ಕರ್ತವ್ಯಕ್ಕೆ ದ್ರೋಹ ಬಗೆದ ಶಿಕ್ಷಕಕರನ್ನು ತಕ್ಷಣವೇ ಅಮಾನತ್ ಮಾಡಿದ ಶಿಕ್ಷಣ ಇಲಾಖೆ..
ಯಾದಗಿರಿ:
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ:25-03-2024 ರಂದು ಸರಕಾರಿ ಪದವಿ ಪೂರ್ವ ಕಾಲೇಜು (ಬಾಲಕರ) ಹುಣಸಗಿ ತಾ|ಸುರಪುರದಲ್ಲಿ ನಡೆಯುತ್ತಿರುವ ಎಸ್.ಎಸ್.ಎಲ್.ಸಿ. (016QA) ಪ್ರಥಮ ಭಾಷೆ ಪರೀಕ್ಷಾ ನಡೆಯುತ್ತಿದ್ದು, ಮಾನ್ಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಯಾದಗಿರಿ ರವರು ವೆಬ್ ಕಾಸ್ಟಿಂಗ್ ಸಿ.ಸಿ.ಕ್ಯಾಮರ ವಿಕ್ಷಣೆ ಮಾಡಿದಾಗ ಕೊಠಡಿ ಸಂಖ್ಯೆ-11 ರ ಕೋಣೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡುತ್ತಿರುವುದು ಕಂಡು ಬಂದಿರುತ್ತದೆ. ಸದರಿ ಕೊಠಡಿ ಮೇಲ್ವಿಚಾರಕರಾಗಿ ಶ್ರೀ ಸಾಹೇಬಗೌಡ ಉಕ್ಕಾಲೆ ಸ.ಶಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏವೂರ ತಾಕಿಸುರಪುರ ಇವರು ಕರ್ತವ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ನಕಲು ಮಾಡುತ್ತಿರುವುದು ಕಂಡು ಬಂದರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ, ಹಾಗೂ ಮುಖ್ಯ ಅಧಿಕ್ಷಕರ ಗಮನಕ್ಕು ತಂದಿರುವುದಿಲ್ಲ. ಇವರ ಮೇಲೆ ಸೂಕ್ತ ಕ್ರಮ ವಹಿಸಲು ಉಲ್ಲೇಖ(01) ರಂತೆ ಮಾನ್ಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಯಾದಗಿರಿ ಸೂಚಿಸಿರುತ್ತಾರೆ.
ಉಲ್ಲೇಖ(02)ರಂತೆ,ಮಾನ್ಯ ಅಧ್ಯಕ್ಷರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಬೆಂಗಳೂರು ರವರ ಸುತ್ತೋಲೆ ಆದೇಶದಲ್ಲಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಕೊಠಡಿಗಳಿಗೆ ಪ್ರವೇಶಿಸುವ ಮುನ್ನ ಕೊಠಡಿಗಳನ್ನು ಪರಿಶೀಲಿಸುವುದು ಹಾಗೂ ಪರೀಕ್ಷಾ ಕೊಠಡಿಯಲ್ಲಿ ಯಾವುದೇ ಪರೀಕ್ಷಾ ಅವ್ಯವಹಾರ ಕಂಡುಬಂದಲ್ಲಿ ತಕ್ಷಣವೇ ಮುಖ್ಯ ಅಧೀಕ್ಷಕರ ಗಮನಕ್ಕೆ ತಂದು ನಿಯಮಾನುಸಾರ ಕ್ರಮ ತೆಗೆದುಕೊಳ್ಳಲು ಮುಖ್ಯ ಅಧೀಕ್ಷಕರಿಗೆ ಸಹಾಯ ನೀಡುವುದು ಎಂದು ನಿರ್ದೇಶನವಿರುತ್ತದೆ.
ಶ್ರೀ ಸಾಹೇಬಗೌಡ ಉಕ್ಕಾಲಿ ಸ.ಶಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏವೂರ ತಾಳಿಸುರಪುರ ಇವರು ಕೊಠಡಿ ಮೇಲ್ವಿಚಾರಕರು ಕೋಣೆ ಸಂಖ್ಯೆ-11 ರಲ್ಲಿ ಮಾನ್ಯ ನಿರ್ದೇಶಕರು, (ಪರೀಕ್ಷೆಗಳು) ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಮಲ್ಲೇಶರಂ, ಬೆಂಗಳೂರು ರವರ ಆದೇಶವನ್ನು ಉಲ್ಲಂಘಿಸಿ ಪರೀಕ್ಷಾ ಪವಿತ್ರತೆ ಕಾಪಾಡುವಲ್ಲಿ ವಿಫಲರಾಗಿದ್ದು ಬೇಜವಬ್ದಾರಿತನ ಹಾಗೂ ಮೇಲ್ನೋಟಕ್ಕೆ ಕರ್ತವ್ಯ ಲೋಪ ಎಸಗಿರುವದು ಕಂಡುಬಂದಿರುವದರಿಂದ ಇವರ ಮೇಲೆ ಶಿಸ್ತಿನ ಕ್ರಮ ಜರುಗಿಸುವದು ಸಮಂಜಸವಾದ ಪ್ರಯುಕ್ತ ಈ ಕೆಳಗಿನಂತೆ ಆದೇಶ.
ಸಂಖ್ಯೆ ಇ5/ಆಡಳಿತ/ಸ.ಶಿ/ಎಸ್.ಎಸ್.ಎಲ್.ಸಿ/ಕ.ಲೊ/32/2023-24,
20-25-03-2024
ಪೀಠಿಕೆಯಲ್ಲಿ ವಿವರಿಸಿದ ಅಂಶಗಳ ಮೇರೆಗೆ, ಶ್ರೀ ಸಾಹೇಬಗೌಡ ಉಕ್ಕಾಲೆ ಸ.ಶಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏವೂರ ತಾಕಿಸುರಪುರ ಇವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ನಿಯಮ 10 (1) ರನ್ನಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಮಂಜುನಾಥ ಹೆಚ್.ಟಿ. ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಯಾದಗಿರಿ ಆದ ನಾನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿರಿಸಿದ್ದೇನೆ, ಸದರಿಯವರು ಕ.ನಾ.ಸೇ.ನಿ.98 ರಂತೆ ಜೀವನಾಂಶ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ ಮತ್ತು ಸಕ್ಷಮ ಪ್ರಾಧಿಕಾರಿಯ ಲಿಖಿತ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ.
ಉಪನಿರ್ದೇಶಕರು
ಶಾಲಾ ಶಿಕ್ಷಣ ಇಲಾಖೆ ಯಾದಗಿರಿ