ಬೆಂಗಳೂರು: ಕರ್ನಾಟ ರಾಜ್ಯ ಸರಕಾರಿ ನೌಕರರ ಬಹು ನೀರಿಕ್ಷಿತ ಕೇಂದ್ರ ಸರ್ಕಾರಿ ನೌಕರರ ಸಮನಾದ ವೇತನ ಪಡೆದುಕೊಳ್ಳಬೆಕೆಂಬ ಉದ್ದೇಶದಿಂದ ಏಳನೇ ವೇತನ ಅಯೋಗದ ಮೇಲೆ ಅಪಾರ ನಂಬಿಕೆಯನ್ನು ಇಟ್ಟುಕೊಂಟಿದ್ದಾರೆ…
ಅಯೋಗ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ..ಆರ್ಥಿಕ ಇಲಾಖೆ ಶಿಫಾರಸು ಮಾಡಿದ ನಂತರ 7ನೇ ವೇತನ ಆಯೋಗ ಜಾರಿಯಾಗಲಿದೆ..ಈ ವರದಿಗೆ ವೃಂದ ಸಂಘಗಳಿಂದ ವಿರೋಧ ವ್ಯಕ್ತವಾಗುತ್ತಿದೆ.
ಗ್ರಾಮೀಣ ಭಾಗದ ಶಿಕ್ಷಕರಿಗೆ ಈ ವರದಿಯಿಂದ ಅನ್ಯಾಯವಾಗಿದೆ..
ವಿವಿಧ ವೃಂದಗಳ ವೇತನ ತಾರತಮ್ಯ ಹಾಗೂ ಇಲಾಖೆಗಳ ಬೇಡಿಕೆಗಳ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ನೀಡಿದ ಮನವಿಯನ್ನು ಪರಿಶೀಲಿಸಿ ಮತ್ತೊಂದು ಅಂತಿಮ ವರದಿಯನ್ನು ಆದಷ್ಟು ಶೀಘ್ರದಲ್ಲಿಯೇ ಆಯೋಗವು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಷಡಕ್ಷರಿಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ…
ರಾಜ್ಯ 7ನೇ ವೇತನ ಆಯೋಗದ ಪ್ರಮುಖ ಶಿಫಾರಸುಗಳು..
57ನೇ ವೇತನ ಆಯೋಗದ ಅಧ್ಯಕ್ಷರಾದ ಶ್ರೀ ಸುಧಾಕರ್ ರಾವ್ ಅವರು ದಿನಾಂಕ: 16-03-2024 ರಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ಆಯೋಗದ ವರದಿಯನ್ನು ಸಲ್ಲಿಸಿರುತ್ತಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳ ಪರಿಷ್ಕರಣೆಗಾಗಿ ಸಲ್ಲಿಸಿದ್ದ ಪ್ರಸ್ತಾವನೆಯ ಅಂಶಗಳನ್ನು ಪರಿಗಣಿಸಿ ಶಿಫಾರಸ್ಸಿನಲ್ಲಿ ಉಲ್ಲೇಖಿಸಿ, ಈ ಮುಂದಿನಂತೆ ಶಿಫಾರಸ್ಸು ಮಾಡಿದೆ..
ದಿನಾಂಕ: 01-07-2022ಕ್ಕೆ ಇದ್ದಂತೆ ರಾಜ್ಯ ಸರ್ಕಾರಿ ನೌಕರರ ಮೂಲ ವೇತನಕ್ಕೆ ಶೇ. 27.50 ರಷ್ಟು ಫಿಟ್ ಮೆಂಟ್ ಹೆಚ್ಚಿಸಲು ಶಿಫಾರಸ್ಸು.
ದಿನಾಂಕ: 01-07-2022ಕ್ಕೆ ಇದ್ದಂತಹ ಶೇ. 31% ತುಟ್ಟಿಭತ್ಯೆ ವಿಲೀನ ಹಾಗೂ ಮೇಲಿನ 27.50 ರಷ್ಟು ಸೇರಿ ಒಟ್ಟು ಶೇ. 58.50ರಷ್ಟು ಮೂಲ ವೇತನದಲ್ಲಿ ಹೆಚ್ಚಳ.
17,000-27,000-ಕ್ಕೆ ಹಾಗೂ ಗರಿಷ್ಠ ಮೂಲ ವೇತನವನ್ನು ರೂ. 1,04.600-00 ರಿಂದ 2. 2,41,200-00
ಸರ್ಕಾರಿ ನೌಕರರಿಗೆ ಹೊಸ ವೇತನ ಶ್ರೇಣಿ ಹಾಗೂ ಫಿಟ್ ಮೆಂಟ್ ಸೌಲಭ್ಯವನ್ನು ದಿ: 01-07-2022 ರಿಂದ ಕಾಲ್ಪನಿಕವಾಗಿ ಅನುಷ್ಠಾನಗೊಳಿಸಲು ಶಿಫಾರಸ್ಸು.
ವಾರ್ಷಿಕ ವೇತನ ಬಡ್ತಿ ದರವನ್ನು ಕನಿಷ್ಠ ರೂ. 400-00 ರಿಂದ ರೂ. 650-00 ಕ್ಕೆ ಹಾಗೂ ಗರಿಷ್ಠ ರೂ. 3100-00 ರಿಂದ ರೂ. 5,000-00ಕ್ಕೆ ಹೆಚ್ಚಳ.
ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ದಿನಾಂಕ: 01-07-2022 ರಿಂದ ಭಾರತ ಸರ್ಕಾರವು ಮಂಜೂರು ಮಾಡಿದ ಪ್ರತಿ ಶೇ.1 ರಷ್ಟು ತುಟ್ಟಿಭತ್ಯೆಗೆ ಶೇ. 0.722ರಷ್ಟು ನೀಡುವುದು.
ಭಾರತ ಸರ್ಕಾರವು ತನ್ನ ನೌಕರರಿಗೆ ಮುಂದೆ ವೇತನ ಪರಿಷ್ಕರಿಸಿದಾಗ ಕೇಂದ್ರ ವೇತನ ರಚನೆಯ ಆಧಾರದ ಮೇಲೆ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಕೇಂದ್ರ ಮಾದರಿಯ ವೇತನ ನೀಡಲು ಶಿಫಾರಸ್ಸು ಮಾಡಿದೆ. ..
ಅಂಗ ಪರಿಷ್ಕರಣೆಯಿಂದ ಹೆಚ್ಚಳವಾಗುವ ಮೂಲ ವೇತನಕ್ಕೆ ಮನೆ ಬಾಡಿಗೆ ಭತ್ಯೆಗಳನ್ನು ಕ್ರಮವಾಗಿ ‘ಎ’ ವರ್ಗದ ನಗರಗಳಿಗೆ ಶೇ.20%, ‘ಬಿ’ ವರ್ಗದ ನಗರಗಳಿಗೆ ಶೇ.15%, ‘ಸಿ’ ವರ್ಗದ ಪ್ರದೇಶಗಳಿಗೆ ಶೇ.7.5% ಶಿಫಾರಸ್ಸು.
ಪರಿಷ್ಕರಣೆಯಿಂದ ಹೆಚ್ಚಳವಾಗುವ ಮೂಲ ವೇತನಕ್ಕೆ ನಗರ ಪರಿಹಾರ ಭತ್ಯೆಗಳನ್ನು ಕ್ರಮವಾಗಿ ” ಮತ್ತು ‘ಬಿ’ ವೃಂದದ ನೌಕರರಿಗೆ ರೂ. 600-00 ರಿಂದ ರೂ. 900-00ಕ್ಕೆ ಮತ್ತು ‘ಸಿ ಮತ್ತು ‘ಡಿ’ ವೃಂದದ ನೌಕರರಿಗೆ ರೂ. 500-00 ರಿಂದ 2. 750-00ಕ್ಕೆ ಏರಿಕೆ.
ಸಮವಸ್ತ್ರ ಭತ್ಯೆ, ನಿಗದಿತ ಪ್ರಯಾಣ ಭತ್ಯೆ, ಸಾಗಣೆ ಭತ್ಯೆ, ದಿನಭತ್ಯೆ ಮತ್ತು ವರ್ಗಾವಣೆ ಅನುದಾನವನ್ನು ಹಾಲಿ ಇರುವ ದರಗಳಿಗೆ ಶೇ.25% ಹೆಚ್ಚಳ.
ವಿಕಲಚೇತನ ನೌಕರರಿಗೆ ಹಲವಾರು ಭತ್ಯೆಗಳು ಮತ್ತು ಸೌಲಭ್ಯಗಳನ್ನು ಹೆಚ್ಚಳಕ್ಕೆ ಶಿಫಾರಸ್ಸು.
ವಿಶೇಷಚೇತನ ಮಕ್ಕಳ ಶೈಕ್ಷಣಿಕ ಭತ್ಯೆಯನ್ನು ಪ್ರತಿ ತಿಂಗಳು ರೂ. 1000-00 ರಿಂದ ರೂ. 2000-00ಕ್ಕೆ ಹೆಚ್ಚಳಕ್ಕೆ ಶಿಫಾರಸ್ಸು.’
ನಾಲ್ಕು ಚಕ್ರ ವಾಹನ ಖರೀದಿ ಮುಂಡವನ್ನು ರೂ. 3.00 ಲಕ್ಷದಿಂದ ರೂ. 6.00 ಲಕ್ಷಕ್ಕೆ ಹಾಗೂ ದ್ವಿ-ಚಕ್ರ ವಾಹನಕ್ಕೆ ರೂ. 50,000-00 ರಿಂದ ರೂ. 80,000-00 ಗಳಿಗೆ ಹೆಚ್ಚಳ.
ಗೃಹನಿರ್ಮಾಣ ಮುಂಗಡವನ್ನು ‘ಎ’ ವೃಂದಕ್ಕೆ 65.00 ಲಕ್ಷ ಮತ್ತು ಇತರೆ ವೃಂದದ ನೌಕರರಿಗೆ ರೂ. 40.00 ಲಕ್ಷಗಳಿಗೆ ಹೆಚ್ಚಳ.
ನೌಕರರ ಸೇವಾವಧಿಯಲ್ಲಿ ಮೂರು ಭಾರಿ ಎಲ್.ಟಿ.ಸಿ. ಸೌಲಭ್ಯಕ್ಕೆ ಅವಕಾಶ.
ಗ್ರೂಪ್ ‘ಡಿ’ ಮತ್ತು ‘ಸಿ’ ವೃಂದದ ನೌಕರರಿಗೆ ಹಾಲಿ ಇದ್ದಂತಹ ವೈದ್ಯಕೀಯ ಭತ್ಯೆ 200-00, 500-00ಹೆಚ್ಚಳ.
ಸರ್ಕಾರಿ ನೌಕರರ ಅವಲಂಬಿತ ಕುಟುಂಬ ಸದಸ್ಯರು ಅನಾರೋಗ್ಯದ ಸಂದರ್ಭದಲ್ಲಿ ಆರೈಕೆ ಮಾಡಲು ಶೇ. 50% ವೇತನದೊಂದಿಗೆ 180 ದಿನಗಳ ‘ಆರೈಕೆ ರಜೆ’ ಎಂಬ ಹೊಸ ಯೋಜನೆಗೆ ಶಿಫಾರಸ್ಸು ಮಾಡಿದೆ.
ಸರ್ಕಾರಿ ಸೇವೆಗೆ ಸೇರುವ 2 ತಿಂಗಳ ಮೊದಲು ಮಗುವಿಗೆ ಜನ್ಮ ನೀಡಿದ ಮಹಿಳಾ ಸರ್ಕಾರಿ ನೌಕರರಿಗೆ ನವಜಾತ ಶಿಶುವಿನ ಹಾರೈಕೆಗಾಗಿ 18 ವಾರಗಳ ಹೆರಿಗೆ ರಜೆಗೆ ಶಿಫಾರಸ್ಸು ಮಾಡಿದೆ.
ಈ ಮೇಲ್ಕಂಡ ಎಲ್ಲಾ ಸೌಲಭ್ಯಗಳು ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ ರೀತಿಯಲ್ಲಿಯೇ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೂ ಅನ್ವಯಗೊಳಿಸಲು ಶಿಫಾರಸ್ಸು ಮಾಡಿದೆ.
ಮಾಸಿಕ ಪಿಂಚಣಿಯ ಪ್ರಮಾಣವು ಅಂತಿಮ ಮೂಲ ವೇತನದ ಶೇ. 50% ರಷ್ಟು ಹಾಗೂ ಕುಟುಂಬ ಪಿಂಚಣಿಯು ಶೇ.30% ಮುಂದುವರೆದು, ಕನಿಷ್ಠ ಪಿಂಚಣಿ ರೂ. 13,500-00 ಹಾಗೂ ಗರಿಷ್ಠ ಪಿಂಚಣಿ ರೂ. 1,20,600-00ಕ್ಕೆ ಪರಿಷ್ಕರಿಸಿದೆ.
70-80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯ ಹೆಚ್ಚುವರಿ ಶೇ. 10% ರಷ್ಟು ಶಿಫಾರಸ್ಸು ಮಾಡಿದೆ.
ಪಿಂಚಣಿದಾರರಿಗೆ ‘ಸಂಧ್ಯಾಕಿರಣ’ ಎಂಬ ಆರೋಗ್ಯ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಶಿಫಾರಸ್ಸು ಮಾಡಿದೆ. ಅಲ್ಲಿಯವರೆಗೆ ಮಾಸಿಕ ರೂ. 500-00ಗಳ ವೈದ್ಯಕೀಯ ಭತ್ಯೆ ನೀಡಲು ಶಿಫಾರಸ್ಸು ಮಾಡುತ್ತದೆ.
ಪಿಂಚಣಿದಾರರು ಮರಣ ಹೊಂದಿದಲ್ಲಿ ರೂ. 10,000-00 ಗಳ ಶವಸಂಸ್ಕಾರ ಮೊತ್ತವನ್ನು ನೀಡಲು ಶಿಫಾರಸ್ಸು.
ವಿವಿಧ ವೃಂದಗಳ ವೇತನ ತಾರತಮ್ಯ ಹಾಗೂ ಇಲಾಖೆಗಳ ಬೇಡಿಕೆಗಳ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ನೀಡಿದ ಮನವಿಯನ್ನು ಪರಿಶೀಲಿಸಿ ಮತ್ತೊಂದು ಅಂತಿಮ ವರದಿಯನ್ನು ಆದಷ್ಟು ಶೀಘ್ರದಲ್ಲಿಯೇ ಆಯೋಗವು ಸರ್ಕಾರಕ್ಕೆ ಸಲ್ಲಿಸಲಿದೆ…