ಪಾನಿಪುರಿ ತಿಂದು 6 ವರ್ಷದ ಬಾಲಕ ಸಾವು!!19 ಮಕ್ಕಳು ಅಸ್ವಸ್ತ..
ಮಕ್ಕಳಿಗೆ ಪಾನಿಪುರಿ ನೀಡುವ ಮುನ್ನ ಎಚ್ಚರ..!!!
ದಾವಣಗೆರೆ -ಪಾನಿಪುರಿ ಸೇವಿಸಿ 6 ವರ್ಷದ ಬಾಲಕನೊರ್ವ ಸಾವಿಗೀಡಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.ಜಿಲ್ಲೆಯ
ಹರಿಹರ ತಾಲೂಕಿನ ಮಲೆಬೆನ್ನೂರಿನಲ್ಲಿ ಈ ಒಂದು ಘಟನೆ ನಡೆದಿದೆ.
ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥಗೊಂಡಿದ್ದ ಪ್ರಕರಣದಲ್ಲಿ 6 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಹಜರತ್ ಬಿಲಾಲ್ ಬಿನ್ ಇರ್ಫಾನ್(6)ಮೃತ ಬಾಲಕನಾಗಿದ್ದಾನೆ.
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಉಪವಾಸವಿದ್ದ ಮಕ್ಕಳು ಮಾರ್ಚ್ 15ರಂದು ಸಂಜೆ ಜಾಮಿಯಾ ಮಸೀದಿ ಬಳಿ ಪಾನಿಪೂರಿ ಸೇವಿಸಿದ್ದರು.
ಬಳಿಕ 19 ಮಕ್ಕಳು ಅಸ್ವಸ್ಥಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಲೆಬೆನ್ನೂರಿನಲ್ಲಿ ಪಾನಿಪೂರಿ ಸೇವಿಸಿದ ಬಳಿಕ ವಾಂತಿ ಭೇದಿ,ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ 19 ಮಕ್ಕಳನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇದೀಗ ಚಿಕಿತ್ಸೆ ಫಲಕಾರಿಯಾಗದೆ ಒಬ್ಬ ಬಾಲಕ ಕೊನೆಯುಸಿರೆಳೆದಿದ್ದಾನೆ.ಗಂಭೀರ ಸ್ಥಿತಿಯಲ್ಲಿದ್ದ ಮೂವರು ಮಕ್ಕಳು ಚೇತರಿಸಿಕೊಂಡಿದ್ದಾರೆ.ಇನ್ನೂ ಈ ಒಂದು ಘಟನೆ ಕುರಿತಂತೆ ಪೊಲೀಸರು ಸೂಕ್ತವಾದ ಕಾರಣವನ್ನು ಹುಡುಕಾಡುತ್ತಿದ್ದಾರೆ.