮಾರಂಭದಲ್ಲಿ ಅಮ್ಮಿನಬಾವಿಯ ಶ್ರೀಸಂಸ್ಥಾನ ಪಂಚಗ್ರಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಜರಿದ್ದು ಉಪದೇಶಾಮೃತ ನೀಡುವರು.
ಗುರುರಕ್ಷೆ ಗೌರವ : ಸಮಾಜದ ವಿವಿಧ ಕ್ಷೇತ್ರಗಳ ವಿವಿಧ ಗಣ್ಯರಿಗೆ ಅಮ್ಮಿನಬಾವಿ ಸಂಸ್ಥಾನ ಪಂಚಗ್ರಹ ಹಿರೇಮಠದ ವತಿಯಿಂದ ಗುರುರಕ್ಷೆಯ ಗೌರವ ನೀಡಲಾಗುವುದು. ವೀರೇಶ್ಕುಮಾರ ಮಳಲಿ, ಅಂದಾನಯ್ಯ ಮಠದ, ಮಡಿವಾಳಯ್ಯ ಶಹಪೂರಮಠ ಅವರ ಸಂಗೀತ ಸೇವೆಯ ಜೊತೆಗೆ ಸೃಷ್ಟಿ ಕಾಜಗಾರ ಹಾಗೂ ಹುಬ್ಬಳ್ಳಿಯ ಶ್ರೇಯಾ ಲುಕ್ ಭರತನಾಟ್ಯ ಪ್ರದರ್ಶನ ನೀಡುವರು.
ಪ್ರಥಮ ರಥೋತ್ಸವದ ಉದ್ಘಾಟನೆ.
ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳ ಅಮೃತ ಹಸ್ತದಿಂದ ಏಪ್ರೀಲ್-12ರಂದು ಶುಕ್ರವಾರ ಸಂಜೆ 4-30 ಗಂಟೆಗೆ ಅಮ್ಮಿನಬಾವಿಯ ಸಂಸ್ಥಾನ ಪಂಚಗೃಹ ಹಿರೇಮಠದ ಪ್ರಥಮ ರಥೋತ್ಸವದ ಉದ್ಘಾಟನೆ ನಡೆಯಲಿದ್ದು, ನಾಡಿನ ವಿವಿಧ ಭಾಗಗಳ ಮಠಾಧೀಶರು ಪಾಲ್ಗೊಳ್ಳುವರು.