ಜೈ ರಾಜವಂಶ ಅಭಿಮಾನಿಗಳ ಸಂಘ ಹುಬ್ಬಳ್ಳಿ ಯುವ ಸಾಮ್ರಾಜ್ಯ ವತಿಯಿಂದ ಕರ್ನಾಟಕ ರತ್ನ ಪವರ ಸ್ವಾರ್ ಡಾ|| ಪುನೀತ ರಾಜಕುಮಾರ ಅವರ ಜನ್ಮ ದಿನವನ್ನು ಹುಬ್ಬಳ್ಳಿಯಲ್ಲಿ ಆಚರಿಸಲಾಯಿತು…
ರಘು ವದ್ದಿ ನೇತೃತ್ವದಲ್ಲಿ ಸ್ಪೂರ್ತಿ ದಿನಾಚರಣೆ ಅಂಗವಾಗಿ ಅಪ್ಪು ಬಾಸ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಚನ್ನಮ್ಮ ವೃತ್ತದಲ್ಲಿ ಕೇಕ್ ಕಟ್ ಮಾಡಲಾಯಿತು. ಅಪ್ಪು ಬಾಸ್ ಅವರ ಪ್ರೀಯಕರವಾದ ಚಿಕನ್ ಬಿರಿಯಾನಿ ವಿತರಣೆಯ್ನು ಮಾಡಲಾಯಿತು..
ಪ್ರತಿವರ್ಷದಂತೆ ಈ ವರ್ಷವು ಕೂಡ ಜೈ ರಾಜವಂಶ ಅಭಿಮಾನಿ ಸಂಘದ ಸಂಸ್ಥಾಪಕ ರಾಜ್ಯಾದ್ಯಕ್ಷ, ಅಪ್ಪಟ ರಾಜವಂಶದ ಅಭಿಮಾನಿ ತಮ್ಮ ನೆಚ್ಚಿನ ರಘು ವದ್ದಿ ಮೂರು ಕ್ವಿಂಟಲ್ ಚಿಕನ್ ಬಿರಯಾನಿ ಮಾಡಿಸಿದ್ದರು. ಜನತಾ ಬಜಾರ್ ನಲ್ಲಿ ಚಿಕ್ಕದಾದ ಶಾಮಿಯಾನಾ ಹಾಕಿ ಅಪ್ಪು ಅಭಿಮಾನಿಗಳಿಗೆ ಚಿಕನ್ ಬಿರಯಾನಿ ವಿತರಿಸಿದ್ರು…
ಅಪ್ಪು ಬಾಸ್ ಗೆ ಜೈ, ಜೈ ರಾಜವಂಶ ಎಂದು ಜೈಕಾರ ಕೂಗುತ್ತಾ ಅಪ್ಪು ಬರ್ತಡೆಯನ್ನು ವಿಭಿನ್ನವಾಗಿ ಆಚರಿಸಲಾಯಿತು..
ನೂರಾರು ಅಪ್ಪು ಅಭಿಮಾನಿಗಳು, ಸಾರ್ವಜನಿಕರು ಬಿರಿಯಾನಿ ಸವಿದರು..