ಆಡಳಿತ ನಡೆಸುತ್ತಿದ್ದ ಅರವಿಂದ ಕೇಜ್ರಿವಾಲ ಬಂಧನ ಅಸಂವಿಧಾನಿಕ:ಎಎಪಿ ಧಾರವಾಡ.
ಮಾನ್ಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರು ದೆಹಲಿಯ ಜನರ ಸರ್ವಾನುಮತದಿಂದ ಪ್ರಜಾಪ್ರಭುತ್ವದ ಅನುಗುಣವಾಗಿ ಆರಿಸಿ ಬಂದು ದೆಹಲಿಯ ಆಡಳಿತ ನಡೆಸುತ್ತಿದ್ದಾರೆ. ಅಬಕಾರಿ ಪ್ರಕರಣದಲ್ಲಿ ಈಗಾಗಲೇ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಮತ್ತು ಸಂಜಯ ಸಿಂಘ ಅವರನ್ನು ಹಲವಾರು ವರ್ಷದಿಂದ ಜಾರಿ ನಿರ್ದೇಶನಾಲಯ ಬಂಧಿಸಿದ್ದು ಇನ್ನುವರೆಗೆ ಲಂಚ ಸ್ವೀಕರಿಸಿದ್ದರ ಪುರಾವೆ ಸಿಕ್ಕಿಲ್ಲ. ಹೀಗಿರುವಾಗ ನೆನ್ನೆ ರಾತ್ರಿ ದೆಹಲಿ ಆಡಳಿತ ನಡೆಸುತ್ತಿದ್ದ ಶ್ರೀ ಅರವಿಂದ ಕೇಜ್ರಿವಾಲ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದು ಅತೀವ ಖಂಡನೀಯ.
ಇವತ್ತು ಧಾರವಾಡ ಜಿಲ್ಲೆಯ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಇದರ ವಿರೋಧವಾಗಿ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತ ತಹಶೀಲ್ದಾರ ಕಚೇರಿಗೆ (ಸುವರ್ಣ ಸೌಧ) ಬಂದು ತಹಶೀಲ್ದಾರ ಅವರ ವತಿಯಿಂದ ಸನ್ಮಾನ್ಯ ರಾಷ್ಟ್ರಪತಿಗಳಿಗೆ ಅರವಿಂದ ಕೇಜ್ರಿವಾಲ ಅವರನ್ನು ಬಂಧನ ಮುಕ್ತಗೊಳಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ಅನಂತಕುಮಾರ ಬುಗಡಿ, ಪ್ರವೀಣಕುಮಾರ ನಡಕಟ್ಟಿನ, ಬಸವರಾಜ ತೇರದಾಳ, ಮಲ್ಲಪ್ಪ ತಡಸದ, ಕಿಶೋರ ಶೆಟ್ಟಿ, ಹುಸೇನ ಬಾಷಾ, ಶಶಿಕುಮಾರ ಸುಳ್ಳದ, ರೇವಣಸಿದ್ದಪ್ಪ ಹುಬ್ಬಳ್ಳಿ, ಎಸ್. ಪೀ. ಹುಬ್ಲಿಕರ, ಪದ್ಮಾ ಹುಬ್ಲಿಕರ, ಸಂತೋಷ ಮಾನೆ, ಸಂಜೀವ ಬೆಳೆಗೆರಿ, ವಿಜಯ ಅಕ್ಕಳಕೊಟಿ, ಲಕ್ಷ್ಮಣ ನರಸಾಪುರ, ಕುಮಾರ ನೂಲ್ವಿ, ಶಿವಕುಮಾರ, ಮಹಮೂದ ಹರವಿ ಮತ್ತಿತರರು ಉಪಸ್ಥಿತರಿದ್ದರು